ಸಿದ್ದರಾಮಯ್ಯನವರದ್ದು ಅಸೂಯೆ ಬುದ್ಧಿ: ಶ್ರೀನಿವಾಸ್ ಪ್ರಸಾದ್

Posted By:
Subscribe to Oneindia Kannada

ಬೆಂಗಳೂರು, ಜನವರಿ 2 : ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಭಾರತಿಯ ಜನತಾ ಪಕ್ಷವನ್ನು ಸೇರ್ಪಡೆಗೊಂಡು ಸಿಎಂ ಸಿದ್ದರಾಮಯ್ಯನವರ ವಿರುದ್ದ ಹರಿಹಾಯ್ದರು.

ಬಿಜೆಪಿ ಸೇರ್ಪಡೆಗೊಂಡ ಬಳಿಕ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಕಾರ್ಯಕ್ರಮದಲ್ಲಿ ಮಾತನಾಡಿ, ಸಿದ್ದರಾಮಯ್ಯನವರೇ ನನ್ನ ಮನೆ ಬಾಗಿಲಿನ ಬಳಿ ಬಂದು ಕೈಮುಗಿದು ಪಕ್ಷಕ್ಕೆ ಸೇರಿ ಎಂದು ನನ್ನನ್ನು ಬೇಡಿಕೊಂಡಿದ್ದರು. ಅಹಿಂದ ಗುಂಪಿಗೆ ಸೇರಿ ಎಂದು ಹೇಳಿದ್ದರು. ನಾನು ನಮ್ಮ ಜನರಿಗೆ ಬ್ರಾಂಡ್ ಆಗಿ ಬಿಡುತ್ತೇನೆ ಎಂಬ ಭಯದಿಂದ ಅವರು ನನ್ನನ್ನು ಅಹಿಂದಕ್ಕೆ ಸೇರಿಸಿಕೊಂಡರು ಎಂದರು.[ನೂರು ಶ್ರೀನಿವಾಸ ಪ್ರಸಾದ್ ಹುಟ್ಕೋತಾರೆ, ಕಾಂಗ್ರೆಸ್ ಶಕ್ತಿ ಪ್ರದರ್ಶನ]

Against CM Siddaramaiah expressed outrage Srinivas Prasad

ನಾನು ಎಂದಿಗೂ ಅವರಿಗೆ ಸಚಿವ ಸ್ಥಾನ ನೀಡಿ ಎಂದು ಕೇಳಿರಲಿಲ್ಲ. ಆದರೂ ನೀಡಿದರು. ನಾನು ಇನ್ನು ಎರಡು ವರ್ಷ ನಂತರ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಸಿದ್ದರಾಮಯ್ಯ ಬಳಿ ಹೇಳಿಕೊಂಡಿದ್ದೆ ಆದರೆ ಅವರು ನನ್ನನ್ನು ಸಚಿವ ಸ್ಥಾನದಿಂದ ಇಳಿಸಿದರು. ಸಿದ್ದರಾಮಯ್ಯ ಒಬ್ಬ ಅಸೂಯೆ ಮನುಷ್ಯ ಎಂದು ಶ್ರೀನಿವಾಸ್ ಪ್ರಸಾದ್ ಸಿಎಂ ವಿರುದ್ಧ ಕಿಡಿಕಾರಿದರು.

ಇನ್ನು ಅವರು ಬಿಜೆಪಿ ಸೇರಿದ್ದು ಅವರೊಂದಿಗೆ ಅನೇಕ ಬೆಂಬಲಿಗರು ಬಿಜೆಪಿ ಸೇರಿಕೊಂಡರು. ಅಲ್ಲದೆ ಪಕ್ಷವನ್ನದ್ದೇಶಿಸಿ ಮಾತನಾಡಿ ಬಿಜೆಪಿ ಪಕ್ಷವನ್ನು ಬಲಪಡಿಸಿ ಮುಂದಿನ ಉಪಚುನಾವಣೆಯಲ್ಲಿ ಜಯಗಳಿಸುವುದಾಗಿ ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Against CM Siddaramaiah expressed outrage Srinivas Prasad in malleshwarm bjp state office in bengaluru.
Please Wait while comments are loading...