ಅಪಘಾತ: ಸ್ಥಳದಲ್ಲೇ ಮಗಳ ಸಾವು, ತಾಯಿಗೆ ಗಂಭೀರ ಗಾಯ

Posted By:
Subscribe to Oneindia Kannada

ಬೆಂಗಳೂರು, ಜನವರಿ. 01: ವೇಗವಾಗಿ ಬಂದ ಮಿನಿ ಬಸ್ಸೊಂದು ತಾಯಿ ಮಗಳಿಗೆ ಗುದ್ದಿದ ಪರಿಣಾಮ ಅಪಘಾತ ಸಂಭವಿಸಿದ್ದು, ಮಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದು, ತಾಯಿಗೆ ಗಂಭೀರ ಗಾಯಗಳಾದ ಘಟನೆ ಪೀಣ್ಯಾದ ಸಮೀಪದ ಗುರುವಾರ ನಡೆದಿದೆ.

ಲವಕುಶ ನಗರದಲ್ಲಿನ ಕಾಲೇಜಿನಲ್ಲಿ ಓದುತ್ತಿದ್ದ ಪ್ರಿಯದರ್ಶಿನಿ ಮೃತಪಟ್ಟ ವಿದ್ಯಾರ್ಥಿ. ಈಕೆಯ ತಾಯಿ ಶಾಂತಮ್ಮ ಅವರಿಗೆ ತೀವ್ರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.[ವೇಗಯುತ ದ್ವಿಚಕ್ರ ವಾಹನಗಳಿಗೆ ಬ್ರೇಕ್ ಹಾಕುತ್ತಾ ಸರ್ಕಾರ?]

accident

ತಾಯಿ ಶಾಂತಮ್ಮ ಮತ್ತು ಮಗಳು ಪ್ರಿಯದರ್ಶಿನಿ ಶಬರಿಮಲೆಗೆ ಹೋಗುವ ಮಗನನ್ನು ಕಳುಹಿಸಿಕೊಟ್ಟು 10.30 ವೇಳೆಗೆ ಮನೆಗೆ ವಾಪಾಸ್ಸಾಗುತ್ತಿದ್ದರು. ಆಗ ಮನೆಯ ಬಳಿ ಇರುವ ರಾಯಯ್ಯ ಎಕ್ಸ್ ಟೆನ್ಷನ್ ರಸ್ತೆ ದಾಟಲು ಮುಂದಾಗಿದ್ದಾರೆ. ಆಗ ವೇಗವಾಗಿ ಬಂದ ಮಿನಿ ಬಸ್ಸೊಂದು ತಾಯಿ ಮತ್ತು ಮಗಳಿಗೆ ಗುದ್ದಿದೆ.[ಅಪಘಾತ ತಡೆಯಲು ಎಚ್ ಡಿ ಕ್ಯಾಮರ ಅಳವಡಿಸಿದ ಪೊಲೀಸರು]

ವೇಗವನ್ನು ನಿಯಂತ್ರಿಸದ ಚಾಲಕ ಬಸ್ಸನ್ನು ಚಲಾಯಿಸಿದ್ದಾರೆ. ಇದರಿಂದ ಮಗಳು ಪ್ರಿಯದರ್ಶಿನಿ ಬಸ್ಸಿನ ಚಕ್ರದ ಅಡಿಗೆ ಸಿಲುಕಿ ಮೃತಪಟ್ಟಿದ್ದಾಳೆ.ತಾಯಿ ಶಾಂತಮ್ಮ ತೀವ್ರ ಗಾಯಗಳಾಗಿ ರಕ್ತಸ್ರಾವವಾಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಸ್ಸು, ಮತ್ತು ಚಾಲಕನನ್ನು ಪೀಣ್ಯಾ ಪೊಲೀಸರು ವಶಪಡಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
An 18 year old girl Priyadarshini killed in road accident and Mother Shanthamma was very injured when a speeding mini bus hitting to them in Peenya, Bengaluru on Thursday.
Please Wait while comments are loading...