ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಬಳಲುತ್ತಿದೆ, ಶ್ವಾಸಕೋಶ ಸಂಬಂಧಿ ರೋಗ ಹೆಚ್ಚುತ್ತಿದೆ!

By Nayana
|
Google Oneindia Kannada News

ಬೆಂಗಳೂರು, ಜೂನ್ 5: ನಗರದಲ್ಲಿ ಮಾಲಿನ್ಯ ತಡೆಗಟ್ಟಲು ಮಾಲಿನ್ಯ ನಿಯಂತ್ರಣ ಮಂಡಳಿ ಹರಸಾಹ ಪಡುತ್ತಿದೆ. ಸಾಕಷ್ಟು ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಆದರೂ ಯಾವುದೇ ಪ್ರಯೋಜನವಾದಂತೆ ಕಾಣುತ್ತಿಲ್ಲ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಗರದ 15 ಕಡೆಗಳಲ್ಲಿ ವಾಯುಮಾಲಿನ್ಯ ಗುಣಮಟ್ಟ ಮಾಪನ ಕೇಂದ್ರಗಳನ್ನು ತೆರೆದಿದೆ. ಅದರಲ್ಲಿ ಮಾಲಿನ್ಯದ ತೀವ್ರತೆಯನ್ನು ಅಳೆಯಲಾಗುತ್ತದೆ. ಇದರಿಂದ ನಗರದಲ್ಲಿ ಹೆಚ್ಚುತ್ತಿರುವ ಕುರಿತು ಮಾಹಿತಿ ಲಭ್ಯವಾಗಿದ್ದು ಆತಂಕ ಮೂಡುವಂತಾಗಿದೆ.

ವಿಶ್ವದ 20 ಮಾಲಿನ್ಯಯುಕ್ತ ನಗರಗಳಲ್ಲಿ ಭಾರತದ 14 ನಗರಗಳು!ವಿಶ್ವದ 20 ಮಾಲಿನ್ಯಯುಕ್ತ ನಗರಗಳಲ್ಲಿ ಭಾರತದ 14 ನಗರಗಳು!

ಒಂದು ಸಾವಿರ ಲೀಟರ್ ಗಾಳಿಯಲ್ಲಿ 80 ಮೈಕ್ರೋ ಗ್ರಾಂ ಎಸ್‌ಒ2 ಹಾಗೂ ಎನ್‌ಒ2 ಇದ್ದರೆ ಸಮಸ್ಯೆ ಇಲ್ಲ ಎಂದು ನ್ಯಾಷನಲ್ ಆಂಬಿಯೆಂಟ್ ಏರ್ ಕ್ವಾಲಿಟಿ ಸ್ಟಾಂಡರ್ಡ್ಸ್ ತಿಳಿಸಿದೆ. ಶ್ವಾಸಕೋಶಕ್ಕೆ ಭಾರಿ ಪ್ರಮಾಣದ ಹಾನಿಯನ್ನುಂಟು ಮಾಡುವ ಪಿಎಂ-2.5 ಪ್ರಮಾಣ 60 ಮೈಕ್ರೋ ಗ್ರಾಂ ಹಾಗೂ ಪಿಎಂ-10 ಪ್ರಮಾಣ 100 ಮೈಕ್ರೊ ಗ್ರಾಂಗಿಂತ ಹೆಚ್ಚಿರಬಾರದು ಎಂದು ಮಿತಿ ನಿಗದಿಪಡಿಸಿದೆ.

Alarming air pollution in Bengaluru

ಕಟ್ಟಡ ಕಾಮಗಾರಿ, ವಾಹನಗಳ ಹೊಗೆ, ಇನ್ನಿತರೆ ಧೂಳಿನಿಂದಾಗಿ ಪಿಎಂ 2.5 ಹಾಗೂ ಪಿಎಂ-10 ಪ್ರಮಾಣ ಅಧಿಕವಾಗುತ್ತಿದೆ. ಇದು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಹುಟ್ಟುಹಾಕುತ್ತದೆ.

ಮಾಲಿನ್ಯ ತೀವ್ರತೆ ಅಳೆಯುವ ಕೇಂದ್ರದ ಮಾಹಿತಿ ಪ್ರಕಾರ ಬೆಳಗ್ಗೆ 8ರಿಂದ ಮಧ್ಯಾಹ್ನ 3 ಗಂಟೆವರೆಗೆ ಮಾಲಿನ್ಯ ಪ್ರಮಾಣ ಹೆಚ್ಚಿರುತ್ತದೆ. ಜೂ.1ರಂದು ಈ ಸಮಯದಲ್ಲಿ ಪಿಎಂ-10 ಪ್ರಮಾಣ 100.62 ಮೈಕ್ರೋ ಗ್ರಾಂ, ಜೂನ್ 2 ರಂದು 123.98 ಮೈಕ್ರೋ ಗ್ರಾಂ, ಹಾಗೂ ಜೂನ್ 3 ರಂದು 150.42 ಮೈಕ್ರೋ ಗ್ರಾಂ ಎಂದು ದಾಖಲಾಗಿದೆ.

English summary
Air pollution in Bengaluruin alarming situation specially in central part of the city, datas revealed by Karnataka State Pollution Control Board.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X