ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗ್ಳೂರಲ್ಲಿ ಅಮೆರಿಕಾ ಡ್ಯಾನ್ಸ್ ಕಂಪನಿ ನೃತ್ಯ ಪ್ರದರ್ಶನ 'ಸಂಗಮಮ್'

|
Google Oneindia Kannada News

ಬೆಂಗಳೂರು, ಜೂನ್ 18 : ಚೆನ್ನೈ ನಲ್ಲಿರುವ ಅಮೆರಿಕಾ ದೂತಾವಾಸ ಮತ್ತು ನಿರುಪಮಾ- ರಾಜೇಂದ್ರ ಅವರ ಅಭಿನವ ಡ್ಯಾನ್ಸ್ ಕಂಪೆನಿ ಜಂಟಿಯಾಗಿ ವಾಷಿಂಗ್ಟನ್ ಮೂಲದ 'ದಕ್ಷಿಣ: ಡೇನಿಯಲ್ ಫಿನಿಕ್ಸ್ ಸಿಂಗ್ ಡಾನ್ಸ್ ಕಂಪನಿ'ಯ 'ಸಂಗಮಮ್' ನೃತ್ಯ ಆಯೋಜಿಸಿದ್ದವು.

ಬೆಂಗಳೂರಿನ ಕೆ.ಈ.ಎ. ಪ್ರಭಾತ್ ರಂಗಮಂದಿರದಲ್ಲಿ ಈಚೆಗೆ (ಜೂನ್ 15, 2018ರಂದು) ನೃತ್ಯ ಪ್ರದರ್ಶನ ನಡೆಯಿತು. 'ಎಟರ್ನಲ್ ಸ್ಪ್ರಿಂಗ್' ಮತ್ತು 'ಚಕ್ರ' ನೃತ್ಯ ರೂಪಕ ಪ್ರದರ್ಶಿಸಲಾಯಿತು. 'ದಕ್ಷಿಣ'ದ ಅಧ್ಯಕ್ಷ, ಭಾರತೀಯ ಮೂಲದ ಅಮೆರಿಕನ್ ಡೇನಿಯಲ್ ಫಿನಿಕ್ಸ್ ಸಿಂಗ್ ಈ ನೃತ್ಯ ರೂಪಕವನ್ನು ನಿರ್ದೇಶಿಸಿದ್ದಾರೆ. ಗಣೇಶ್ ಮತ್ತು ಕುಮರೇಶ್ ಸಂಗೀತ ಸಂಯೋಜಿಸಿದ್ದಾರೆ.

ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಅಮೆರಿಕಾ ರಾಯಭಾರಿ ಕೆನ್ನೆತ್ ಜಸ್ಟರ್ ಭೇಟಿಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಅಮೆರಿಕಾ ರಾಯಭಾರಿ ಕೆನ್ನೆತ್ ಜಸ್ಟರ್ ಭೇಟಿ

"ಜನರ ನಡುವಣ ಸಂಬಂಧ ಮತ್ತು ಉಭಯ ದೇಶಗಳ ಸಮಾನ ಮೌಲ್ಯಗಳ ಬುನಾದಿಯ ಮೇಲೆ ಅಮೆರಿಕಾ ಮತ್ತು ಭಾರತದ ಸಂಬಂಧ ಬೆಳೆದು ಬಂದಿದೆ" ಎಂದು ಅಮೆರಿಕಾ ದೂತಾವಾಸದ ವಕ್ತಾರರಾದ ಅಲೆಕ್ಸಿಸ್ ವುಲ್ಫ್ ಹೇಳಿದರು.

America dance company dance show Sngamam at Bengaluru

"ಅಮೆರಿಕಾದಲ್ಲಿ ಸುಮಾರು ನಲವತ್ತು ಲಕ್ಷ ಭಾರತೀಯ ಮೂಲದ ಅಮೆರಿಕನ್ನರು ಇದ್ದಾರೆ, ಸುಮಾರು 1,86,000 ಭಾರತೀಯ ವಿದ್ಯಾರ್ಥಿಗಳು ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಅವರಲ್ಲಿ ದಕ್ಷಿಣ ಭಾರತೀಯರೇ ಹೆಚ್ಚು. ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರ ಮತ್ತು ಅಮೆರಿಕಾದ ನೃತ್ಯಗಳ ಮಾದರಿಗಳನ್ನು ಸಮ್ಮಿಳತಗೊಳಿಸುವ ಮೂಲಕ "ದಕ್ಷಿಣ" ಅಮೆರಿಕಾದಲ್ಲಿ ಬದುಕು ಕಟ್ಟಿಕೊಂಡು, ಭಾರತದೊಂದಿಗೆ ಗಾಢ ನಂಟು ಹೊಂದಿರುವವರಿಗೆ ದನಿಯಾಗಿದೆ" ಎಂದರು.

English summary
Chennai America embassy, Nirupama- Rajendra's Abhinava dance company jointly organised Washington based South- Daniel Phoenix Sing dance company 'Sangamam' dance show at Bengaluru on 15th June, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X