ನಾಳೆಯಿಂದ(ನ. 16) ಬೆಂಗಳೂರಿನ ಎಲ್ಲಾ ಖಾಸಗಿ 'ಒಪಿಡಿ'ಗಳು ಬಂದ್

Subscribe to Oneindia Kannada

ಬೆಂಗಳೂರು, ನವೆಂಬರ್ 15: ನಾಳೆ ಬೆಳಿಗ್ಗೆ 8 ಗಂಟೆಯಿಂದ ಬೆಂಗಳೂರಿನ ಎಲ್ಲಾ ಖಾಸಗಿ 'ಒಪಿಡಿ'ಗಳು ಬಂದ್ ಆಗಲಿವೆ. ಬೆಳಗಾವಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವೈದ್ಯರಿಗೆ ಬೆಂಬಲ ಸೂಚಿಸಿ 30ಕ್ಕೂ ಹೆಚ್ಚು ವೈದ್ಯಕೀಯ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿವೆ.

ಚಿಕಿತ್ಸೆಗಾಗಿ ಹೊರ ರಾಜ್ಯಗಳಿಗೆ ತೆರಳುತ್ತಿರುವ ರೋಗಿಗಳು

ಹೀಗಾಗಿ 6,000 ಕ್ಕೂ ಹೆಚ್ಚು ಬೆಂಗಳೂರಿನಖಾಸಗಿ ಒಪಿಡಿಗಳು ನಾಳೆಯಿಂದ ಬಂದ್ ಆಗಲಿವೆ. ಮುಷ್ಕರಕ್ಕೆ 22 ಸಾವಿರಕ್ಕೂ ಅಧಿಕ ವೈದ್ಯರು ಕೈ ಜೋಡಿಸಲಿದ್ದಾರೆ.

All the OPDs in Bangalore will be close from tomorrow

ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ವೈದ್ಯಕೀಯ ಸಂಘಟನೆಗಳು, 'ಕರ್ನಾ­ಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ 2017'ನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿವೆ. ಸರಕಾರ ಮಸೂದೆ ಹಿಂಪಡೆಯದಿದ್ದಲ್ಲಿ ಒಪಿಡಿ ಬಂದ್ ಮುಂದುವರಿಸುವುದಾಗಿ ಸಂಘಟನೆಗಳು ಎಚ್ಚರಿಸಿವೆ.

ಕೆಎಂಪಿಎ ಕಾಯ್ದೆ ವಿವಾದ, ಶಾಸಕರ ಅಭಿಪ್ರಾಯ ಸಂಗ್ರಹ

ಬಂದ್ ನಿಂದ ಹೊರರೋಗಿ ವಿಭಾಗ ಹೊರತು ಪಡಿಸಿ ತುರ್ತು ಸೇವೆ, ಡಯಾಲಿಸಿಸ್, ಕ್ಯಾನ್ಸರ್ ಚಿಕಿತ್ಸೆಗೆ ಯಾವುದೇ ಅಡ್ಡಿ ಇರುವುದಿಲ್ಲ.

ಶಾಸಕಾಂಗ ಸಭೆಯಲ್ಲಿ ಮುನಿಸು, ಹೊರ ನಡೆದ ರಮೇಶ್ ಕುಮಾರ್!

ಸದ್ಯ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆ ಮಂಡನೆಯಾಗದ ಕಾರಣ ಇದರ ವಿರುದ್ಧ ನ್ಯಾಯಾಲಯಕ್ಕೆ ಹೋಗಲು ಸಾಧ್ಯವಿಲ್ಲ ಎಂದು ವೈದ್ಯ ಸಂಘಟನೆಗಳು ಅಭಿಪ್ರಾಯಪಟ್ಟಿವೆ.

ಒಪಿಡಿ ಬಂದ್ ಹಿನ್ನಲೆಯಲ್ಲಿ ಸರಕಾರಿ ವೈದ್ಯರು ಮತ್ತು ಸಿಬ್ಬಂದಿಗಳ ರಜೆ ರದ್ದುಗೊಳಿಸಿ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
All the private OPDs in Bengaluru will be close from tomorrow morning at 8 am. More than 30 medical organizations have called for a strike to support doctors who are fasting in Belagavi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ