ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿಯ ವಾಯುವಜ್ರ ಬಸ್ ನಲ್ಲಿ ದೊರೆಯಲಿದೆ ಬೋರ್ಡಿಂಗ್ ಪಾಸ್!

|
Google Oneindia Kannada News

ಬೆಂಗಳೂರು, ಮಾರ್ಚ್ 2: ಇನ್ನುಮುಂದೆ ಬೋರ್ಡಿಂಗ್ ಪಾಸ್ ಗಳಿಗಾಗಿ ವಿಮಾನ ನಿಲ್ದಾಣದಲ್ಲಿ ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲುವ ತೊಂದರೆ ತಪ್ಪಲಿದೆ. ಏಕೆಂದರೆ ಇನ್ನು ಬಿಎಂಟಿಸಿಯ ವಾಯುವಜ್ರ ಬಸ್ ನಲ್ಲಿ ಬೋರ್ಡಿಂಗ್ ಪಾಸ್ ದೊರೆಯಲಿದೆ.
ಬಿಎಂಟಿಸಿ ಮತ್ತು ಕೆಐಎಎಲ್ ಸಂಸ್ಥೆಗಳು ವಿಮಾನ ಪ್ರಯಾಣಿಕರಿಗೆ ವಾಯುವಜ್ರ ಬಸ್ ಗಳಲ್ಲೇ ಬೋರ್ಡಿಂಗ್ ಪಾಸ್ ಪಡೆಯುವ ವ್ಯವಸ್ಥೆ ಮಾಡಿಕೊಟ್ಟಿವೆ. ವಿಮಾನ ನಿಲ್ದಾಣದ ಆವರಣದಲ್ಲಿರುವ ಸೆಲ್ಫ್ ಚೆಕ್ ಇನ್ ಬೋರ್ಡಿಂಗ್ ಪಾಸ್ ವಿತರಿಸುವ ಕಿಯೋಸ್ಕ್ ಯಂತ್ರವನ್ನು ಬಸ್ ನಲ್ಲಿ ಅಳವಡಿಸಲಾಗಿದೆ.

ಹೀಗಾಗಿ, ಬಿಎಂಟಿಸಿ ವಾಯುವಜ್ರ ಬಸ್ ಗಳಲ್ಲಿ ಸಂಚರಿಸುವವರು ಪ್ರಯಾಣದ ಮಧ್ಯೆಯೇ ಮುದ್ರಿತ ಬೋರ್ಡಿಂಗ್ ಪಾಸ್ ಪಡೆದುಕೊಳ್ಳಬಹುದಾಗಿದೆ. ನಗರದ ಎಲೆಕ್ಟ್ರಾನಿಕ್ ಸಿಟಿಯಿಂದ ಕೆಐಎಎಲ್ ಗೆ ಸಂಚರಿಸುವ ಮಾರ್ಗ ಸಂಖ್ಯೆ 8ರ ವಾಯುವಜ್ರ ಬಸ್ ನಲ್ಲಿ ಪ್ರಾಯೋಗಿಕವಾಗಿ ಕಿಯೋಸ್ಕ್ ಯಂತ್ರವನ್ನು ಅಳವಡಿಸಲಾಗಿದೆ.

ವೋಲ್ವೋ ಬಸ್ ಗಳ ಪ್ರಯಾಣ ದರ ಮತ್ತೆ ಇಳಿಕೆವೋಲ್ವೋ ಬಸ್ ಗಳ ಪ್ರಯಾಣ ದರ ಮತ್ತೆ ಇಳಿಕೆ

ವಿಮಾನ ಪ್ರಯಾಣಿಕರು ತಮ್ಮ ಟಿಕೆಟಿನ ಪಿಎನ್ ಆರ್ ಸಂಖ್ಯೆಯನ್ನು ನಮೂದಿಸಿ, ಬೋರ್ಡಿಂಗ್ ಪಾಸ್ ಪಡೆಯಬಹುದಾಗಿದೆ. ಈ ವ್ಯವಸ್ಥೆಯಿಂದ ಪ್ರಯಾಣಿಕರು ಪಾಸ್ ಪಡೆಯಲು ಸರದಿ ಸಾಲಿನಲ್ಲಿ ನಿಲ್ಲುವ ಬದಲಾಗಿ ನೇರವಾಗಿ ಭದ್ರತಾ ತಪಾಸಣಾ ಸ್ಥಳಕ್ಕೆ ತೆರಳಬಹುದು. ಈ ಮೊದಲು ಮೆಜೆಸ್ಟಿಕ್- ಕೆಐಎಎಲ್ ನಡುವೆ ಸಂಚರಿಸುವ ಮಾರ್ಗ 9ರಲ್ಲಿ ಈ ಸೇವೆ ಕಲ್ಪಿಸಿತ್ತು.

Air passenger can get boarding pass in Bmtc bus

ಜನವರಿಯಿಂದ 15 ದಿನಗಳ ಕಾಲ ಮೆಜೆಸ್ಟಿಕ್ ನಿಂದ ವಿಮಾನ ನಿಲ್ದಾಣಕ್ಕೆ ಕಾರ್ಯಾಚರಣೆಗೊಳ್ಳುವ ಬಸ್ ನಲ್ಲಿ ಕಿಯೋಸ್ಕ್ ಯಂತ್ರ ಅಳವಡಿಸಲಾಗಿತ್ತು ಸುಮಾರು 60೦ ಮಂದಿ ಬೋರ್ಡಿಂಗ್ ಪಾಸ್ ಪಡೆದಿರುವುದಾಗಿ ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೋಲ್ವೋ ಪ್ರಯಾಣಿಕರ ಸಂಖ್ಯೆ ಹೆಚ್ಚಳ: ಆದರೂ ಆದಾಯದಲ್ಲಿ ಕುಸಿತವೋಲ್ವೋ ಪ್ರಯಾಣಿಕರ ಸಂಖ್ಯೆ ಹೆಚ್ಚಳ: ಆದರೂ ಆದಾಯದಲ್ಲಿ ಕುಸಿತ

ವಾಹನ ದಟ್ಟಣೆ: ಬಿಎಂಟಿಸಿ ಸಂಚಾರದಲ್ಲಿ ದಿನಕ್ಕೆ 1.5 ಲಕ್ಷ ಕಿ.ಮೀ ಕತ್ತರಿವಾಹನ ದಟ್ಟಣೆ: ಬಿಎಂಟಿಸಿ ಸಂಚಾರದಲ್ಲಿ ದಿನಕ್ಕೆ 1.5 ಲಕ್ಷ ಕಿ.ಮೀ ಕತ್ತರಿ

English summary
KIAL and BMTC have mou to facilitate boarding passes for air passenger in vajra bmtc bus to avoid standing for boarding passes in the airport of air passengers.So you can get this in BMTC vajra bus only. Self check in Kiosk has been installed in bmtc bus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X