ಬೆಂಗಳೂರು: ಕೃಷಿಕರಿಗಾಗಿ ಆ.30ರವರೆಗೆ ಅಗ್ರಿಟೆಕ್ ಇಂಡಿಯಾ 2017

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 29: ಕೃಷಿ ಭಾರತದ ಬೆನ್ನೆಲುಬು. ಆಹಾರ ಸುರಕ್ಷತೆ, ಗ್ರಾಮೀಣ ಉದ್ಯೋಗಾವಕಾಶ ಸಾಧ್ಯವಾಗುತ್ತಿರುವುದೇ ಕೃಷಿಯಿಂದ. ಭಾರತವನ್ನು ಕೃಷಿ ಕ್ಷೇತ್ರದ ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡುವುದು ಸರ್ಕಾರದ ಗುರಿ.

ಕೃಷಿ ಅಧ್ಯಯನಕ್ಕಾಗಿ ಇಸ್ರೇಲ್ ಗೆ ತೆರಳಲಿರುವ ಎಚ್ ಡಿಕೆ

ಅದಕ್ಕೆಂದೇ ಭಾರತ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಸಹಯೋಗದೊಂದಿಗೆ ಮೀಡಿಯಾ ಟುಡೇ ಗ್ರೂಪ್, ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಅಗ್ರಿಟೆಕ್ ಇಂಡಿಯಾ 2017 ಎಂಬ ಹೆಸರಿನಲ್ಲಿ ಅಂತಾರಾಷ್ಟ್ರೀಯ ಕೃಷಿ ಪ್ರದರ್ಶನವನ್ನು ಆಯೋಜಿಸಿದೆ. ಆಗಸ್ಟ್ 28 ರಿಂದ ಆರಂಭವಾದ 3 ದಿನದ ಈ ಸಮ್ಮೇಳನ ಆಗಸ್ಟ್ 30 ರವರೆಗೆ ನಡೆಯಲಿದೆ.

Agri Tech India 2017 in Bengaluru for farmers

ತುಮಕೂರು ರಸ್ತೆಯ ಬೆಂಗಳೂರು ಇಂಟರ್ ನ್ಯಾಶನಲ್ ಎಗ್ಸಿಬಿಶನ್ ಸೆಂಟರ್ (ಬಿಐಇಸಿ) ನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಕೃಷಿ, ಕೃಷಿ ಯಂತ್ರಗಳು, ಕೃಷಿ ತಂತ್ರಜ್ಞಾನಗಳ ಪ್ರದರ್ಶನ ಮತ್ತು ಅವುಗಳ ಕುರಿತು ಅರಿವು ಮೂಡಿಸುವ ಕೆಲಸ ನಡೆಯುತ್ತಿದೆ.

ಕೃಷಿಕರಿಗೆ, ಹೋಲ್ಸೇಲರ್ ಗಳಿಗೆ, ಉತ್ಪನ್ನಗಳನ್ನು ರಫ್ತು ಅಥವಾ ಆಮದು ಮಾಡಿಕೊಳ್ಳುವವರಿಗೆ, ಕೃಷಿ ಮಾರುಕಟ್ಟೆಯ ಬಗ್ಗೆ ಆಸಕ್ತಿ ಇರುವವರಿಗೆ ಅಗ್ರಿಟೆಕ್ ಇಂಡಿಯಾ 2017 ಮಾರ್ಗದರ್ಶನ ನೀಡಲಿದೆ. ಆಧುನಿಕ ತಂತ್ರಜ್ಞಾನದ ಕೃಷಿ ಯಂತ್ರೋಪಕರಣದ ಬಗ್ಗೆಯೂ ಮಾಹಿತಿ ನೀಡಲಿದೆ.

ದಕ್ಷಿಣ ಭಾರತದ ಪ್ರಮುಖ ನಗರ ಕೇಂದ್ರವಾಗಿರುವ ಮತ್ತು ಕರ್ನಾಟಕದ ರಾಜಧಾನಿಯಾಗಿರುವ ಕಾರಣಕ್ಕೆ ಬೆಂಗಳೂರಿನಲ್ಲೇ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಹೆಚ್ಚಿನ ರೈತರು, ಉದ್ಯಮಿಗಳು ಈ ಕಾರ್ಯಕ್ರಮದ ಉಪಯೋಗ ಪಡೆಯಬಹುದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In consonance of the efforts of Indian Government for making India self sufficient in food grain production and increasing farm income, Media Today Group is organizing AGRITECH INDIA 2017 - International Exhibition on Agriculture, Farm Machinery &Agri Processing Technologies in Bangalore International Exhibition Center (BIEC) Tumkur Road, Bangalore, India, 28-29-30 August 2017

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ