ಊಟ+ ಸಂಗೀತ= 189: ಏರ್ ಏಷ್ಯಾ ರಸ್ತೆಬದಿ ಆಫರ್

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 25: ಏರ್ ಏಷ್ಯಾ ಇದೇ ಮೊದಲಬಾರಿಗೆ ವಿಮಾನದಲ್ಲಿ ನೀಡುವ ಆಹಾರವನ್ನು ಬೆಂಗಳೂರಿನ ಬೀದಿಯಲ್ಲಿ ನೀಡುವ ವ್ಯವಸ್ಥೆಯನ್ನು ಮಾಡಿದೆ. ಜೊತೆಗೊಂದಿಷ್ಟು ಸಂಗೀತವೂ ಸೇರಿದರೆ ಭೋಜನ ಪ್ರಿಯರಿಗೆ ಅದಕ್ಕಿಂತ ಮತ್ತೇನು ಬೇಕು.

'ಸಂತಾನ್ ಫೇವರ್ ಆನ್ ವೀಲ್ಸ್' ಎಂಬ ನಾಮಫಲಕದೊಂದಿಗೆ ಬಿಎಲ್ ಆರ್ ಫುಡ್ ಟ್ರಕ್ ಮತ್ತು ಮ್ಯೂಸಿಕ್ ಫೆಸ್ಟಿವಲ್ ನಲ್ಲಿ ರು 189ಗೆ ಮೊದಲೇ ಬುಕ್ ಮಾಡಿದರೆ ವಿಮಾನದಲ್ಲಿ ಸವಿಯುವ ಉತ್ತಮ ಆಹಾರವನ್ನು ಸವಿಯಬಹುದು. ಈ ಆಹಾರದಲ್ಲಿ ವಿವಿಧ ಮಾದರಿಯ ಫ್ಲೇವರ್, ನೀವು ಇಂದೆಂದೂ ಸವಿಯದೇ ಇರುವಂತಹ ತಿಂಡಿ-ತಿನಿಸನ್ನು ಇಲ್ಲಿ ಸವಿಯಬಹುದಾಗಿದೆ.[ಚುರುಮುರಿ ಸವಿಯುವ ಸುಖಕ್ಕೆ ಒಮ್ಮೆಯಾದರೂ ಇಲ್ಲಿ ಹೋಗ್ಬೇಕು!]

food truck

ಮೊದಲೇ www.air asia.com ಗೆ ಲಾಗ್ ಆನ್ ಆಗಿ ಅಲ್ಲಿ ನಿಮಗೆ ಕಾಣುವ ವಿವಿಧ ಆಹಾರ ಮಾದರಿಯನ್ನು ಆಯ್ಕೆ ಮಾಡಿಕೊಂಡು ಎಷ್ಟು ಜನ ನಮೂದಿಸಿದರೆ ಸಾಕು ನೀವು ಎಲ್ಲ ವಿವರ ತಾನಾಗಿಯೇ ತಿಳಿಯುತ್ತದೆ.
ಅಲ್ಲದೆ ಆ ಸ್ಥಳದಲ್ಲಿ ಬಿಎಲ್ಆರ್ ಫುಡ್ ಟ್ರಕ್ ಜೊತೆ ದಿನೇಶ್ ಸೇಠ್ ಎನ್ಟರ್ಟೈನರ್ ಅವರ ಸುಮಧುರ ಸಂಗೀತವೂ ನಿಮ್ಮನ್ನು ರಂಜಿಸಲಿದೆ.

food truck

ಅಂದಹಾಗೆ ಅಂತಹ ಆಹಾರ ದೊರೆಯುವ ಸ್ಥಳ ದಿನ ಯಾವುದು ಎಂದರೆ..
ಸ್ಥಳ: ಬೆಂಗಳೂರಿನ ಪೆಬೆಲ್, ದ ಜಂಗಲ್ ಲಾಗ್
ದಿನ: ನ.27
ಸಮಯ: ಬೆಳಗ್ಗೆ 11 ಗಂಟೆಯಿಂದ ರಾತ್ರಿ 11 ಗಂಟೆವರೆಗೆ
ಫೋನ್ ನಂ: 18605008000
ಜಾಲ ತಾಣ: www.airasia.com

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
AirAsia India has put together a first of its kind endeavor to take our inflight food to the streets of Bengaluru."Santan - Flavours on Wheels", has in store for all, our latest food menu with new pricing of Rs 189/- for our Pre-Book meals on www.airasia.com which makes it a treat on the pocket and the palate
Please Wait while comments are loading...