ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಬೆಳೆದಂತೆ ವಾಯು ಮಾಲಿನ್ಯವೂ ಹೆಚ್ಚಾಗುತ್ತಿದೆ!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 18 : ಉದ್ಯಾನ ನಗರಿ ಬೆಂಗಳೂರು ದಿನದಿಂದ ದಿನಕ್ಕೆ ಬೆಳೆಯುತ್ತಿರುವಂತೆ ವಾಯು ಮಾಲಿನ್ಯವೂ ಹೆಚ್ಚಾಗುತ್ತಿದೆ. ವೈಟ್ ಫೀಲ್ಡ್, ದೊಮ್ಮಲೂರು ಭಾಗದಲ್ಲಿನ ವಾಯು ಮಾಲಿನ್ಯದ ಪ್ರಮಾಣ ದುಪ್ಪಟ್ಟು ಹೆಚ್ಚಿದ್ದು, ಆತಂಕಕ್ಕೆ ಕಾರಣವಾಗಿದೆ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಈ ಕುರಿತು ಅಧ್ಯಯನ ನಡೆಸಿದೆ. ಕಳೆದ ಒಂದು ವರ್ಷಕ್ಕೆ ಹೋಲಿಕೆ ಮಾಡಿದರೆ ವಾಯು ಮಾಲಿನ್ಯ ಪ್ರಮಾಣ ಬೆಂಗಳೂರು ನಗರದಲ್ಲಿ ಹೆಚ್ಚಾಗುತ್ತಲೇ ಇದೆ. ಸಾರಿಗೆ ವಲಯವೇ ವಾಯು ಮಾಲಿನ್ಯ ಅಧಿಕವಾಗಲು ಕಾರಣ ಎಂಬ ಸಂಗತಿಯೂ ಬಯಲಾಗಿದೆ.

ಹೆಚ್ಚುತ್ತಿರುವ ವಾಯು ಮಾಲಿನ್ಯ: ಸುಪ್ರೀಂ ಕೋರ್ಟ್ ಆತಂಕಹೆಚ್ಚುತ್ತಿರುವ ವಾಯು ಮಾಲಿನ್ಯ: ಸುಪ್ರೀಂ ಕೋರ್ಟ್ ಆತಂಕ

Air pollution : Bengaluru continue to record higher than permissible limits

ಧೂಳಿನ ಕಣಗಳ ರಾಷ್ಟ್ರೀಯ ಪ್ರಮಾಣವನ್ನು 1 ಸಾವಿರ ಲೀಟರ್ ಗಾಳಿಗೆ 60 ಮೈಕ್ರೋ ಗ್ರಾಂಗಳಿಗೆ ಮಿತಿಗೊಳಿಸಲಾಗಿದೆ. ಆದರೆ, ದೊಮ್ಮಲೂರು ಭಾಗದಲ್ಲಿ 2016-17ನೇ ಸಾಲಿನಲ್ಲಿ 120 ಮೈ.ಗ್ರಾಂ ಧೂಳಿನ ಕಣಗಳಿವೆ. ಆದ್ದರಿಂದ, ಮಾಲಿನ್ಯದ ಪ್ರಮಾಣ ದುಪ್ಪಟ್ಟಾಗಿದೆ.

ವಾಯುಮಾಲಿನ್ಯ: ಆತಂಕದ ಸ್ಥಿತಿಯಲ್ಲಿ ರಾಜ್ಯದ ನಗರಗಳುವಾಯುಮಾಲಿನ್ಯ: ಆತಂಕದ ಸ್ಥಿತಿಯಲ್ಲಿ ರಾಜ್ಯದ ನಗರಗಳು

ವೈಟ್ ಫೀಲ್ಡ್ ಭಾಗದಲ್ಲಿ ವರ್ಷದಿಂದ ವರ್ಷಕ್ಕೆ ವಾಯು ಮಾಲಿನ್ಯ ಪ್ರಮಾಣ ಕಡಿಮೆ ಆಗುತ್ತಿದೆ. ಕಳೆದ ಐದು ವರ್ಷಗಳಿಂದ ಈ ಭಾಗದಲ್ಲಿ ಮಾಲಿನ್ಯ ಪ್ರಮಾಣ ಏರುತ್ತಲೇ ಇದ್ದು, ಈ ವರ್ಷ 83 ಮೈ.ಗ್ರಾಂ ದಾಖಲಾಗಿದೆ. ವಾಹನಗಳ ಹೊಗೆಯಿಂದಲೇ ಮಾಲಿನ್ಯ ಹೆಚ್ಚುತ್ತಿದೆ. ಪೆಟ್ರೋಲ್, ಡೀಸೆಲ್ ವಾಹನಗಳು ನಿಗದಿಗಿಂತ ಹೆಚ್ಚು ಹೊಗೆ ಸೂಸುತ್ತಿರುವುದು ಅಧ್ಯಯನ ಮೂಲಕ ಬಯಲಾಗಿದೆ.

ಮೈಸೂರ ರಸ್ತೆಯಲ್ಲಿ ಕಳೆದ ವರ್ಷ 119 ಮೈ.ಗ್ರಾಂ ಧೂಳಿನ ಕಣಗಳು ದಾಖಲಾಗಿದ್ದವು. ಈ ವರ್ಷ ಅದು 107 ಮೈ.ಗ್ರಾಂ ಗೆ ಇಳಿಮುಖವಾಗಿದೆ. ಯಶವಂತಪುರದಲ್ಲಿ ಕಳೆದ ವರ್ಷ 105 ಇದ್ದ ಪ್ರಮಾಣ ಈ ಬಾರಿ 93 ಮೈ.ಗ್ರಾಂ ಗೆ ಇಳಿಕೆಯಾಗಿದೆ.

ಇತರ ಪ್ರದೇಶದ ವಿವರಗಳು : ನಗರದ ಇತರ ಪ್ರದೇಶಗಳಲ್ಲಿ ಹೆಚ್ಚಿರುವ ಧೂಳಿನ ಕಣಗಳ ದಾಖಲಾತಿ (ಮೈ.ಗ್ರಾಂ ಗಳಲ್ಲಿ). ಐಟಿಪಿಎಲ್ 131, ಯಲಹಂಕ 111, ಪೀಣ್ಯ 109, ಹೊಸೂರು ರಸ್ತೆ 132, ನಗರ ರೈಲು ನಿಲ್ದಾಣ 102, ಬಾಣಸವಾಡಿ 80, ವಿಕ್ಟೋರಿಯಾ ರಸ್ತೆ 127.

English summary
Bengaluru continue to record higher than permissible limits of air pollution. All monitoring stations continue to record higher than permissible limits of air pollution. The national limit is 60 micrograms per cubic meter said report of Karnataka State Pollution Control Board (KSPCB).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X