ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಂಬಿಡೆಂಟ್ ಕೇಸ್ : ಅಲಿಖಾನ್ ಜಾಮೀನು ಅರ್ಜಿ ವಜಾ, ಕೋರ್ಟ್‌ಗೆ ಶರಣು

|
Google Oneindia Kannada News

ಬೆಂಗಳೂರು, ನವೆಂಬರ್ 20 : ಆಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಮೆಹಫೂಜ್ ಅಲಿಖಾನ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಜನಾರ್ದನ ರೆಡ್ಡಿ ಆಪ್ತ 1ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ.

ಬೆಂಗಳೂರಿನ 61ನೇ ಸಿಟಿ ಸಿವಿಲ್ ಕೋರ್ಟ್ ಮಂಗಳವಾರ ಅಲಿಖಾನ್ ನಿರೀಕ್ಷಣಾ ಜಾಮೀಜು ಅರ್ಜಿಯನ್ನು ವಜಾಗೊಳಿಸಿತು. ಇದರಿಂದಾಗಿ ಅಲಿಖಾನ್ ಅವರನ್ನು ವಿಚಾರಣೆಗಾಗಿ ಸಿಸಿಬಿ ಬಂಧಿಸುವ ಸಾಧ್ಯತೆ ಇತ್ತು. ಆದರೆ, ಅವರು ನ್ಯಾಯಾಲಯದ ಮುಂದೆ ಶರಣಾದರು.

12 ವರ್ಷದ ದ್ವೇಷ ತೀರಿಸಿಕೊಂಡ ಕುಮಾರಸ್ವಾಮಿ : ಜನಾರ್ದನ ರೆಡ್ಡಿ12 ವರ್ಷದ ದ್ವೇಷ ತೀರಿಸಿಕೊಂಡ ಕುಮಾರಸ್ವಾಮಿ : ಜನಾರ್ದನ ರೆಡ್ಡಿ

Ali Khan

ಆಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಅಲಿಖಾನ್ ಅವರು 4ನೇ ಆರೋಪಿ. ಈಗಾಗಲೇ ಸಿಸಿಬಿ ಪೊಲೀಸರು ಅಲಿಖಾನ್ ಮನೆ ಮೇಲೆ ದಾಳಿ ನಡೆಸಿ, ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಕಂಪನಿಯಿಂದ 18 ಕೋಟಿ ರೂ.ಗಳನ್ನು ಅವರು ಪಡೆದಿದ್ದಾರೆ ಎಂಬ ಆರೋಪವಿದೆ.

ಅಲೋಕ್ ಕುಮಾರ್‌ರನ್ನು ಕಾಶ್ಮೀರಕ್ಕೆ ಕಳುಹಿಸಿ : ಜನಾರ್ದನ ರೆಡ್ಡಿಅಲೋಕ್ ಕುಮಾರ್‌ರನ್ನು ಕಾಶ್ಮೀರಕ್ಕೆ ಕಳುಹಿಸಿ : ಜನಾರ್ದನ ರೆಡ್ಡಿ

ನೋಟುಗಳ ನಿಷೇಧವಾದಾಗ ಡಿ.ಜೆ.ಹಳ್ಳಿಯಲ್ಲಿದ್ದ ಆಂಬಿಡೆಂಟ್ ಗ್ರೂಪ್ ಕಚೇರಿಯಲ್ಲಿ ಅಲಿಖಾನ್ ಬಹುಕೋಟಿ ರೂಪಾಯಿ ವಹಿವಾಟು ಮಾಡಿದ್ದಾರೆ. ಸಾಕ್ಷ್ಯಗಳನ್ನು ನಾಶ ಮಾಡಿದ್ದಾರೆ ಎಂಬ ಆರೋಪವೂ ಇದೆ.

ಆಂಬಿಡೆಂಟ್ ಪ್ರಕರಣ ಇಂದು ಮಹತ್ವದ ವಿಚಾರಣೆ, ರೆಡ್ಡಿಗೆ ಮತ್ತೆ ಭೀತಿ?ಆಂಬಿಡೆಂಟ್ ಪ್ರಕರಣ ಇಂದು ಮಹತ್ವದ ವಿಚಾರಣೆ, ರೆಡ್ಡಿಗೆ ಮತ್ತೆ ಭೀತಿ?

1ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಶರಣಾದ ಅಲಿಖಾನ್ ಅವರನ್ನು ನವೆಂಬರ್ 27ರ ತನಕ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಲಾಗಿದೆ. ಇದರಿಂದಾಗಿ ಜನಾರ್ದನ ರೆಡ್ಡಿ ಬಳಿಕ ಅಲಿಖಾನ್ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾರೆ.

ನ್ಯಾಯಾಲಯಕ್ಕೆ ಹಣವನ್ನು ವಾಪಸ್ ನೀಡುವುದಾಗಿ ಅಲಿಖಾನ್ ಪ್ರಮಾಣ ಪತ್ರ ಸಲ್ಲಿಸಿದ್ದರು. ಆದರೆ, ಸಿಸಿಬಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಇದರಿಂದಾಗಿ 10 ದಿನದಲ್ಲಿ 18 ಕೋಟಿ ಹಣವನ್ನು ವಾಪಸ್ ನೀಡುವುದಾಗಿ ಅಲಿಖಾನ್ ನ್ಯಾಯಾಲಯಕ್ಕೆ ಮತ್ತೆ ಪ್ರಮಾಣ ಪತ್ರ ಸಲ್ಲಿಸಿದ್ದರು.

English summary
Bengaluru City Civil Court on November 20, 2018 rejected the anticipatory bail to Former minister G.Janardhan Reddy close aide Ali Khan in Ambident company cheating case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X