ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನ.11 ರಿಂದ ಬೆಂಗಳೂರು-ಹುಬ್ಬಳ್ಳಿ ನಡುವೆ ಬೆಳಗ್ಗೆ ವಿಮಾನ ಹಾರಾಟ

|
Google Oneindia Kannada News

ಬೆಂಗಳೂರು, ನವೆಂಬರ್ 03 : ಬೆಂಗಳೂರು-ಹುಬ್ಬಳ್ಳಿ ನಡುವೆ ನವೆಂಬರ್ 11ರಿಂದ ಬೆಳಗಿನ ಹೊತ್ತು ವಿಮಾನ ಸೇವೆ ಆರಂಭವಾಗಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ ಎಂದು ಏರ್‌ಪೆಗಾಸಸ್ ಹೇಳಿದೆ.

2015ರ ಏಪ್ರಿಲ್‌ನಿಂದ ಏರ್ ಪೆಗಾಸಸ್‌ನ ಒಂದು ವಿಮಾನ ಬೆಂಗಳೂರು-ಹುಬ್ಬಳ್ಳಿ ನಡುವೆ ಪ್ರತಿದಿನ ಸಂಚಾರ ನಡೆಸುತ್ತಿದೆ. ಈ ವಿಮಾನ ಸಂಜೆ ಸಂಚಾರ ನಡೆಸುತ್ತದೆ. ಆದ್ದರಿಂದ, ಸಂಸ್ಥೆ ಬೆಳಗಿನ ವಿಮಾನ ಸೇವೆಯನ್ನು ಆರಂಭಿಸುತ್ತಿದೆ. [ಹುಬ್ಬಳ್ಳಿಗೆ ಸ್ಪೈಸ್ ಜೆಟ್ ಹಾರಾಟ ಸ್ಥಗಿತ]

air pegasus

ವೇಳಾಪಟ್ಟಿ : ನವೆಂಬರ್ 11ರ ಬುಧವಾರದಿಂದ ಬೆಂಗಳೂರು-ಹುಬ್ಬಳ್ಳಿ ನಡುವೆ ಬೆಳಗ್ಗೆ ವಿಮಾನ ಹಾರಾಟ ಆರಂಭವಾಗಲಿದೆ. www.airpegasus.in ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಟಿಕೆಟ್ ಕಾಯ್ದಿರಿಸಬಹುದಾಗಿದೆ. [ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣ ಅಭಿವೃದ್ಧಿ]

ಬೆಳಗ್ಗೆ 7.30ಕ್ಕೆ ಬೆಂಗಳೂರಿನಿಂದ ಹೊರಡುವ ವಿಮಾನ 8.15ಕ್ಕೆ ಹುಬ್ಬಳ್ಳಿ ತಲುಪಲಿದೆ. 8.40ಕ್ಕೆ ಹುಬ್ಬಳ್ಳಿಯಿಂದ ಹೊರಡಲಿರುವ ವಿಮಾನ 9.30ಕ್ಕೆ ಬೆಂಗಳೂರಿಗೆ ವಾಪಸ್ ಆಗಲಿದೆ. [ಬೆಂಗಳೂರು-ಕಡಪ ನಡುವೆ ಏರ್‌ ಪೆಗಾಸಸ್ ವಿಮಾನ ಸೇವೆ]

2015ರ ಜುಲೈನಲ್ಲಿಯೇ ಏರ್ ಪೆಗಾಸಸ್ ಬೆಂಗಳೂರು-ಹುಬ್ಬಳ್ಳಿ ನಡುವೆ ಮತ್ತೊಂದು ವಿಮಾನ ಸೇವೆ ಆರಂಭಿಸಲು ನಿರ್ಧರಿಸಿತ್ತು. ಅದು ಈಗ ಕಾರ್ಯರೂಪಕ್ಕೆ ಬಂದಿದ್ದು, ನವೆಂಬರ್ 11ರಿಂದ ಹಾರಾಟ ಆರಂಭವಾಗಲಿದೆ. [ಟಿಕೆಟ್ ಬುಕ್ ಮಾಡಲು ವಿಳಾಸ]

ಸ್ಪೈಸ್ ಜೆಟ್ ಹಾರಾಟ ನಡೆಸುತ್ತಿತ್ತು : ಮೊದಲು ಹುಬ್ಬಳ್ಳಿಗೆ ಸ್ಪೈಸ್‌ಜೆಟ್ ವಿಮಾನಯಾನ ಸೇವೆ ನೀಡುತ್ತಿತ್ತು. 2015ರ ಮಾ.8ರಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ವೇಳೆ ಅಪಘಾತ ಸಂಭವಿಸಿತ್ತು. ಇದರಿಂದಾಗಿ ವಿಮಾನ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

English summary
From November 11, 2015 Air Pegasus will introduce morning flight between the Bengaluru and Hubballi. Air Pegasus begins operations between Hubballi-Bengaluru on April 12, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X