ಮಹದೇವಪುರ ಕೆರೆ ಉಳಿಸಲು ಅಮೆಜಾನ್ ಗೆ ಯುನೈಟೆಡ್ ವೇ ಬೆಂಗಳೂರು ಸಾಥ್

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 16: ಅಮೆಜಾನ್ ನವರು ಯುನೈಟೆಡ್ ವೇ ಬೆಂಗಳೂರು ಹಾಗೂ ಬಿಬಿಎಂಪಿ ಜತೆಗೂಡಿ ಪರಿಸರ ಸ್ನೇಹಿ ಸೀವೇಜ್ ಟ್ರೀಟ್ ಮೆಂಟ್ ಪ್ಲಾಂಟ್ (ಎಸ್ ಟಿಪಿ- ಕೊಳಚೆ ನೀರು ಸಂಸ್ಕರಣಾ ಘಟಕ) ನಿರ್ಮಾಣಕ್ಕೆ ಮುಂದಾಗಿದೆ. ಆ ಮೂಲಕ ಮಹದೇವಪುರ ಕೆರೆಯ ಜೀರ್ಣೋದ್ಧಾರಕ್ಕೆ ಪ್ರಯತ್ನ ನಡೆದಿದೆ.

ಕಾರ್ಗಿಲ್ ಕಂಪನಿಯಿಂದ ಸಾಮಾಜಿಕ ಸೇವೆ ಪರಿಶೀಲನೆಗೂ ಮೊಬೈಲ್ ಆಪ್

ಈ ಸಂಸ್ಕರಣಾ ಘಟಕಕ್ಕೆ ವಿದ್ಯುತ್ ಮೇಲೆ ಅವಲಂಬನೆಯಿಲ್ಲ ಎಂಬುದು ಮುಖ್ಯವಾಗಿ ಗಮನಿಸಬೇಕಾದ ವಿಷಯ. ಬರೀ ಬಾಯಿ ಮಾತಿನಲ್ಲಿ ಹಸಿರು ಬೆಂಗಳೂರು ಹಾಗೂ ಸ್ವಚ್ಛ ಬೆಂಗಳೂರು ಎನ್ನುವುದಕ್ಕಿಂತ ಅದರ ಕಡೆಗೆ ಇಲ್ಲಿ ನಿಜವಾದ ಕೆಲಸ ಆಗುತ್ತಿದೆ. ಗುರುವಾರದಿಂದಲೇ ಮಹದೇವಪುರ ಕೆರೆಯ ಜೀರ್ಣೋದ್ಧಾರ ಕಾರ್ಯ ಆರಂಭವಾಗಿದೆ.

Amazon joins hands with United Way Bengaluru & BBMP to construct an eco-friendly STP

ಸ್ವಚ್ಛ ಹಾಗೂ ಹಸಿರು ಬೆಂಗಳೂರು ನಿರ್ಮಾಣ ನೀರಿಲ್ಲದೆ ಸಾಧ್ಯವೇ ಇಲ್ಲ. ನೀತಿ ನಿರೂಪಕರು, ಸಮಾಜವನ್ನು ದೊಡ್ಡ ಮಟ್ಟದಲ್ಲಿ ತಲುಪುವುದಕ್ಕೆ ಇಂಥ ಕೆಲಸಗಳು ಬಹಳ ಮಹತ್ವವಾಗುತ್ತವೆ ಎಂದು ಯುನೈಟೆಡ್ ವೇ ಬೆಂಗಳೂರು ಸಿಇಒ ಮನೀಶ್ ಮೈಕೆಲ್ ಹೇಳಿದರು.

ನಂದಿ ಬೆಟ್ಟದಲ್ಲಿ ಗಿಡ ನೆಟ್ಟ ಯುನೈಟೆಡ್ ವೇ ಬೆಂಗಳೂರು

ಬೆಂಗಳೂರಿನ ಗುರುತು ಎನಿಸಿಕೊಂಡಿರುವ ಕೆರೆಗಳ ಅಭಿವೃದ್ಧಿಗೆ ಹಾಗೂ ಅವುಗಳನ್ನು ಉಳಿಸಿಕೊಳ್ಳುವುದಕ್ಕೆ ಯುನೈಟೆಡ್ ವೇ ಬೆಂಗಳೂರು ಶ್ರಮಿಸುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Amazon has joined hands with United Way Bengaluru & BBMP to construct an eco-friendly sewage treatment plant to restore Mahadevapura Lake. The plant will have zero dependency on electricity for treating sewage, a huge step towards a greener and cleaner Bengaluru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ