ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಬೀದರ್‌ಗೆ ರಾಹುಲ್‌ ಗಾಂಧಿ: 3 ಲಕ್ಷ ಜನರನ್ನುದ್ದೇಶಿಸಿ ಭಾಷಣ

By Nayana
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಆಗಸ್ಟ್ 7: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಆಗಸ್ಟ್ 13ರಂದು ರಾಜ್ಯಕ್ಕೆ ಆಗಮಿಸುತ್ತಿದ್ದು, ಬೀದರ್‌ನಲ್ಲಿ ಸಮಾವೇಶವೊಂದರಲ್ಲಿ ಪಾಲ್ಗೊಳ್ಳಲಿದ್ದು ಮೂರು ಲಕ್ಷ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಕೆಪಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

  ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಇದು ಮಹತ್ವದ ಕಾರ್ಯಕ್ರಮವಾಗಿರಲಿದೆ. ಕ್ವಿಟ್ ಇಂಡಿಯಾ ಚಳುವಳಿಯ ಸ್ಮರಣೆಗಾಗಿ ಆ.9ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯಕ್ರಮ ನಡೆಯಲಿದ್ದು, ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಕೂಡ ಕಾರ್ಯಕ್ರಮ ನಡೆಯಲಿದೆ. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಪಾಲ್ಗೊಂಡವರಿಗೆ ಆಹ್ವಾನ ನೀಡಲಾಗಿದೆ.

  ಮಹಿಳಾ ಘಟಕ ಬಲ ಪಡಿಸಲು ರಾಹುಲ್ ಒತ್ತು, ಇಂದು ಮಹತ್ವದ ಸಭೆ

  ರಾಜ್ಯದ ಪ್ರತಿನಿಧಿ ನಿರ್ಮಲಾ ಸೀತಾರಾಮನ್ ದೇಶದ ಇಲಾಖೆ ನಿರ್ವಹಿಸುತ್ತಿದ್ದಾರೆ. ಆದರೆ ಕೇಂದ್ರದಿಂದ ಅನ್ಯಾಯವಾಗುತ್ತಿದ್ದರೂ ಸುಮ್ಮನಿದ್ದಾರೆ., ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ವಿಫಲರಾಗಿದ್ದೀರೆಂದು ತಿಳಿಸಲು ಅವರಿಗೆ ಪತ್ರ ಬರೆಯುತ್ತಿದ್ದೇವೆ ಎಂದರು.

  AICC chief Rahul Gandhi will address rally in Bidar

  ಹಣಕಾಸು ಆಯೋಗದಿಂದ ಅನ್ಯಾಯವಾಗುತ್ತಿದೆ, ಹಣ ಕೊರತೆಯಾಗುತ್ತದೆ. ಬ್ಯಾಂಕಿಂಗ್ ನೇಮಕದಲ್ಲಿ ದಕ್ಷಿಣ ರಾಜ್ಯಗಳ ಕಡೆ ಗಣನೆಯಾಗುತ್ತಿದೆ. ಬರ ಪರಿಹಾರದಲ್ಲೂ ಅನ್ಯಾಯವಾಗುತ್ತಿದೆ. ಸಿಆರ್ ಪಿಎಫ್ ಸೆಂಟರ್ ಕರ್ನಾಟಕದಲ್ಲಿ ಆಗಬೇಕಿತ್ತು.

  ಉತ್ತರ ಪ್ರದೇಶಕ್ಕೆ ವರ್ಗಾಯಿಸಿ ಅನ್ಯಾಯ ಮಾಡಲಾಗಿದೆ.‌ ರಫೇಲ್ ಡೀಲ್ ನಲ್ಲಿ ಎಚ್ ಎಎಲ್ ಗೆ ಅನ್ಯಾಯವಾಗಿದೆ. 96ರಿಂದ ನಡೆಯುತ್ತಿರುವ ಏರ್ ಷೋ ಬದಲಾವಣೆಗೆ ಪ್ರಯತ್ನ ನಡೆದಿದ್ದು ತಾವು ಬೆಂಗಳೂರಲ್ಲೇ ಉಳಿಸಲು ತೀರ್ಮಾನ ಮಾಡುತ್ತಿಲ್ಲ ಎಂದು ಪತ್ರದಲ್ಲಿ ವಿವರಿಸಲಾಗಿದೆ.

  ಮಹತ್ವದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ, ಸಿದ್ದರಾಮಯ್ಯ ಭಾಗಿ

  ನೀವು ಕರ್ನಾಟಕದಿಂದ ಆಯ್ಕೆಯಾಗಿದ್ದು, ರಾಜ್ಯದ ಹಿತಾಸಕ್ತಿ ಕಾಪಾಡಿ. ದೇಶದ ರಕ್ಷಣಾ ಸಚಿವರಾಗಿ ರಾಜ್ಯದ ರಕ್ಷಣೆಯನ್ನೂ ಕಾಪಾಡಿ ಇಲ್ಲವಾದರೆ ನಿಮ್ಮ ಬದ್ಧತೆ ಬಗ್ಗೆ ಪ್ರಶ್ನಿಸಬೇಕಾಗುತ್ತದೆ ಎಂದು ಹೇಳಿದರು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  AICC president Rahul Gandhi will address a huge rally in Bidar on August 13 and expected to gather 3 lakh people, KPCC Chief Dinesh Gundu rao told reporters in Bengaluru on Tuesday.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more