ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಮೇಯರ್ ಚುನಾವಣೆ : ಅಂಕಿ-ಸಂಖ್ಯೆಗಳಲ್ಲಿ ಬಲಾಬಲ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 15 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಯಾರಾಗಲಿದ್ದಾರೆ? ಎಂಬ ಪ್ರಶ್ನೆಗೆ ಸೆ.28ರಂದು ಉತ್ತರ ದೊರೆಯಲಿದೆ. 269 ಸದಸ್ಯರು ಮತದಾನದ ಮೂಲಕ ನೂತನ ಮೇಯರ್ ಆಯ್ಕೆ ಮಾಡಲಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಮತದಾರರ ಸಂಖ್ಯೆ ಹೆಚ್ಚಳವಾಗಿದೆ. ಮೇಯರ್ ಪಟ್ಟಕ್ಕೆ ಏರಲು ಮ್ಯಾಜಿಕ್ ನಂಬರ್ 135. ಒಟ್ಟು 14 ಮತದಾರರನ್ನು ಹೊಂದಿರುವ ಜೆಡಿಎಸ್ ಯಾವ ಪಕ್ಷಕ್ಕೆ ಬೆಂಬಲ ನೀಡಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.[ಬಿಬಿಎಂಪಿ ಮೇಯರ್ ಚುನಾವಣೆ ಸೆ.28ಕ್ಕೆ]

ಮೊದಲು ಸೆಪ್ಟೆಂಬರ್ 19ರಂದು ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಚುನಾವಣೆ ನಿಗದಿಯಾಗಿತ್ತು. ಆದರೆ, ಬುಧವಾರ ವೇಳಾಪಟ್ಟಿ ಬದಲಾವಣೆಯಾಗಿದ್ದು, ಸೆ.28ರಂದು ಚುನಾವಣೆ ನಡೆಯಲಿದೆ. ಪಾಲಿಕೆಯಲ್ಲಿ ಜೆಡಿಎಸ್ ಜೊತೆಗಿರುವ ಮೈತ್ರಿಯನ್ನು ಮುಂದುವರೆಸಲು ಕಾಂಗ್ರೆಸ್ ಬಯಸಿದೆ. ಆದರೆ, ಜೆಡಿಎಸ್ ತನ್ನ ನಿಲುವನ್ನು ಇನ್ನೂ ಸ್ಪಷ್ಟಪಡಿಸಿಲ್ಲ.[ಬಿಬಿಎಂಪಿ ಮೈತ್ರಿ : ಅಡ್ಡಗೋಡೆ ಮೇಲೆ ದೀಪವಿಟ್ಟ ಕುಮಾರಸ್ವಾಮಿ]

ಈ ಬಾರಿ ಮೇಯರ್ ಪಟ್ಟ ಹಿಂದುಳಿದ ವರ್ಗ (ಬಿ) ಮಹಿಳೆ ಮತ್ತು ಉಪ ಮೇಯರ್ ಪಟ್ಟ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಜೆಡಿಎಸ್ ಯಾರಿಗೆ ಬೆಂಬಲ ನೀಡುತ್ತದೆ ಎಂಬುದರ ಆಧಾರದ ಮೇಲೆ ಮೇಯರ್ ಯಾರು? ಎಂಬುದು ತೀರ್ಮಾನವಾಗುತ್ತದೆ...

ಪಕ್ಷ ತೀರ್ಮಾನ ಕೈಗೊಳ್ಳಬೇಕು

ಪಕ್ಷ ತೀರ್ಮಾನ ಕೈಗೊಳ್ಳಬೇಕು

'ಜೆಡಿಎಸ್ ಪಕ್ಷ ತಮ್ಮ ಬಳಿ ಮೇಯರ್ ಪಟ್ಟಕ್ಕಾಗಿ ಬೇಡಿಕೆ ಇಟ್ಟಿಲ್ಲ. ಒಂದು ವೇಳೆ ಮೇಯರ್ ಪಟ್ಟಕ್ಕೆ ಬೇಡಿಕೆ ಇಟ್ಟರೆ, ಮುಖ್ಯಮಂತ್ರಿಗಳು ಮತ್ತು ಕೆಪಿಸಿಸಿ ಅಧ್ಯಕ್ಷರು ಆ ಕುರಿತು ನಿರ್ಧಾರವನ್ನು ಕೈಗೊಳ್ಳುತ್ತಾರೆ' ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಕಾಂಗ್ರೆಸ್ ಸದಸ್ಯರ ಸಂಖ್ಯೆ 112

ಕಾಂಗ್ರೆಸ್ ಸದಸ್ಯರ ಸಂಖ್ಯೆ 112

ಮೇಯರ್ ಪಟ್ಟಕ್ಕೆ ಏರಲು ಮ್ಯಾಜಿಕ್ ನಂಬರ್ 135. ಸದ್ಯ, ಬಿಬಿಎಂಪಿಯಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ 76 ಬಿಬಿಎಂಪಿ ಸದಸ್ಯರು, 28 ಶಾಸಕರು, 8 ಸಂಸದರನ್ನು ಒಳಗೊಂಡು 112 ಸದಸ್ಯ ಬಲ ಹೊಂದಿದೆ. ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರು ಕಾಂಗ್ರೆಸ್ ಜೊತೆ ಕೈ ಜೋಡಿಸಿದರೆ ಮೇಯರ್ ಪಟ್ಟ ಒಲಿಯಲಿದೆ.

ಬಿಜೆಪಿ ಸದಸ್ಯ ಬಲ 125

ಬಿಜೆಪಿ ಸದಸ್ಯ ಬಲ 125

ಒಂದು ವೇಳೆ ಬಿಜೆಪಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಮೇಯರ್ ಪಟ್ಟವನ್ನು ಸುಲಭವಾಗಿ ಪಡೆಯಬಹುದು. 100 ಬಿಬಿಎಂಪಿ ಸದಸ್ಯರು, 19 ಶಾಸಕರು, 6 ಸಂಸದರನ್ನು ಸೇರಿಸಿ ಒಟ್ಟು 125 ಸದಸ್ಯ ಬಲವನ್ನು ಪಕ್ಷ ಹೊಂದಿದೆ.

ಜೆಡಿಎಸ್ ಬಳಿ ಇದೆ 23 ಸದಸ್ಯ ಬಲ

ಜೆಡಿಎಸ್ ಬಳಿ ಇದೆ 23 ಸದಸ್ಯ ಬಲ

ಪ್ರಸ್ತುತ ಪಾಲಿಕೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿರುವ ಜೆಡಿಎಸ್ 23 ಸದಸ್ಯ ಬಲ ಹೊಂದಿದೆ. 14 ಬಿಬಿಎಂಪಿ ಸದಸ್ಯರು, 8 ಶಾಸಕರು, ಒಬ್ಬ ಸಂಸದರ ಸದಸ್ಯ ಬಲವನ್ನು ಪಕ್ಷ ಹೊಂದಿದೆ. ಆದರೆ, ಅಮಾನತುಗೊಂಡ ಶಾಸಕರ ಬೆಂಬಲಿಗರು ಯಾರಿಗೆ ಮತ ಹಾಕುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಪಕ್ಷೇತರರು ನಿರ್ಣಾಯಕ

ಪಕ್ಷೇತರರು ನಿರ್ಣಾಯಕ

ಒಂದು ವೇಳೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ನಡೆದರೂ ಪಕ್ಷೇತರರು ಪ್ರಮುಖ ಪಾತ್ರ ವಹಿಸುತ್ತಾರೆ. 7 ಪಕ್ಷೇತರ ಬಿಬಿಎಂಪಿ ಸದಸ್ಯರು, ಒಬ್ಬರು ಶಾಸಕರು, ಒಬ್ಬರು ಸಂಸದರು ಮೇಯರ್ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕನ್ನು ಹೊಂದಿದ್ದಾರೆ.

English summary
Elections to the post of Mayor and Deputy Mayor will be held on September 28, 2016. Now magic number for mayor post is 135 according to the list prepared by the council secretariat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X