ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೋಟು ನಿಷೇಧದಿಂದ ಶ್ರೀಮಂತವಾದ ಬೆಂಗಳೂರಿನ ಗುಡಿಗಳು

ನೋಟು ನಿಷೇಧದ ನಂತರ ಬೆಂಗಳೂರಿನ ದೇವಾಲಯಗಳಲ್ಲಿನ ಹುಂಡಿಗಳಲ್ಲಿ ಹಳೆಯ ನೋಟುಗಳು ಬಹುದೊಡ್ಡ ಸಂಖ್ಯೆಯಲ್ಲಿ ಬೀಳುತ್ತಿದೆ.

|
Google Oneindia Kannada News

ಸಾಮಾನ್ಯವಾಗಿ ಹಬ್ಬಹರಿದಿನಗಳ ವೇಳೆ ದೇವಾಲಯದ ಹುಂಡಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನಗನಾಣ್ಯ ಬೀಳುವುದು ವಾಡಿಕೆ, ಇತರೇ ದಿನಗಳಲ್ಲಿ ಅಂತಾ ಹೇಳಿಕೊಳ್ಳುವಂತಹ ಆದಾಯ ದೇವಸ್ಥಾನಗಳಿಗೆ ಇರುವುದಿಲ್ಲ.

ಆದರೆ, ಕಳೆದ ಅರವತ್ತು ದಿನಗಳಲ್ಲಿ ಅಂತಹ ಹೆಚ್ಚಿನ ವಿಶೇಷ ದಿನಗಳು ಇಲ್ಲದಿದ್ದರೂ ದೇವಾಲಯಗಳ ಹುಂಡಿಗೆ ಭರ್ಜರಿ ಕಾಣಿಕೆ ಸಲ್ಲಿಕೆಯಾಗುತ್ತಿದೆ. ಇದು ಆಸ್ತಿಕರ ಭಕ್ತಿಪರಾವಶತೆಯ ಪರಾಕಷ್ಠೆ ಎಂದುಕೊಂಡರೆ ತಪ್ಪಾಗ ಬಹುದೇನೋ?

ಇಷ್ಟು ದಿನ ಇಲ್ಲದಿದ್ದದ್ದು ಕಳೆದ ಅರವತ್ತು ದಿನಗಳಲ್ಲಿ ಅಂತಹ ವಿಶೇಷ ಏನಂದರೆ ಅದಕ್ಕೆ ಉತ್ತರ ಎರಡು ದೊಡ್ಡ ಮುಖಬೆಲೆಯ ನೋಟು ನಿಷೇಧದ ಪರಿಣಾಮ. ಹೌದು, ಮೋದಿ ಸರಕಾರದ 500,1000 ರೂಪಾಯಿ ನೋಟ್ ಬ್ಯಾನ್ ನಿರ್ಧಾರದಿಂದ ಹುಂಡಿಯಲ್ಲಿ ಮೊಗೆದಷ್ಟು ನೋಟು ಹೊರಬರುತ್ತಲೇ ಇದೆ.

ಕೆರೆಯ ನೀರನ್ನು ಕೆರೆಗೆ ಚೆಲ್ಲು ಎನ್ನುವಂತೆ ನೋಟಿನ ಮೇಲೆ ಋಣ ಇಲ್ಲದ ಮೇಲೆ, ಅದನ್ನು ಇಟ್ಟುಕೊಂಡು ಏನು ಪ್ರಯೋಜನ ಎಂದು ಭಕ್ತಾಗ್ರೇಸರರು 500,1000 ರೂಪಾಯಿ ಹಳೇ ನೋಟನ್ನು ಕಂತೆ ಕಂತೆ ಹುಂಡಿಗೆ ಕೃಷ್ಣಾರ್ಪಣ ಮಾಡುತ್ತಿದ್ದಾರೆ.

500,1000 ನೋಟುಗಳು ಚಲಾವಣೆಯಲ್ಲಿದ್ದರೆ ಹುಂಡಿಗೆ ಇಷ್ಟು ಪ್ರಮಾಣದಲ್ಲಿ ದುಡ್ಡು ಬೀಳಲು ಹೇಗೆ ಸಾಧ್ಯ ಎನ್ನುವುದು ಅರ್ಚಕ ವಲಯದಿಂದ ಕೇಳಿ ಬರುತ್ತಿರುವ ಮಾತು.

ಮುಜರಾಯಿ ಅಥವಾ ಧಾರ್ಮಿಕ ದತ್ತಿ ಮತ್ತು ಧರ್ಮದಾಯಿ ಇಲಾಖೆ ವ್ಯಾಪ್ತಿಯಲ್ಲಿ ಹಿಂದೂ ಪೂಜಾಸ್ಥಳಗಳು ಮಾತ್ರ ಬರುವುದರಿಂದ, ಇತರ ಸಮುದಾಯದ ಪೂಜಾ ಮಂದಿರಗಳಲ್ಲಿ 500,1000 ನೋಟು ಬ್ಯಾನಿನ ಮಹಿಮೆ ಹೇಗೆ ಎನ್ನುವುದು ವರದಿಯಾಗಿಲ್ಲ.

ರಾಜಧಾನಿ ಬೆಂಗಳೂರಿನ ಮುಜರಾಯಿ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳ ಪೈಕಿ, ಹುಂಡಿಯಲ್ಲಿ ಟಾಪ್ ಟೆನ್ ಆದಾಯದ ದೇವಸ್ಥಾನದ ಪಟ್ಟಿ, ಮುಂದಿದೆ (ಡಿ 31ಕ್ಕೆ ಅನ್ವಯವಾಗುವಂತೆ, ಮಾಹಿತಿ ವಿಜಯ ಕರ್ನಾಟಕ)

 ಮೊದಲೆರಡು ಸ್ಥಾನದಲ್ಲಿ

ಮೊದಲೆರಡು ಸ್ಥಾನದಲ್ಲಿ

1. ಕನಕಪುರ ರಸ್ತೆಯಲ್ಲಿರುವ ಬನಶಂಕರಿ ದೇವಾಲಯ. ಈ ದೇವಾಲಯದ ಗಳಿಕೆ ಇದುವರೆಗೆ 2 ಕೋಟಿ 25 ಲಕ್ಷ.
2. ಪ್ರಸನ್ನ ವೀರಾಂಜನೇಯ ದೇವಾಲಯ, ಮಹಾಲಕ್ಷ್ಮಿ ಲೇಔಟ್, 1 ಕೋಟಿ 28 ಲಕ್ಷ

 3 ಮತ್ತು 4ನೇ ಸ್ಥಾನದಲ್ಲಿ

3 ಮತ್ತು 4ನೇ ಸ್ಥಾನದಲ್ಲಿ

3.ವಿನಾಯಕಸ್ವಾಮಿ ದೇವಾಲಯ, ನಾಲ್ಕನೇ ಬ್ಲಾಕ್, ಜಯನಗರ. 1 ಕೋಟಿ 12 ಲಕ್ಷ
4. ಬಸವನಗುಡಿ ದೊಡ್ಡಗಣಪತಿ ದೇವಾಲಯ, 80 ಲಕ್ಷ.

 5 ಮತ್ತು 6ನೇ ಸ್ಥಾನದಲ್ಲಿ

5 ಮತ್ತು 6ನೇ ಸ್ಥಾನದಲ್ಲಿ

5. ಹಲಸೂರು ಸುಬ್ರಮಣ್ಯ ಸ್ವಾಮಿ ದೇವಾಲಯ - 53.16 ಲಕ್ಷ
6. ಹನುಮಂತ ನಗರ ಕುಮಾರಸ್ವಾಮಿ ದೇವಾಲಯ - 28.60 ಲಕ್ಷ

 7 ಮತ್ತು 8ನೇ ಸ್ಥಾನದಲ್ಲಿ

7 ಮತ್ತು 8ನೇ ಸ್ಥಾನದಲ್ಲಿ

7. ಹಲಸೂರು ಸೋಮೇಶ್ವರ ದೇವಾಲಯ - 28 ಲಕ್ಷ
8. ಗವಿಗಂಗಾಧರೇಶ್ವರ ದೇವಾಲಯ - 24.85 ಲಕ್ಷ

 ಒಂಬತ್ತು, ಹತ್ತನೇ ಸ್ಥಾನ

ಒಂಬತ್ತು, ಹತ್ತನೇ ಸ್ಥಾನ

9.ವೇಣುಗೋಪಾಲ ಸ್ವಾಮಿ ದೇವಾಲಯ, ಮಲ್ಲೇಶ್ವರ - 24.58 ಲಕ್ಷ
10. ಕಾಡು ಮಲ್ಲೇಶ್ವರ ದೇವಾಲಯ, ಮಲ್ಲೇಶ್ವರ - 22.11 ಲಕ್ಷ

English summary
After Demonetisation, money flooding in Bengaluru temple hundis in 1000 and 500 rupees old currency notes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X