ನಗರಕ್ಕೆ ಆಗಮಿಸಿದ ಅಮಿತ್ ಶಾ, ಜಿಲ್ಲಾ ಮುಖಂಡರೊಂದಿಗೆ ಸಭೆ

Posted By:
Subscribe to Oneindia Kannada

ಬೆಂಗಳೂರು, ಜನವರಿ 09: ಎರಡು ದಿನಗಳ ರಾಜ್ಯ ಪ್ರವಾಸಕ್ಕಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ರಾಜ್ಯ ಬಿಜೆಪಿ ನಾಯಕರು ಅವರನ್ನು ಸ್ವಾಗತಿಸಿದ್ದಾರೆ.

4.30ಕ್ಕೆ ಬರಬೇಕಿದ್ದ ಅಮಿತ್ ಶಾ ಅವರು ಸ್ವಲ್ಪ ತಡವಾಗಿ ಆಗಮಿಸಿದ್ದಾರೆ, ವಿಮಾನ ನಿಲ್ದಾಣದಿಂದ ಯಲಹಂಕ ಸಮೀಪದ ಹೊಟೆಲ್ ರಾಯಲ್ ಆರ್ಕಿಡ್‌ಗೆ ತೆರಳಲಿರುವ ಅಮಿತ್ ಶಾ ಅಲ್ಲಿ ಎಲ್ಲಾ ಬಿಜೆಪಿ ರಾಜ್ಯ ಮುಖಂಡರು, ಜಿಲ್ಲಾ ಮುಖಂಡರುಗಳೊಂದಿಗೆ ಸಭೆ ನಡೆಸಲಿದ್ದಾರೆ.

ಅಮಿತ್ ಶಾ ಕರ್ನಾಟಕ ಪ್ರವಾಸ, ಬೆಂಗಳೂರು ಮತ್ತು ಹೊಳಲ್ಕೆರೆ

ತಡ ರಾತ್ರಿ ವರೆಗೆ ನಡೆಯಲಿರುವ ಸಭೆಯಲ್ಲಿ ಮುಖಂಡರ ಕಾರ್ಯಗಳು ಮತ್ತು ಅದರ ಪರಾಮರ್ಶೆ ನಡೆಸಿ ಮುಂದಿನ ಸೂಚನೆಗಳನ್ನು ಅಮಿತ್ ಶಾ ಅವರು ನೀಡಲಿದ್ದಾರೆ.

Amit Shah arrives at Bengaluru airport

ನಾಳೆ ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ನಡೆಯಲಿರುವ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಅಮಿತ್ ಶಾ ಭಾಗವಹಿಸಲಿದ್ದಾರೆ. ಮುಂಚೆ ಚಿತ್ರದುರ್ಗದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದ್ದ ಈ ಸಮಾವೇಶವನ್ನು ನಂತರ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಅವರ ಸ್ವಕ್ಷೇತ್ರಕ್ಕೆ ಸ್ಥಳಾಂತರಿಸಲಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP national president Amit Shah arrives to Bengaluru. BJP state leaders welcomes him. Amit Shah is going to participate in Parivarthana Yathre in Holalkere tomorrow.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ