ಅಲ್ಫಾ ಟಿಕೆಜಿ ಸಂಸ್ಥೆಯೊಂದಿಗೆ ಕೈಜೋಡಿಸಿದ ಭಾರತೀಯ ವಿಜ್ಞಾನ ಸಂಸ್ಥೆ

Written By: Ramesh
Subscribe to Oneindia Kannada

ಬೆಂಗಳೂರು, ಅಕ್ಟೋಬರ್. 07 : ಭಾರತದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ ಸಿ) ಜಪಾನ್ಅಲ್ಫಾ ಟಿಕೆಜಿ ಸಂಸ್ಥೆಯೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಈ ಅಲ್ಫಾ ಟಿಕೆಜಿ ಸಂಸ್ಥೆಯೊಂದಿಗೆ ಕೈಜೋಡಿಸಿತು.

ಈ ಒಪ್ಪಂದದನ್ವಯ ಐಐಎಸ್ ಸಿ ಕ್ಯಾಂಪಸ್ ನಲ್ಲಿಅಲ್ಫಾ ಟಿಕೆಜಿ ಇಂಟರ್ ನೆಟ್ ಆಫ್ ಥಿಂಗ್ಸ್ (ಐಒಟಿ) ಇಂಡಿಯಾ ಡೆವಲಪ್ ಮೆಂಟ್ ಸೆಂಟರ್ ಅನ್ನು ಆರಂಭಿಸಲಾಗಿದೆ. ಕೃಷಿ ಕ್ಷೇತ್ರದಲ್ಲಿ ಸಮರ್ಥವಾಗಿ ತಂತ್ರಜ್ಞಾನವನ್ನು ಅಳವಡಿಸಲು ಈ ಒಪ್ಪಂದ ಮಹತ್ವದ ಮೈಲಿಗಲ್ಲನ್ನು ಹೊಂದಲಿದ್ದು, ರೈತರಿಗೆ ಬೆಳೆ ಬೆಳೆಯುವ ಬಗ್ಗೆ ಹಾಗೂ ಕೃಷಿಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಲಿದೆ.

India Development Centre

ಕೃಷಿಯಲ್ಲಿ ನೀರು ಕೊರತೆಯಾಗುವುದರಿಂದ ರೈತರು ನಷ್ಟ ಹೊಂದುತ್ತಿದ್ದಾರೆ. ಕೃಷಿಯಲ್ಲಿ ನೀರಿನ ಬಳಕೆ ಹೇಗೆ ಮಾಡಬೇಕೆಂದು ಕೇಂದ್ರದಲ್ಲಿ ತಿಳಿಸಲಾಗುತ್ತದೆ. ಕಡಿಮೆ ನೀರು ಬಳಕೆ ಮಾಡಿ ಉತ್ಪಾದನಾ ಹೆಚ್ಚಳವನ್ನು ಮಾಡುವ ತಂತ್ರಜ್ಞಾನ ಜಪಾನ್ ದೇಶದಲ್ಲಿ ಈಗಾಗಲೇ ಬಳಕೆಯಲ್ಲಿದೆ ಎಂದು ಅಲ್ಪಾ ಟಿಕೆಜಿ ನಿರ್ದೇಶಕ ಡಾ.ಪೆರಿಸ್ವಾಮಿ ತನಪಂಡಿ ಹೇಳಿದರು.

India Development Centre

ಜಾಗತಿಕ ಸ್ಪರ್ಧೆಯನ್ನು ಎದುರಿಸುವುದಕ್ಕಾಗಿ ಉತ್ಪಾದನಾ ಕ್ಷೇತ್ರದಲ್ಲಿ ಸೂಕ್ತವಾದ ತಂತ್ರಜ್ಞಾನವನ್ನು ಅಳವಡಿಸುವ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವುದು ಅಗತ್ಯವಾಗಿದೆ.

"ಮೇಕ್ ಇನ್ ಇಂಡಿಯಾ" ಘೋಷಣೆ ದೇಶದ ಎಲ್ಲೆಡೆ ಮೊಳಗುತ್ತಿರುವ ಈ ದಿನಗಳಲ್ಲಿ ಭಾರತವು ಜಗತ್ತಿನ ಅತಿ ದೊಡ್ಡ ಕೈಗಾರಿಕಾ ಕೇಂದ್ರವಾಗಿ ಹೊರಹೊಮ್ಮುವುದಕ್ಕೆ ಎಲ್ಲ ರೀತಿಯಿಂದ ಸಜ್ಜಾಗಿದ್ದು ಕೈಗಾರಿಕಾ ಕ್ಷೇತ್ರಕ್ಕೆ ಅಗತ್ಯದ ತಾಂತ್ರಿಕ ಬೆಂಬಲ ನೀಡುವಲ್ಲಿ ಆಲ್ಫಾ ಟಿಕೆಜಿ ಸಂಸ್ಥೆ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ಡಾ ತೋಶಿಕೋ ಟಕಗಿ ಹೇಳಿದ್ದಾರೆ.

ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಜಪಾನ್, ಅಮೆರಿಕ, ಸಿಂಗಾಪುರ, ಥಾಯ್ಲೆಂಡ್ ಮತ್ತು ಭಾರತದ ನಿಯೋಗಗಳು ಪಾಲ್ಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India’s premiere research institute, Indian Institute of Science (IISc) and alfaTKG, has jointly launched 'Internet of Things (IoT), India Development Centre (IDC) in the City today.
Please Wait while comments are loading...