ಟ್ರಂಪ್ ಗೆಲುವು: ಯಾವ ಪತ್ರಿಕೆಗಳ ಏನು ಶೀರ್ಷಿಕೆ ಕೊಟ್ಟಿದೆ?

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 10 : ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ರಾಜ್ಯದ ಪತ್ರಿಕೆಗಳಲ್ಲಿ ಮಹತ್ವದ ಸ್ಥಾನವನ್ನು ನೀಡಿದ್ದಾರೆ. ಆದರೆ ವಿಜಯ ಕರ್ನಾಟಕ ಇದನ್ನು ಎರಡನೇ ಸ್ಥಾನದಲ್ಲಿರಿಸಿದೆ.

ಜೆತೆಗೆ ಗೆಲುವಿನ ಉತ್ಸವದಲ್ಲಿ ತೇಲಿದ ಟ್ರಂಪ್ ಮತ್ತು ಸೋಲಿನ ದುಃಖಯು ಭಾಷಣ ಮಾಡಿದ ಹಿಲರಿ ಕ್ಲಿಂಟನ್ ಭಾಷಣವನ್ನು ಒಳಪುಟಗಳಲ್ಲಿ ನೀಡಲಾಗಿದೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಯಾರು ಯಾರು ಎಷ್ಟು ಮತ ಗಳಿಸಿದ್ದಾರೆ ಎಂಬ ಅಮೆರಿಕ ಚಿತ್ರ, ಪಕ್ಷಗಳ ಲೋಗೋ ಇನ್ಫೊಗ್ರಾಫೀಕ್ ಕನ್ನಡ ಪತ್ರಿಕೆಗಳಲ್ಲಿ ಚಿತ್ರಿತವಾಗಿದೆ.

ಡೊನಾಲ್ಡ್ ಟ್ರಂಫ್ನ ಭಾಷಣ ಮಾಡುತ್ತಿರುವ ಚಿತ್ರವನ್ನು ಎಲ್ಲ ಪತ್ರಿಕೆಗಳೂ ಬಳಸಿಕೊಂಡಿವೆ.

ವಿಜಯವಾಣಿಯಲ್ಲಿ ವೋಟು, ನೋಟು

ವಿಜಯವಾಣಿಯಲ್ಲಿ ವೋಟು, ನೋಟು

ವಿಜಯವಾಣಿಯಲ್ಲಿ ಟ್ರಂಪ್ಗೆ ವೋಟು, ನಾಳೆ ಹೊಸ ನೋಟು ಎಂಬ ಹೊಸ ರೀತಿಯ ಪ್ರಯೋಗವನ್ನು ಮಾಡಿ ಭಾರತದ ಹೊಸ 500, 1000 ನೋಟುಗಳು ಮತ್ತು ಅಮೆರಿಕ ಚುನಾವಣೆಯ ವೊಟಿನ ಫಲಿತಾಂಶದ ಬಗ್ಗೆ ತಿಳಿಸಿದ್ದಾರೆ.

ಉಗ್ರವಿರೋಧಿಗೆ ಅಮೆರಿಕ ಟ್ರಂಪ್ ಕಾರ್ಡ್, ಹಿಲರಿಗೆ ಸೋಲಿನ ವಿದಾಯ ಎಂಬ ಕಿಕ್ಕರ್ ಭವಿಷ್ಯದ ಡೊನಾಲ್ಡ್ ರ ಉದ್ದೇಶವನ್ನು ವಿರಿಸಿದಂತಿದೆ. ಮುಂದು ವರೆದಂತೆ ಹಿಲರಿ ಸೋತಿದ್ದೇಕೆ, ಟ್ರಂಫ್ ಗೆದ್ದಿದೇಕೆ, ಭಾರತ ಮತ್ತು ಪಾಕಿಸ್ತಾನಕ್ಕೆ ಆಗುವ ಲಾಭ ನಷ್ಟದ ಬಗ್ಗೆ ವಿವರಿದ್ದಾರೆ.

ವಿಜಯಕರ್ನಾಟಕದಲ್ಲಿ 2ನೇ ಸ್ಥಾನ

ವಿಜಯಕರ್ನಾಟಕದಲ್ಲಿ 2ನೇ ಸ್ಥಾನ

ವಿಜಯ ಕರ್ನಾಟಕದಲ್ಲಿ ಅಮೆರಿಕ ಚುನಾವಣೆಗೆ 2ನೇ ಸ್ಥಾನ ನೀಡಿದ್ದಾರೆ. ಅದೂ ಒಂದು ಇನ್ಫೋಗ್ರಾಫಿಕ್ ಅನ್ನು ಮಾಡಿದ್ದು ಅದರಲ್ಲಿಯೇ ಎಲ್ಲ ಮಾಹಿತಿಯನ್ನು ತುರುಕಲಾಗಿದೆ. ಉಳಿದ ಮಾಹಿತಿಯನ್ನು ಒಳಪುಟದಲ್ಲಿ ವಿವರಿಸಲಾಗಿದೆ. ಭಾರತದ ಮೇಲಾಗುವ ಧನಾತ್ಮಕ ಋಣಾತ್ಮಕ ಅಂಶಗಳ ಚಿಕ್ಕ ಪಟ್ಟಿ ಇದೆ. ಟ್ರಂಪ್ ಗೆಲುವಿನ ಕಾರಣವನ್ನು ಚಿಕ್ಕದಾಗಿ ಹೇಳಿದ್ದು, ಆನೆ ಮೇಲೆ ಕುಳಿತ ಟ್ರಂಪ್ ರೇಖಾಚಿತ್ರವೂ ಇದೆ. ಮೊದಲನೇ ಸ್ಥಾನದ ಸುದ್ದಿ ನೋಟಿನದ್ದಾಗಿದೆ.

ಪ್ರಜಾವಾಣಿಯಲ್ಲಿ ಟ್ರಂಪ್ ಸರ್ಕಾರ್

ಪ್ರಜಾವಾಣಿಯಲ್ಲಿ ಟ್ರಂಪ್ ಸರ್ಕಾರ್

ಇಲ್ಲಿ ಅಮೆರಿಕಕ್ಕೆ ಟ್ರಂಪ್ ಸರ್ಕಾರ್ ಎಂದು ಚುನಾವಣೆಗೆ ಮೊದಲ ಆದ್ಯತೆ ನೀಡಲಾಗಿದೆ. ಅವರು ಪಡೆದಿರುವ ಮತಗಳು ಮತ್ತು ಪಕ್ಷಗಳ ಲೋಗೋ ಇದೆ. ಮಾಹಿತಿ ಮತ್ತು ಟ್ರಂಪ್ ನ ದೊಡ್ಡ ಚಿತ್ರವೊಂದನ್ನು ಬಳಸಿದ್ದು ಚುನಾವಣೆಯಲ್ಲಿ ಮಹಿಳೆರ ವೊಟಿನ ಮಾಹಿತಿಯನ್ನು ನೀಡಿದ್ದಾರೆ. ಪ್ರಜಾವಾಣಿ ತನ್ನ ಮಾಮೂಲಿನ ಸರಳತೆ ಪ್ರಾಧಾನ್ಯತೆ ನೀಡಿದೆ.

ಉದಯವಾಣಿಯಲ್ಲಿ ಅಬ್ ಕೀ ಬಾರ್ ಟ್ರಂಫ್ ಸರ್ಕಾರ್

ಉದಯವಾಣಿಯಲ್ಲಿ ಅಬ್ ಕೀ ಬಾರ್ ಟ್ರಂಫ್ ಸರ್ಕಾರ್

ಈ ಪತ್ರಿಕೆಯಲ್ಲಿಯೂ ಟ್ರಂಪ್ ಸರ್ಕಾರ್ ಅನ್ನು ಸೂಚಿಸಿ, ಟ್ರಂಪ್, ಹಿಲರಿ ಮತ ಪಡೆದ ಅಮೆರಿಕ ಚಿತ್ರವನ್ನು ನೀಡಲಾಗಿದೆ. ಉದಯವಾಣಿ ನಾಮಫಲಕದೊಂದಿಗೆ ಡೊನಾಲ್ಡ್ ಟ್ರಂಪ್ ಮುದ್ರಿತವಾಗಿದೆ. ಟ್ರಂಪ್ ಗೆಲ್ಲಲು 5 ಕಾರಣ, ಹಿಲರಿ ಸೋಲಲು 5 ಕಾರಣವನ್ನು ನೀಡಲಾಗಿದೆ. ಎರಡನೇ ಪ್ರಾಧಾನ್ಯ ಸುದ್ದಿ 500-1000 ರು ನೋಟ್ ಬದಲಾವಣೆಯದ್ದಾಗಿದೆ.

ಕನ್ನಡಪ್ರಭದಲ್ಲಿ ಟ್ರಂಪ್ ತಂದ ಆಘಾತ, ಆತಂಕ

ಕನ್ನಡಪ್ರಭದಲ್ಲಿ ಟ್ರಂಪ್ ತಂದ ಆಘಾತ, ಆತಂಕ

ಟ್ರಂಪ್ ಗೆಲುವಿನಿಂದಾಗಿ ಅಮೆರಿಕದಲ್ಲಿ ಆಗುವ ಆಘಾತ ಮತ್ತು ಆತಂಕದ ವಾತಾವರಣದ ಬಗ್ಗೆ ಚಿತ್ರಿಸಲಾಗಿದೆ. ಅಲ್ಲದೆ ಅಮೆರಿಕದ ಕನಸಿನ ಬಗ್ಗೆ ಡಿ.ವಿ ರಾಜಶೇಖರ್ ಅವರ ವಿಮರ್ಶೆಯನ್ನು ನೀಡಲಾಗಿದೆ. ಹಿಲರಿ ಮನ್ನಣೆ ಮತ್ತು ಮೋದಿ ಪ್ರತಿಕ್ರಿಯೆಗಳನ್ನು ನೀಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
America Election result is hot news now. So, here some of the Kannada news papers headings and how they cover the proud moment
Please Wait while comments are loading...