'ಲಿಂಗಪತ್ತೆ ಕಡ್ಡಾಯ' ಹೆಣ್ಣು ಮಕ್ಕಳ ಪಾಲಿಗೆ ಮರಣಶಾಸನ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ,04: ಹೆಣ್ಣುಮಕ್ಕಳ ಜೀವಕ್ಕೆ ಕುತ್ತು ತರಲು ಹೊರಟಿರುವ ಲಿಂಗ ಪತ್ತೆ ಕಡ್ಡಾಯಕ್ಕೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಮನೇಕಾ ಗಾಂಧಿಯವರ ಪ್ರಸ್ತಾಪವನ್ನು ಅಲ್ಲಗಳೆದಿದೆ.

ಲಿಂಗ ಆಯ್ಕೆ ತಡೆಯಲು ಲಿಂಗಪತ್ತೆಯನ್ನು ಕಡ್ಡಾಯಗೊಳಿಸುವುದು ಮತ್ತಷ್ಟು ಹೆಣ್ಣುಭ್ರೂಣ ಹತ್ಯೆಗೆ ಅವಕಾಶ ಮಾಡಿಕೊಡುತ್ತದೆ. ಸತತವಾಗಿ ಲಿಂಗಾನುಪಾತ ಕುಸಿಯುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಪಾಲಿಗೆ ಇದು ಮರಣಶಾಸನವೇ ಆಗಿದೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಮನೇಕಾ ಗಾಂಧಿಯವರ ಮೇಲೆ ಕಿಡಿಕಾರಿದೆ.[ಭ್ರೂಣ ಲಿಂಗ ಪತ್ತೆ ಪರೀಕ್ಷೆ ಮೇಲಿನ ನಿಷೇಧ ತೆರವು]

Maneka Gandhi

ಆರಂಭದಲ್ಲೇ ಲಿಂಗಪತ್ತೆ ಮಾಡಿ, ಹೆಣ್ಣುಭ್ರೂಣ ಹತ್ಯೆಯಾಗದಂತೆ ನಿಗಾವಹಿಸಬಹುದೆಂಬ ಕೇಂದ್ರ ಸಚಿವರ ಪ್ರಸ್ತಾಪ, ಅನಧಿಕೃತ, ಅಕ್ರಮ, ಹೆಣ್ಣು ಭ್ರೂಣ ಹತ್ಯೆಗೆ ಆಸ್ಪದ ಮಾಡಿಕೊಡಲಿದೆ. ಲಿಂಗಪತ್ತೆ ಮಾಡುವುದರಿಂದ ಗರ್ಭಿಣಿಯ ಮೇಲೆ ಕುಟುಂಬದ ಒತ್ತಡ, ಹಿಂಸೆ ಹೆಚ್ಚಾಗಲಿದ್ದೂ ಆಕೆಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರಲಿದೆ ಎಂದು ಹೇಳಿದರು.[ಗರ್ಭಾವಸ್ಥೆಯಲ್ಲಿ ಕಾಡುವ ಸಮಸ್ಯೆಗೆ, ಒಂದಿಷ್ಟು ಸಲಹೆ]

ಪಿಸಿ ಅಂಡ್ ಪಿಎನ್ ಡಿಟಿ (Pre-Conception and Pre Natal Diagnostic Techniques Act-1994) ಕಾನೂನನ್ನು ಉಲ್ಲಂಘಿಸುತ್ತಿರುವ ಮತ್ತು ಪ್ರತಿರೋಧ ಒಡ್ಡುತ್ತಿರುವ ಖಾಸಗೀ ಕಾರ್ಪೋರೇಟ್ ಪ್ರೇರಿತ ಈ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಕೂಡಲೇ ಕೈ ಬಿಡಬೇಕು, ಪಿ.ಸಿ ಅಂಡ್ ಪಿಎನ್ ಡಿಟಿ ಕಾನೂನನ್ನು ಬಲಪಡಿಸಿ ಸಮರ್ಪಕ ಜಾರಿಗಾಗಿ ಕ್ರಮಕೈಗೊಳ್ಳಬೇಕು.

"ಹೆಣ್ಣು ಮಗುವನ್ನು ಉಳಿಸಿ, ಹೆಣ್ಣು ಮಗುವನ್ನು ಓದಿಸಿ" ಎನ್ನುವ ಘೋಷಣೆ ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ, ಹೆಣ್ಣು ಮಕ್ಕಳನ್ನೇ ಇಲ್ಲವಾಗಿಸಲು ಹೊರಟಿರುವುದನ್ನು ಅಮಾನವೀಯ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.[ಗರ್ಭಿಣಿಯರ ಆರೋಗ್ಯಕ್ಕೆ ಬೇಕು, ಒಂದಿಷ್ಟು ಖರ್ಜೂರ...]

ಪಿಸಿ ಆಂಡ್ ಪಿಎನ್ ಡಿಟಿ ಕಾಯ್ದೆ -1994

ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯಲು ಇರುವಂತಹ ಕಾಯ್ದೆ. ಇದರ ಪ್ರಕಾರ ಹೆಣ್ಣು ಭ್ರೂಣ ಹತ್ಯೆ ಮಾಡಿದವರನ್ನು ಬಂಧಿಸಲಾಗುತ್ತದೆ. ಈ ಕಾಯ್ದೆಯು ಲಿಂಗ ಪತ್ತೆ ಪರೀಕ್ಷೆಯನ್ನು ನಿಷೇಧಿಸುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru Akhila Bharata Janavadi Mahila Sanghatane angree on Union Woman and Child Development Minister Maneka Gandhi. Sanghatane against that Child sex determination during the pregnancy be made compulsory.
Please Wait while comments are loading...