ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಂಬಿಡೆಂಟ್ ಕೇಸ್: ತನಿಖಾಧಿಕಾರಿಗಳ ವಿರುದ್ಧವೇ ಆರೋಪ

|
Google Oneindia Kannada News

ಬೆಂಗಳೂರು, ನವೆಂಬರ್ 22 : ಕಳೆದ ಎರಡು ವಾರಗಳಿಂದ ಆಂಬಿಡೆಂಟ್ ಗ್ರೂಪ್ ಬಹಳ ಸುದ್ದಿಯಲ್ಲಿದೆ. ವಂಚನೆ ಪ್ರಕರಣದಲ್ಲಿ ಸುದ್ದಿಯಾಗಿದ್ದ ಗ್ರೂಪ್ ಈಗ ಪೊಲೀಸ್ ಅಧಿಕಾರಿಗಳ ವಿರುದ್ಧ ಹಲವು ಆರೋಪಗಳನ್ನು ಮಾಡಿದೆ.

ಸಿಸಿಬಿ ಎಸಿಪಿಯಾಗಿದ್ದ ಎಚ್.ಎನ್.ವೆಂಕಟೇಶ ಪ್ರಸನ್ನ ಅವರನ್ನು ನಗರ ಅಪರಾಧ ದಾಖಲೆಗಳ ಘಟಕಕ್ಕೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆಗೆ ಮುನ್ನ ಆಂಬಿಡೆಂಟ್ ಪ್ರಕರಣದ ತನಿಖೆಯನ್ನು ವೆಂಕಟೇಶ್ ಅವರು ನಡೆಸುತ್ತಿದ್ದರು.

ಆಂಬಿಡೆಂಟ್ ಪ್ರಕರಣದ ತನಿಖಾಧಿಕಾರಿ ವೆಂಕಟೇಶ್ ಪ್ರಸನ್ನ ವರ್ಗಾವಣೆಆಂಬಿಡೆಂಟ್ ಪ್ರಕರಣದ ತನಿಖಾಧಿಕಾರಿ ವೆಂಕಟೇಶ್ ಪ್ರಸನ್ನ ವರ್ಗಾವಣೆ

ಆಂಬಿಡೆಂಟ್ ಗ್ರೂಪ್ ತನ್ನ ಫೇಸ್‌ಬುಕ್ ಪುಟದಲ್ಲಿ ಎಚ್.ಎನ್.ವೆಂಕಟೇಶ ಪ್ರಸನ್ನ ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಿದೆ. ಈ ಪ್ರಕರಣದ ತನಿಖೆಯನ್ನು ಎಚ್.ಎನ್.ವೆಂಕಟೇಶ ಅವರ ಕೈಯಲ್ಲಿ ಮಾಡಿಸಬಾರದು ಎಂದು ಸಂಸ್ಥೆ ಒತ್ತಾಯಿಸಿದೆ.

ಆಂಬಿಡೆಂಟ್ ಕೇಸ್ : ಅಲಿಖಾನ್ ಜಾಮೀನು ಅರ್ಜಿ ವಜಾ, ಕೋರ್ಟ್‌ಗೆ ಶರಣುಆಂಬಿಡೆಂಟ್ ಕೇಸ್ : ಅಲಿಖಾನ್ ಜಾಮೀನು ಅರ್ಜಿ ವಜಾ, ಕೋರ್ಟ್‌ಗೆ ಶರಣು

Ambident made allegations against IO HN Venkatesh Prasanna

ಪ್ರಕರಣವೊಂದರಲ್ಲಿ ಉದ್ಯಮಿಗಳನ್ನು ಬ್ಲಾಕ್‌ಮೇಲ್ ಮಾಡಿ ಎಚ್.ಎನ್.ವೆಂಕಟೇಶ ಪ್ರಸನ್ನ ಅವರು ಕೋಟಿ ಕೋಟಿ ಹಣವನ್ನು ಪಡೆದಿದ್ದಾರೆ ಎಂದು ಆಂಬಿಡೆಂಟ್ ಗಂಭೀರ ಆರೋಪ ಮಾಡಿದೆ.

ಅಲೋಕ್ ಕುಮಾರ್ ಮತ್ತು ಡಿಸಿಪಿ ಗಿರೀಶ್ ಮೂಲಕ ತನಿಖೆ ನಡೆಸಿದರೆ ನೊಂದವರಿಗೆ ನ್ಯಾಯ ಸಿಗಲಿದೆ. ಎಚ್.ಎನ್.ವೆಂಕಟೇಶ ಪ್ರಸನ್ನ ಅವರಿಂದ ತನಿಖೆ ಬೇಡ ಎಂದು ಫೇಸ್‌ಬುಕ್‌ ಪೋಸ್ಟ್‌ಗಳನ್ನು ಶೇರ್ ಮಾಡಲಾಗಿದೆ.

ಸಿಸಿಬಿಯು ರೆಡ್ಡಿ ವಿಚಾರದಲ್ಲಿ ಕಾನೂನು ಪ್ರಕಾರ ನಡೆದುಕೊಂಡಿಲ್ಲ: ಬಿಎಸ್‌ವೈಸಿಸಿಬಿಯು ರೆಡ್ಡಿ ವಿಚಾರದಲ್ಲಿ ಕಾನೂನು ಪ್ರಕಾರ ನಡೆದುಕೊಂಡಿಲ್ಲ: ಬಿಎಸ್‌ವೈ

English summary
Ambident Group which was in news for bribery case made several allegations against CCB investigating officer H.N.Venkatesh Prasanna. City Crime Branch (CCB) changed the IO two days back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X