ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಗೋವಾಕ್ಕೆ ರೂ.990ಕ್ಕೆ ವಿಮಾನ ಸಂಚಾರ

|
Google Oneindia Kannada News

ಬೆಂಗಳೂರು, ಮೇ 31 : ಮಲೇಷ್ಯಾ ಮೂಲದ ಏರ್ ಏಷ್ಯಾ ಕಂಪನಿ ಬೆಂಗಳೂರು ಮತ್ತು ಗೋವಾ ನಡುವೆ ಹೊಸ ವಿಮಾನ ಸೇವೆಯನ್ನು ಆರಂಭಿಸಲಿದೆ. ಈ ನಗರಗಳ ನಡುವಿನ ಪ್ರಯಾಣದರವನ್ನು ರೂ.990ಎಂದು ನಿಗದಿಪಡಿಸಲಾಗಿದ್ದು, ಜೂನ್ 12ರಿಂದ ಈ ಹಾರಾಟ ಆರಂಭವಾಗಲಿದೆ.

ಬೆಂಗಳೂರು-ಗೋವಾ ನಡುವಿನ ಪ್ರಯಾಣಕ್ಕೆ ರೂ 990 ದರವನ್ನು ತೆರಿಗೆ ಸೇರಿಸಿ ನಿಗದಿಗೊಳಿಸಲಾಗಿದೆ ಎಂದು ಸಂಸ್ಥೆಯ ಸಿಇಓ ಮಿಟ್ಟು ಚಾಂಡಿಲ್ಯ ಹೇಳಿದ್ದಾರೆ. ಮೇ 30ರ ಮಧ್ಯರಾತ್ರಿಯಿಂದಲೇ ಕಂಪೆನಿಯ ವೆಬ್‌ ­ಸೈಟ್‌ ಮೂಲಕ ಮುಂಗಡ ಟಿಕೆಟ್‌ ಕಾಯ್ದಿರಿ­ಸಲು ಅವಕಾಶ ಕಲ್ಪಿಸಲಾಗಿದೆ.

AirAsia

ಇತರ ವಿಮಾನಯಾನ ಕಂಪನಿಗಳು ಬೆಂಗಳೂರು-ಗೋವಾ ನಡು­ವಿನ ಏಕಮುಖ ಪ್ರಯಾಣಕ್ಕೆ ಸುಮಾರು 5 ಸಾವಿರ ರೂ.ದರ ವಿಧಿಸುತ್ತವೆ. ಆದರೆ, ಏರ್ ಏಷ್ಯಾ 990 ದರ ನಿಗದಿ ಮಾಡುವ ಮೂಲಕ ದರ ಸಮರಕ್ಕೆ ಮುನ್ನುಡಿ ಬರೆದಿದೆ. ಇದರಿಂದಾಗಿ ಉಳಿದ ಕಂಪನಿಗಳು ಸಹ ದರವನ್ನು ಕಡಿಮೆ ಮಾಡುವ ಅನಿವಾರ್ಯತೆಗೆ ಎದುರಾಗಿದೆ.

ಕಂಪನಿಯ ದರ ಸಮರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಇಓ ಮಿಟ್ಟು ಚಾಂಡಿಲ್ಯ "ಪ್ರತಿಯೊಬ್ಬ ಭಾರತೀಯರಿಗೂ ವಿಮಾ­­ನ­ದಲ್ಲಿ ಪ್ರಯಾ­ಣಿಸಲು ಅವ­ಕಾಶ ಲಭಿಸಬೇಕು" ಎನ್ನುವುದು ನಮ್ಮ ಕಂಪನಿಯ ಉದ್ದೇಶ. ಆದ್ದರಿಂದ ಮಾರುಕಟ್ಟೆ ದರಕ್ಕಿಂತ ಕಡಿಮೆ ದರ ನಿಗದಿಪಡಿ­ಸಿದ್ದೇವೆ ಎಂದು ಹೇಳಿದ್ದಾರೆ. [ಏರ್ ಏಷ್ಯಾ ವೆಬ್ ಸೈಟ್]

ಮೊದಲ ಹಾರಾಟ : ಜೂನ್‌ 12ರಂದು ಏರ್‌ ಏಷ್ಯಾದ ಮೊದಲ ವಿಮಾನ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾ­ಣಬೆಳಸಲಿದೆ. ಗೋವಾದಿಂದ ಮರಳಿ 6 ಗಂಟೆಗೆ ಬೆಂಗಳೂರಿಗೆ ವಾಪಸ್ ಆಗಲಿದೆ. ವಾರದ ಎಲ್ಲ ದಿನಗಳಲ್ಲೂ ಈ ಸೇವೆ ಲಭ್ಯವಿರಲಿದೆ.

ಹೊಸದಾಗಿ ಬಂದ ಸಂಸ್ಥೆ : ಏರ್ ಏಷ್ಯಾ ನೂತನವಾಗಿ ವಿಮಾನಯಾನ ಕ್ಷೇತ್ರಕ್ಕೆ ಕಾಲಿಟ್ಟಿದೆ. ಟಾಟಾ ಸನ್ಸ್‌ ಹಾಗೂ ಅರುಣ್ ಭಾಟಿಯಾ ಒಡೆತನದ ಟೆಲೆಸ್ಟ್ರಾ ಟ್ರೇಡ್‌­ ಪ್ಲೇಸ್ ಸಂಸ್ಥೆಯ ಜಂಟಿ ಪಾಲು­ದಾರಿಕೆಯಲ್ಲಿ ಏರ್‌ ಏಷ್ಯಾ ಭಾರತದ ವಿಮಾ­­ನಯಾನ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದೆ.

ಇತರ ನಗರಗಳಿಗೂ ವಿಸ್ತರಣೆ : ಏರ್ ಏಷ್ಯಾ ಕಂಪನಿ 2014-15ನೇ ಸಾಲಿನ ಹಣ­ಕಾಸು ವರ್ಷದ ಅಂತ್ಯದ ವೇಳೆಗೆ ಬೆಂಗಳೂರು-ಚೆನ್ನೈ ಸೇರಿದಂತೆ ಇನ್ನೂ 10 ನಗರಗಳಿಗೆ ವಿಮಾನಯಾನ ಸೇವೆ ವಿಸ್ತರಿಸುವ ಗುರಿ ಹೊಂದಿದೆ. ವಿಮಾ­ನ­ಗಳ ಸಂಖ್ಯೆಯನ್ನು 10ಕ್ಕೆ ಹೆಚ್ಚಲಿಸಲು ಚಿಂತನೆ ನೆಡೆಸಿದೆ. ಆದರೆ, ದೆಹಲಿ ಮತ್ತು ಮುಂಬೈ ನಿಲ್ದಾಣಗಳಿಗೆ ಹಾರಾಟ ವಿಸ್ತರಣೆ ಸದ್ಯಕ್ಕೆ ಮಾಡುವುದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

English summary
The much-awaited AirAsia India on Friday announced its maiden flight from Bangalore to Goa for Rs 990 starting June 12. AirAsia India will begin operating flights from June 12, with ticket sales having started on Friday, May 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X