ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ವರ್ಷ ಆಚರಣೆ ಬಳಿಕ ಮನೆಗೆ ಡ್ರಾಪ್ ನೀಡಿದ ಪೊಲೀಸರು!

|
Google Oneindia Kannada News

ಬೆಂಗಳೂರು, ಜನವರಿ 1 : ಹೊಸ ವರ್ಷಾಚರಣೆ ಸಂದರ್ಭದಲ್ಲಿ ಪೊಲೀಸ್ ವಾಹನಗಳಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಮನೆಗೆ ತಲುಪಿಸಿ ಪೊಲೀಸರು ಮಾನವೀಯತೆ ಮೆರೆದರು.

ಹೊಸ ವರ್ಷಕ್ಕೆ ಕುಣಿದು ಕುಪ್ಪಳಿಸಿ ಚಿಯರ್ಸ್ ಹೇಳಿದೆ ಜಗತ್ತುಹೊಸ ವರ್ಷಕ್ಕೆ ಕುಣಿದು ಕುಪ್ಪಳಿಸಿ ಚಿಯರ್ಸ್ ಹೇಳಿದೆ ಜಗತ್ತು

ಭಾನುವಾರ ತಡರಾತ್ರಿ ಎಂ. ಜಿ ರಸ್ತೆಯಲ್ಲಿ ಹೊಸ ವರ್ಷ ಆಚರಣೆ ಮುಗಿದ ಬಳಿಕ ವಾಹನ ವ್ಯವಸ್ಥೆ ಇಲ್ಲದೆ ಮನೆಗೆ ತೆರಳಲು ಪರದಾಡಿದ ಮಹಿಳೆಯರು, ವಾಹನ ಇಲ್ಲದೆ ಇರುವುದರಿಂದ ರಸ್ತೆ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಸಾಕಷ್ಟು ಸಮಯ ಕಳೆದರು. ನಂತರ ಪೊಲೀಸ್ ವಾಹನಗಳಲ್ಲಿ ಮನೆಗೆ ಕಳುಹಿಸಿಕೊಡಲಾಯಿತು.

After party police given drop to home!

ಸಣ್ಣ ಪುಟ್ಟ ಘಟನೆಗಳನ್ನು ಹೊರತುಪಡಿಸಿ ಹೊಸ ವರ್ಷಾಚರಣೆ ಯಾವುದೇ ಅವಘಡಗಳಿಲ್ಲದೇ ನಡೆಯುವಂತೆ ಬಿಗಿ ಭದ್ರತೆ ನೀಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬ್ರಿಗೇಡ್ ರಸ್ತೆಯಲ್ಲಿ ಕಾವೇರಿ ಎಂಪೋರಿಯಮ್ ನಿಂದ ರೆಸಿಡೆನ್ಸಿ ರಸ್ತೆವರೆಗೂ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಬ್ಯಾರಿಕೇಡ್ ಗಳನ್ನು ಹಾಕಲಾಗಿತ್ತು.

ಅಷ್ಟೇ ಅಲ್ಲದೆ ಡ್ರೋಣ್ ಕ್ಯಾಮರಾಗಳ ವ್ಯವಸ್ಥೆ ಮಾಡಿದ್ದರು. ಸುಮಾರು15ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.

ಬೆಂಗಳೂರು: ಒಂದೇ ರಾತ್ರಿಯಲ್ಲಿ 1367 ಡ್ರಿಂಕ್ ಆಂಡ್ ಡ್ರೈವ್ ಕೇಸು ದಾಖಲುಬೆಂಗಳೂರು: ಒಂದೇ ರಾತ್ರಿಯಲ್ಲಿ 1367 ಡ್ರಿಂಕ್ ಆಂಡ್ ಡ್ರೈವ್ ಕೇಸು ದಾಖಲು

ಭಾನುವಾರ ರಾತ್ರಿ 1367 ವಾಹನ ಚಾಲಕರು ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿ ಸಂಚಾರ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಆರ್. ಹಿತೇಂದ್ರ ತಿಳಿಸಿದ್ದಾರೆ.

English summary
Bengaluru police have helped many people particularly Women after new year party last night to reach their home while no public transportation was available.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X