ಬೆಂಗಳೂರಿನಲ್ಲಿ ಅಮ್ಮ : ಭಜನೆ, ಸತ್ಸಂಗ, ಧ್ಯಾನ, ದರ್ಶನ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 14 : ಅಮ್ಮ ಎಂದು ಖ್ಯಾತಿ ಪಡೆದಿರುವ ಮಾತಾ ಅಮೃತಾನಂದಮಯಿ ಅವರು ಎರಡು ದಿನಗಳ ಕಾಲ ಬೆಂಗಳೂರಿನ ಪ್ರವಾಸದಲ್ಲಿದ್ದಾರೆ. ಭಜನೆ, ಸತ್ಸಂಗ, ಧ್ಯಾನ ಮತ್ತು ದರ್ಶನ ಕಾರ್ಯಕ್ರಮಗಳನ್ನು ಮಠದಲ್ಲಿ ಹಮ್ಮಿಕೊಳ್ಳಲಾಗಿದೆ.

3ನೇ ಹಂತದ ಭಾರತ ಯಾತ್ರಾ ಕಾರ್ಯಕ್ರಮಕ್ಕೆ ಮಾರ್ಚ್ 14ರ ಸೋಮವಾರ ಬೆಂಗಳೂರಿನಲ್ಲಿ ಅಮ್ಮ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 10.30ಕ್ಕೆ ಆರಂಭವಾಗುವ ಕಾರ್ಯಕ್ರಮದಲ್ಲಿ ಸಚಿವ ಎಚ್‌.ಕೆ. ಪಾಟೀಲ್, ಬಿಬಿಎಂಪಿ ಮೇಯರ್ ಮಂಜುನಾಥ ರೆಡ್ಡಿ ಮುಂತಾದವರು ಪಾಲ್ಗೊಳ್ಳಲಿದ್ದಾರೆ. [ಮಾತಾ ಅಮೃತಾನಂದಮಯಿ ಬಗ್ಗೆ ವೀರೇಂದ್ರ ಹೆಗ್ಗಡೆ ಹೇಳಿದ್ದೇನು?]

amma in bengaluru

ಮಾರ್ಚ್ 14 ಮತ್ತು 15 ರಂದು ಅಮ್ಮ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದು, ಎರಡೂ ದಿನ ಬೆಳಗ್ಗೆ 10.30ರ ನಂತರ ಭಜನೆ, ಸತ್ಸಂಗ, ಧ್ಯಾನ ಮತ್ತು ದರ್ಶನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 3ನೇ ಹಂತದ ಯಾತ್ರಾದಲ್ಲಿ ಅಮ್ಮ ಭಾರತದ 10 ನಗರಗಳಿಗೆ ಭೇಟಿ ನೀಡಲಿದ್ದಾರೆ. ['ಅಪ್ಪುಗೆಯ ಅಮ್ಮ' ನವರ ಆಶ್ರಮದಲ್ಲಿ ಕಾಮದ ಘಮ]

ಮಠದ ವಿಳಾಸ : ಮಾತಾ ಅಮೃತಾನಂದಮಯಿ ಮಠ, ನಂ. 136, ಮಾತಾ ಅಮೃತಾನಂದಮಯಿ ಮಠ ರಸ್ತೆ, ಬೆಂಗಳೂರು ವಿವಿ ಹಿಂಭಾಗ, ಜ್ಞಾನ ಭಾರತಿ 2ನೇ ಹಂತ, ಉಳ್ಳಾಲ ಉಪನಗರ, ಬೆಂಗಳೂರು 560056. ಹೆಚ್ಚಿನ ಮಾಹಿತಿಗಾಗಿ 9480551070/9448571070. ['ನಮಾಮಿ ಗಂಗೆ' ಯೋಜನೆ ಮಾತಾ 'ಅಮ್ಮ' ಕಡೆಯಿಂದ ನೂರು ಕೋಟಿ!]

ಮಾರ್ಚ್ 18 ಮತ್ತು 19ರಂದು ಹೈದರಾಬಾದ್‌ನಲ್ಲಿ, ಮಾರ್ಚ್ 22 ಮತ್ತು 23ರಂದು ಪುಣೆಯಲ್ಲಿ, ಮಾರ್ಚ್ 26 ಮತ್ತು 27ರಂದು ಮುಂಬೈನಲ್ಲಿ 3ನೇ ಹಂತದ ಭಾರತ ಯಾತ್ರಾ ಕಾರ್ಯಕ್ರಮ ನಡೆಯಲಿದ್ದು, ಅಮ್ಮ ಅವುಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

Amma received a warm welcome in Bangalore last night, where she arrived at nearly 3:00 am after driving all the way from...

Posted by Amma onSunday, March 13, 2016

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Amma in Bengaluru : 3rd leg of Bharata Yatra starts from Bengaluru on Monday 14 March 2016. Event will be held in Mata Amritanandamayi Math, Jnanabharathi 2nd Stage, Bangalore –560 056. For more details contact 080 – 23241439, 23240767. Amma will start 3rd of her Bharata Yatra from 14 March visiting 10 cities across India.
Please Wait while comments are loading...