ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಂದಿಜ್ವರ ನಿಯಂತ್ರಣಕ್ಕೆ ಎಲ್ಲಾ ಆಸ್ಪತ್ರೆಗಳಲ್ಲಿ ಮಾತ್ರೆ ಲಭ್ಯ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 12: ದಿನದಿಂದ ದಿನಕ್ಕೆ ಹಂದಿಜ್ವರ(ಎಚ್‌1ಎನ್‌1) ಪ್ರಕರಣಗಳು ಹೆಚ್ಚಾಗುತ್ತಿವೆ, ರೋಗ ತಡೆಗೆ ಅಗತ್ಯವಿರುವ ಡ್ಯಾಮಿಫ್ಲ್ಯೂ ಮಾತ್ರೆಯನ್ನು ನಗರದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಲಾಗಿದೆ ಎಂದು ಮುಖ್ಯ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಈ ಬಾರಿ ಡೆಂಗ್ಯೂ ಹಾವಳಿ ನಿಯಂತ್ರಣದಲ್ಲಿ! ಕರ್ನಾಟಕದಲ್ಲಿ ಈ ಬಾರಿ ಡೆಂಗ್ಯೂ ಹಾವಳಿ ನಿಯಂತ್ರಣದಲ್ಲಿ!

ಸೆಪ್ಟೆಂಬರ್ ನಿಂದ ಇಲ್ಲಿಯವರೆಗೆ ಬೆಂಗಳೂರಲ್ಲಿ 109 ಪ್ರಕರಣಗಳು ಪತ್ತೆಯಾಗಿರುವುದಾಗಿ ಬಿಬಿಎಂಪಿ ಮಾಹಿತಿ ನೀಡಿದೆ. ಮಹದೇವಪುರ ವಲಯ ಒಂದರಲ್ಲೇ ಅತಿ ಹೆಚ್ಚು 43 ಪ್ರಕರಣಗಳು ಬೆಳಕಿಗೆ ಬಂದಿವೆ, ಉಳಿದಂತೆ ಪೂರ್ವ ವಲಯದಲ್ಲಿ 22, ದಕ್ಷಿಣ ವಲಯದಲ್ಲಿ 17, ಬೊಮ್ಮನಹಳ್ಳಿ, ರಾಜರಾಜೇಶ್ವರಿನಗರ ವಲಯದಲ್ಲಿ ತಲಾ 7, ಪಶ್ಚಿಮ, ಯಲಹಂಕ ವಲಯಗಳಲ್ಲಿ ತಲಾ 6 ಮತ್ತು ದಾಸರಹಳ್ಳಿ ವಲಯದಲ್ಲಿ 1 ಪ್ರಕರಣ ಪತ್ತೆಯಾಗಿದೆ.

ಬೆಂಗಳೂರಲ್ಲಿ 10 ದಿನಗಳಲ್ಲಿ 23 ಎಚ್‌1ಎನ್‌1 ಪ್ರಕರಣ ಪತ್ತೆ ಬೆಂಗಳೂರಲ್ಲಿ 10 ದಿನಗಳಲ್ಲಿ 23 ಎಚ್‌1ಎನ್‌1 ಪ್ರಕರಣ ಪತ್ತೆ

ಎಚ್‌1ಎನ್‌1 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಮೇಯರ್ ಗಂಗಾಂಬಿಕೆ ಪಾಲಿಕೆ ಆರೋಗ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ರೋಗ ನಿಯಂತ್ರಣಕ್ಕೆ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು. ಎಚ್‌1ಎನ್1 ಸೋಂಕು ಕಂಡುಬಂದ ರೋಗಿಗಳ ಹತ್ತಿರದ ಸಂಬಂಧಿಕರು, ಕುಟುಂಬಸ್ಥರಿಗೆ ರೋಗ ಹರಡುವಿಕೆ ನಿಯಂತ್ರಿಸುವ ಸಲಹೆಗಳನ್ನು ನೀಡಿದರು.

ಬೆಂಗಳೂರಲ್ಲಿ ಎಚ್‌1ಎನ್‌1 46 ಪ್ರಕರಣ ಪತ್ತೆ: ರಾಜ್ಯಾದ್ಯಂತ ಹೈ ಅಲರ್ಟ್ ಬೆಂಗಳೂರಲ್ಲಿ ಎಚ್‌1ಎನ್‌1 46 ಪ್ರಕರಣ ಪತ್ತೆ: ರಾಜ್ಯಾದ್ಯಂತ ಹೈ ಅಲರ್ಟ್

Alert on H1N1 flu: Tamiflu tablet available in Bengaluru

ಮೊದಲು ಹೆಚ್ಚಾದ ಕೆಮ್ಮು ಮತ್ತು ಹಳದಿ ಕಫ, ಅತಿಯಾದ ಭೇದಿ, ವಾಂತಿ, ಮೈಕೈ ನೋವು, ನೆಗಡಿ ಮತ್ತು ಗಂಟಲು ಕೆರೆತ, ಉಸಿರಾಟದ ತೊಂದರೆಯಂತಹ ಸಮಸ್ಯೆಗಳಿದ್ದರೆ ಅದು ಎಚ್‌1ಎನ್‌1 ಲಕ್ಷಣಗಳಿರಬಹುದು ಕೂಡಲೇ ಸಮೀಪದ ಆರೋಗ್ಯ ಕೇಂದ್ರಗಳಿಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕಾಗಿದೆ.

English summary
BBMP has ensured that Tamiflu tablet is available in every primary health care in Bengaluru city which controls H1N1 flu, BBMP said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X