ಏರ್ ಆಂಬ್ಯುಲೆನ್ಸ್ ಗೆ ಅಧಿಕೃತವಾಗಿ ಗ್ರೀನ್ ಸಿಗ್ನಲ್

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 16: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ಖಾಸಗಿ ಏರ್ ಆಂಬ್ಯುಲೆನ್ಸ್ ಸೇವೆಯನ್ನು ಶುಕ್ರವಾರ ಉದ್ಘಾಟಿಸಿದರು. ಏವಿಯೇಟರ್ಸ್ ಏರ್ ರೆಸ್ಕ್ಯೂ ಸಂಸ್ಥೆ ಕರ್ನಾಟಕದಲ್ಲಿ ಈ ಸೇವೆ ಒದಗಿಸಲು ಮುಂದಾಗಿದೆ.

ಅಪಘಾತಗಳಲ್ಲಿ ಗಾಯಗೊಂಡ ಮತ್ತು ತುರ್ತು ಚಿಕಿತ್ಸೆ ಅವಶ್ಯವಿರುವ ಹೃದಯ ರೋಗಿಗಳಿಗೆ ತ್ವರಿತವಾಗಿ ಆಸ್ಪತ್ರೆಗೆ ದಾಖಲಿಸಲು ಬೆಂಗಳೂರಿನ ಏವಿಯೇಟರ್‌ ಸಂಸ್ಥೆಯು ಏರ್‌ ಆಂಬುಲೆನ್ಸ್‌ ಸೇವೆ ಆರಂಭಿಸಿದೆ.

ಯಾವುದಾದರೂ ಖಾಸಗಿ ಹೆಲಿಕಾಪ್ಟರ್ ಸೇವೆ ಪಡೆದು ದಾವಣಗೆರೆಯಿಂದ ಬೆಂಗಳೂರಿಗೆ ಹೋಗಿ ಬರಲು ಕನಿಷ್ಠ 3 ಲಕ್ಷ ರೂ. ವೆಚ್ಚವಾಗುತ್ತದೆ.ಅಷ್ಟು ಹಣ ಭರಿಸುವುದು ಎಲ್ಲರಿಗೂ ಸಾಧ್ಯವಾಗದ ಮಾತು.ಇದಕ್ಕಾಗಿಯೇ ಏವಿಯೇಟರ್ಸ್ ಏರ್ ರೆಸ್ಕ್ಯೂ ಕಂಪನಿ ಹೊಸ ಯೋಜನೆಯೊಂದನ್ನು ಜನರ ಮುಂದಿಡುತ್ತಿದೆ. ಕಳೆದ ಆರು ತಿಂಗಳಿನಿಂದ ಪ್ರಾಯೋಗಿಕವಾಗಿ ಈ ಸೇವೆ ಜಾರಿಯಲ್ಲಿತ್ತು.

ಆಂಬುಲೆನ್ಸ್ ನಲ್ಲಿ ಏನಿಲ್ಲ ಇರಲಿದೆ

ಆಂಬುಲೆನ್ಸ್ ನಲ್ಲಿ ಏನಿಲ್ಲ ಇರಲಿದೆ

ಆಂಬುಲೆನ್ಸ್‌ ಸೇವೆಗೆ 'ಏರ್‌ಬಸ್‌ ಎಚ್‌1' ಕಾಪ್ಟರ್‌ ಬಳಕೆ ಮಾಡಲಾಗುವುದು. ಕಾಪ್ಟರ್‌ನಲ್ಲಿ ರೋಗಿಗೆ ಪ್ರಥಮ ಚಿಕಿತ್ಸೆ ನೀಡಲು ಇಬ್ಬರು ಪ್ಯಾರಾ ಮೆಡಿಕಲ್‌ ಸಿಬ್ಬಂದಿ, ಇಬ್ಬರು ಪೈಲಟ್‌ ಗಳು ಕಾರ್ಯನಿರ್ವಹಿಸಲಿದ್ದಾರೆ. ಅತ್ಯಾಧುನಿಕ ಗುಣಮಟ್ಟದ ಐಸಿಯು ಮತ್ತು ವೈದ್ಯಕೀಯ ಉಪಕರಣಗಳು ಹೆಲಿಕಾಪ್ಟರ್‌ನಲ್ಲಿ ಲಭ್ಯ ಇರಲಿವೆ ಎಂದು ತಿಳಿಸಿದರು.

ಎಷ್ಟು ಮೊತ್ತ ತಗುಲಲಿದೆ

ಎಷ್ಟು ಮೊತ್ತ ತಗುಲಲಿದೆ

ಪತಿ, ಪತ್ನಿ, 18ವರ್ಷದೊಳಗಿನ ಎರಡು ಮಕ್ಕಳನ್ನು ಒಳಗೊಂಡ ಒಂದು ಕುಟುಂಬ ಪ್ರತಿ ವರ್ಷ ಕಂಪನಿಗೆ 17,999 ರೂ. ಪಾವತಿಸಬೇಕು. ಯೊಜನೆಯ ಸದಸ್ಯತ್ವ ಪಡೆದ ಕುಟುಂಬದವರಿಗೆ ವರ್ಷದಲ್ಲಿ 3 ಬಾರಿ ಹೆಲಿಕಾಪ್ಟರ್ ಅಗತ್ಯವಿದ್ದರೂ ನೀಡಲಾಗುವುದು ಎನ್ನುತ್ತಾರೆ ಕಂಪನಿಯ ಅಧಿಕಾರಿಗಳು. ಏವಿಯೇಟರ್ಸ್ ಏರ್ ರೆಸ್ಕ್ಯೂ ಕಂಪನಿ ಅಮೆರಿಕದ ಏರ್ ಮೆಡಿಕಲ್ ಗ್ರೂಪ್ ಆಫ್ ಹೋಲ್ಡಿಂಗ್ ಕಂಪನಿಯೊಂದಿಗೆ ಸಹಭಾಗಿತ್ವ ಪಡೆದಿದೆ.

ಪ್ರಾಯೋಗಿಕ ಪ್ರಯೋಗ

ಪ್ರಾಯೋಗಿಕ ಪ್ರಯೋಗ

ದಾವಣಗೆರೆಯ ಬಾಪೂಜಿ ಬ್ಯಾಂಕ್‌ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಭೀಮಾ ಶಂಕರ ಎಸ್. ಗುಳೇದ ಅವರು ಏರ್ ಆಂಬ್ಯುಲೆನ್ಸ್ ಯೋಜನೆಗೆ ಚಾಲನೆ ನೀಡಿದರು. ರಾಜ್ಯದಲ್ಲೇ ಮೊದಲ ಬಾರಿಗೆ ಹೆಲಿಕಾಪ್ಟರ್‌ ಆಂಬುಲೆನ್ಸ್‌ ಸೇವೆಯ ಯೋಜನೆಗೆ ಮೇ 5ರಂದು ಗುರುವಾರ ಚಾಲನೆ ನೀಡಲಾಯಿತು.

ಮುಂದಿನ ಯೋಜನೆ ಏನು?

ಮುಂದಿನ ಯೋಜನೆ ಏನು?

ಏವಿಯೇಟರ್ಸ್ ಏರ್ ರೆಸ್ಕ್ಯೂ ಕಂಪನಿ ಅಮೆರಿಕದ ಏರ್ಮೆಡಿಕಲ್ ಗ್ರೂಪ್ ಆಫ್ ಹೋಲ್ಡಿಂಗ್ ಕಂಪನಿಯೊಂದಿಗೆ ಸಹಭಾಗಿತ್ವ ಪಡೆದಿದೆ. ಕಂಪನಿಯು ಮೊದಲ ಹಂತದಲ್ಲಿ ತಲಾ 30ಕೋಟಿ ವೆಚ್ಚದ 3 ಹೆಲಿಕಾಪ್ಟರ್ ಖರೀದಿಸಲಿದೆ.2ನೇ ಹಂತದಲ್ಲಿ 6 ಹೆಲಿಕಾಪ್ಟರ್, ಮುಂದಿನ 5 ವರ್ಷಗಳಲ್ಲಿ 50 ಹೆಲಿಕಾಪ್ಟರ್ ಹೊಂದುವುದು ಕಂಪನಿಯ ಯೋಜನೆಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Air or Helicopter Ambulance service launched today by CM Siddaramaiah at HAL airport Bengaluru. Aviators Air Rescue company, Bengaluru has has inked a deal with Karnataka Health Department to carry out Air Ambulance in Karnataka.
Please Wait while comments are loading...