• search

ಬಿಡಿಎ 'ಸಕಾಲ' ಕೌಂಟರ್‌ಗೆ ಮರು ಚಾಲನೆ: ವಲಯ ಮಟ್ಟದಲ್ಲೂ ಲಭ್ಯ!

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಮಾರ್ಚ್ 30: ಬಿಡಿಎಯು ನಾಗರಿಕರಿಗೆ ತ್ವರಿತ ಸೇವೆ ನೀಡುವ ನಿಟ್ಟಿನಲ್ಲಿ ಆರಂಭಿಸಲಾಗಿದ್ದ ಸಕಾಲ ಯೋಜನೆಗೆ ಮತ್ತೆ ಚಾಲನೆ ನೀಡಲಾಗಿದೆ.

  ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಸಕಾಲ ಯೋಜನೆಯಿಂದಾಗಿ ನಾಗರಿಕರು ತಮ್ಮ ಸೇವೆಯನ್ನು ಸಾಮಾನ್ಯ ಪ್ರಕ್ರಿಯೆಯಡಿ ಪಡೆದುಕೊಳ್ಳುತ್ತಿದ್ದರು. ಸರ್ಕಾರ ಕೂಡ ಈ ಕುರಿತು ಸರಿಯಾಗಿ ಮಾರ್ಗದರ್ಶನ ಮಾಡದ ಕಾರಣ ಪ್ರಾಧಿಕಾರದಲ್ಲಿ ಸಕಾಲ ಸವಕಲಾಗಿತ್ತು. ಇದೀಗ ಸಕಾಲ ಮಿಷನ್ ನಿಂದ ನಿರ್ದೇಶನ ಬಂದ ಬಳಿಕ ಸೇವೆಗೆ ಹೊಸ ಟಚ್ ನೀಡುವ ಪ್ರಯತ್ನ ಮಾಡಲಾಗಿದೆ.

  ಕೆಂಪೇಗೌಡ ಬಡಾವಣೆ ನಿವೇಶನ ಹಂಚಿಕೆ 2 ತಿಂಗಳು ಮುಂದಕ್ಕೆ

  ಒಂದು ವಾರದ ಹಿಂದೆ ಚಾಲನೆಗೊಂಡಿರುವ ಸಕಾಲದಡಿ ಹಿಂದೆ ಪರಿಚಯಿಸಿದ್ದ ಆರು ಸೇವೆಗಳನ್ನು ಒದಗಿಸಲಾಗಿದೆ. ನಿತ್ಯ 8-1 ಅರ್ಜಿಗಳು ಸ್ವೀಕರಿಸುತ್ತಿದ್ದು, ಈ ಪೈಕಿ ನಿವೇಶನ ಸ್ವಾಧೀನ ಪತ್ರಕ್ಕೆ ಬೇಡಿಕೆ ಇದೆ. ಇದಕ್ಕಾಗಿ ನಾಗರಿಕರು ಅಧಿಕಾರಿಗಳನ್ನು ಕಾಡಿ ಬೇಡಿ ಸೌಲಭ್ಯ ಪಡೆಯಬೇಕಿತ್ತು ಈಗ ಏಳು ಕೆಲಸದ ದಿನದಲ್ಲಿ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

  After two years, BDA reopens Sakala counter

  ಸದ್ಯ ಪ್ರಾಧಿಕಾರದಲ್ಲಿ ಸಕಾಲ ಅರ್ಜಿಗಳನ್ನು ಆಯಾ ವಿಭಾಗದಲ್ಲೇ ಸಲ್ಲಿಸುವ ವ್ಯವಸ್ಥೆ ಇತ್ತು. ಇದರಿಂದ ಬಹಳಷ್ಟು ಮಂದಿ ಸಕಾಲ ಬದಲು ಸಾಮಾನ್ಯ ಅರ್ಜಿಗಳ ಜತೆ ಸಕಾಲಕ್ಕೂ ಅರ್ಜಿ ಸಲ್ಲಿಸುತ್ತಿದ್ದರು. ಇದರಿಂದಾಗಿ ಸಕಾಲ ಮಹತ್ವ ಕಳೆದುಕೊಂಡಿತ್ತು.

  ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

  ಕೆಲ ಸೇವೆ ತಿಂಗಳ ಅವಧಿ ಇದ್ದ ಕಾರಣ ಅಷ್ಟು ದಿನ ಕಾಯದ ನಾಗರಿಕರು ಸಿಬ್ಬಂದಿ ಹಾಗೂ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಇದು ಭ್ರಷ್ಟಾಚಾರಕ್ಕೂ ಅವಕಾಶ ಮಾಇಕೊಟ್ಟಿದ್ದರಿಂದ ಸಕಾಲ ಅಕ್ಷರಶಃ ಮೂಲೆಗುಂಪಾಗಿತ್ತು. ಇದೀಗ ಮತ್ತದಕ್ಕೆ ಮರುಜೀವ ದೊರೆತಂತಾಗಿದೆ.

  ಕೆಂಪೇಗೌಡ ಬಡಾವಣೆ ಸೈಟ್: ವಿಕಲಚೇತನರಿಗೆ ಕೋಟಾ ಹೆಚ್ಚಳ

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  After two years of Hazardous situation in Bengaluru Development Authority, Sakala counter is being reopened in Sakala scheme which gives speedy services to citizens. The BDA has providing Sakala service in six various kinds of facilities to the people.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more