ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈತ್ರಿ ವಿಧಾನಸೌಧದ ಒಳಗಷ್ಟೆ, ಹೊರಗಲ್ಲ: ದೇವೇಗೌಡ

By Manjunatha
|
Google Oneindia Kannada News

ಬೆಂಗಳೂರು, ಮೇ 26: ಜೆಡಿಎಸ್-ಕಾಂಗ್ರೆಸ್ ಮೈತ್ರಿ ವಿಧಾನಸೌಧದ ಒಳಗಷ್ಟೆ ಹೊರಗಿಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಅವರು ಖಡಕ್ ಆಗಿ ಹೇಳಿದ್ದಾರೆ.

ರಾಜರಾಜೇಶ್ವರಿ ನಗರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ದೇವೇಗೌಡ ಅವರು, ಇಲ್ಲಿನ ಜೆಡಿಎಸ್ ಅಭ್ಯರ್ಥಿ ರಾಮಚಂದ್ರಪ್ಪ ಗೆಲ್ಲಿಸಲು ಪಣ ತೊಟ್ಟಿದ್ದೇನೆ ಎಂದು ಅವರು ಹೇಳಿದರು.

ನಮ್ಮ ತ್ಯಾಗಕ್ಕೆ ಜೆಡಿಎಸ್ ಓಗೊಡಲಿ: ಡಿಕೆಶಿ ಮನವಿನಮ್ಮ ತ್ಯಾಗಕ್ಕೆ ಜೆಡಿಎಸ್ ಓಗೊಡಲಿ: ಡಿಕೆಶಿ ಮನವಿ

ರಾಜರಾಜೇಶ್ವರಿ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವಂತೆ ಡಿಕೆ ಶಿವಕುಮಾರ್ ಅವರಿಂದ ಮನವಿ ಇತ್ತು ಎನ್ನಲಾಗಿದ್ದು, ಇದಕ್ಕೆ ಪ್ರತಿಕ್ರಿಯೆಯಾಗಿ ದೇವೇಗೌಡ ಅವರು ಈ ಮಾತನ್ನು ಹೇಳಿದ್ದಾರೆ ಎಂದೇ ಅರ್ಥೈಸಲಾಗಿದೆ.

Alliance between JDS-Congress is only in Vidhan Souda not outside: Deve Gowda

ಚುನಾವಣಾ ಅಕ್ರಮ ಕಂಡುಬಂದ ಕಾರಣ ರಾಜರಾಜೇಶ್ವರಿ ನಗರ ಚುನಾವಣೆಯನ್ನು ಆಯೋಗವು ಮುಂದೂಡಿತ್ತು. ಇದೀಗ ಸೋಮವಾರ ಮತದಾನ ನಡೆಯಲಿದ್ದು, ಜೆಡಿಎಸ್‌ ಅಭ್ಯರ್ಥಿಯಾಗಿ ರಾಮಚಂದ್ರಪ್ಪ, ಕಾಂಗ್ರಸ್ ಅಭ್ಯರ್ಥಿಯಾಗಿ ಮುನಿರತ್ನ ಮತ್ತು ಬಿಜೆಪಿ ಅಭ್ಯರ್ಥಿಯಾಗಿ ಮುನಿರಾಜು ಗೌಡ ಕಣದಲ್ಲಿದ್ದಾರೆ.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚಿಸಿರುವುದರಿಂದ ರಾಜರಾಜೇಶ್ವರಿ ನಗರ ಚುನಾವಣೆಯಲ್ಲೂ ಹೊಂದಾಣಿಕೆ ಮಾಡಿಕೊಳ್ಳಬಹುದೇನೋ ಎಂಬ ಕುತೂಹಲ ಇತ್ತು ಆದರೆ ದೇವೇಗೌಡರು ಇದಕ್ಕೆ ಸ್ಪಷ್ಟವಾಗಿ ನಕಾರ ಹೇಳಿದ್ದಾರೆ.

ರಾರಾನಗರದಲ್ಲಿ ಮೈತ್ರಿಕೂಟದ ಅಧಿಕೃತ ಅಭ್ಯರ್ಥಿ ಯಾರು?ರಾರಾನಗರದಲ್ಲಿ ಮೈತ್ರಿಕೂಟದ ಅಧಿಕೃತ ಅಭ್ಯರ್ಥಿ ಯಾರು?

ಆದರೆ ಜಯನಗರ ಚುನಾವಣೆಯಲ್ಲಿ ಜೆಡಿಎಸ್ -ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದೆ. ಅಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರಿಗೆ ಜೆಡಿಎಸ್ ಬೆಂಬಲ ನೀಡುತ್ತಿದೆ.

English summary
JDS president Deve Gowda said JDS-Congress alliance is limited to Vidhan Soudha only, not out side of the Vidhan Soudha. He said this in reply to Rajarajeshwari Nagar related question.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X