ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಕ್ರೋಶಕ್ಕೆ ಮಣಿದ ಜಲಮಂಡಳಿ, ಬೋರ್‌ವೆಲ್ ಶುಲ್ಕ ಇಳಿಕೆ

|
Google Oneindia Kannada News

ಬೆಂಗಳೂರು, ಮಾರ್ಚ್ 30 : ಜನರ ಒತ್ತಾಯಕ್ಕೆ ಮಣಿದಿರುವ ಬೆಂಗಳೂರು ಜಲಮಂಡಳಿ ಕೊಳವೆ ಬಾವಿ ಶುಲ್ಕ ಇಳಿಕೆ ಮಾಡಲು ತೀರ್ಮಾನಿಸಿದೆ. ನಗರಾಭಿವೃದ್ಧಿ ಇಲಾಖೆ ಒಪ್ಪಿಗೆ ಸಿಕ್ಕ ಬಳಿಕ ಪರಿಷ್ಕೃತ ದರ ಜಾರಿಗೆ ಬರಲಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ನಿವೇಶನಗಳ ಮಾಲೀಕರು ಮೊದಲು ಪ್ರತಿ ತಿಂಗಳು 100 ರೂ. ಕೊಳವೆ ಬಾವಿ ಶುಲ್ಕವನ್ನು ಜಲಮಂಡಳಿಗೆ ಪಾವತಿ ಮಾಡುತ್ತಿದ್ದರು. 2016ರ ಜನವರಿಯಲ್ಲಿ ಜಲಮಂಡಳಿ ಈ ನಿಯಮದಲ್ಲಿ ಬದಲಾವಣೆ ಮಾಡಿ, ಶುಲ್ಕ ಏರಿಕೆ ಮಾಡಿತ್ತು. [ಬೋರ್ ವೆಲ್ ಶುಲ್ಕ ಏರಿಕೆ : ಬಿಜೆಪಿ ಪ್ರತಿಭಟನೆ]

bwssb

ಹೊಸ ನಿಯಮದಂತೆ ಕೊಳವೆ ಬಾವಿ ಹೊಂದಿರುವ ನಿವೇಶನದಲ್ಲಿರುವ ಎಲ್ಲಾ ಮನೆಯವರು 100 ರೂ. ಶುಲ್ಕ ಪಾವತಿ ಮಾಡಬೇಕಾಗಿತ್ತು. ಒಂದು ನಿವೇಶನದಲ್ಲಿ 7 ಮನೆಗಳಿದ್ದರೆ ಪ್ರತಿ ತಿಂಗಳು 700 ರೂ. ಶುಲ್ಕ ಪಾವತಿಸಬೇಕಿತ್ತು. ಮನೆಯ ನೀರಿನ ಬಿಲ್ ಜೊತೆಯಲ್ಲಿಯೇ ಶುಲ್ಕವನ್ನು ಸೇರಿಸಿ ವಸೂಲಿ ಮಾಡಲಾಗುತ್ತಿತ್ತು. [ನೀರಿಗೆ ಬರ, ಬೆಂಗಳೂರಿಗೆ ವಾರಕ್ಕೊಮ್ಮೆ ನೀರು]

ಬಿಜೆಪಿ ವಿರೋಧ : ಬಿಬಿಎಂಪಿಯ ಪ್ರತಿಪಕ್ಷವಾದ ಬಿಜೆಪಿ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಜನರು ಸಹ ಶುಲ್ಕ ವಸೂಲಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ದರವನ್ನು ಇಳಿಸಲು ನಗರಾಭಿವೃದ್ಧಿ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. [ಹೊಸ ನೀರಿನ ಸಂಪರ್ಕಕ್ಕೆ ಆನ್ ಲೈನ್ ನಲ್ಲಿ ಅರ್ಜಿ ಹಾಕಿ]

ದರ ಇಳಿಕೆ ಪಟ್ಟಿ : ಜನರ ವಿರೋಧದ ಹಿನ್ನಲೆಯಲ್ಲಿ ಜಲಮಂಡಳಿ ಶುಲ್ಕವನ್ನು ಪರಿಷ್ಕರಣೆ ಮಾಡಿದೆ. ಅದರಂತೆ 600 ಚದರ ಅಡಿ ನಿವೇಶನದ ಮಾಲೀಕರು 50 ರೂ. ಶುಲ್ಕ ಪಾವತಿಸಬೇಕು, 1,200 ಚದರ ಅಡಿಯ ನಿವೇಶನದ ಮಾಲೀಕರು 100 ರೂ., ಈ ನಿವೇಶನದಲ್ಲಿರುವ ಬಾಡಿಗೆದಾರರು 50 ರೂ, ಪಾವತಿಸಬೇಕು. 2,400 ಚದರ ಅಡಿ ನಿವೇಶನದಲ್ಲಿರುವ ಎಲ್ಲ ನಿವಾಸಿಗಳು 100 ರೂ. ಪಾವತಿ ಮಾಡಬೇಕಾಗಿದೆ.

English summary
Bengaluru Water Supply and Sewerage Board (BWSSB) revised bore well charges after protest by people. Bore well charges imposed since January 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X