• search

ಏಳು ವರ್ಷ ಲೈಂಗಿಕ ಕಿರುಕುಳ ಕೊಟ್ಟವನಿಗೆ ಪಾಠ ಕಲಿಸಿದ ಮಹಿಳೆ

By Nayana
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಆಗಸ್ಟ್‌ 2: ಕಳೆದ ಏಳು ವರ್ಷಗಳಿಂದ ಮಹಿಳೆಯೊಬ್ಬಳಿಗೆ ಬೆದರಿಸಿ ಲೈಂಗಿಕ ಸಂಪರ್ಕಕ್ಕೆ ಒತ್ತಡ ಹೇರುತ್ತಿದ್ದ ವ್ಯಕ್ತಿಯೊಬ್ಬನನ್ನು ಗಂಗಮ್ಮನಗುಡಿ ಪೊಲೀಸರು ಬಂಧಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ.

  ಬೆಂಗಳೂರಿನ ಜಾಲಹಳ್ಳಿ ಪಶ್ಚಿಮದ ನಿವಾಸಿಯಾಗಿರುವ ಮಹಿಳೆ ಪ್ರತಿದಿನ ಕೆಲಸಕ್ಕೆಂದು ಹೊರಗೆ ಹೋದಾಗ ಆಕೆಯನ್ನು ಹಿಂಬಾಲಿಸುತ್ತಿದ್ದ ವೆಂಕಟೇಶ್‌ ಎಂಬಾತ ವೃತ್ತಿಯಿಂದ ಟ್ಯಾಕ್ಸಿ ಚಾಲಕನಾಗಿದ್ದಾನೆ.

  ಮೆಟ್ರೋದಲ್ಲಿ ಯುವತಿ ಹಿಂಬಾಲಿಸಿ ಕಿರುಕುಳ: ಸಾರ್ವಜನಿಕರಿಂದ ಥಳಿತ

  2011ರಲ್ಲಿ ಮಹಿಳೆ ತನ್ನ ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆ ತರುತ್ತಿದ್ದ ವೇಳೆ ರಸ್ತೆ ಮಧ್ಯೆ ಸಿಕ್ಕ ವೆಂಕಟೇಶ್‌ ತನ್ನ ಕ್ಯಾಬ್‌ನಲ್ಲಿ ಮನೆಗೆ ಡ್ರಾಪ್‌ ಕೊಡುವುದಾಗಿ ಹೇಳಿ ಒತ್ತಾಯ ಪೂರ್ವಕವಾಗಿ ಕ್ಯಾಬ್‌ ಹತ್ತುವಂತೆ ಮಾಡಿದ್ದ, ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ ಆಕೆಯನ್ನು ಲೈಂಗಿಕ ಸಂಪರ್ಕಕ್ಕೆ ಒಪ್ಪಿಕೊಳ್ಳುವಂತೆ ಒತ್ತಾಯ ಪಡಿಸಿದ್ದ.

  After 7 years of harassment, women complaint against cab driver

  ಆದರೆ ಇದಕ್ಕೆ ಒಪ್ಪದ ಮಹಿಳೆ ತನ್ನನ್ನು ಕೂಡಲೇ ಮನೆಗೆ ಕರೆದೊಯ್ಯದಿದ್ದರೆ ಆತನ ಪತ್ನಿಗೆ ತಿಳಿಸುವುದಾಗಿ ಬೆದರಿಕೆ ಒಡ್ಡಿದಳು. ಆಗ ಮನೆಗೆ ವಾಪಸ್ ಕರೆತಂದು ಬಿಟ್ಟಿದ್ದ ಆತ ಈ ವಿಷಯವನ್ನು ಹೆಂಡತಿಗೆ ಹೇಳದಂತೆ ಮನವಿ ಮಾಡಿದ್ದ.

  ಇದೇ ರೀತಿ ಘಟನೆಗಳು ಪುನರಾವರ್ತನೆಯಾದಾಗ ಮನನೊಂದ ಮಹಿಳೆ ಪತಿ ಅನಿಲ್‌ಗೆ ತಿಳಿಸಿದ್ದಳು, ಅನಿಲ್‌, ವೆಂಕಟೇಶ್‌ ಮನೆಗೆ ತೆರಳಿ ಎಲ್ಲಾ ವಿಷಯವನ್ನು ಪತ್ನಿಗೆ ಹೇಳಿ ಜಗಳವಾಡಿದ್ದ, ಈ ಘಟನೆಯಲ್ಲಿ ಮಧ್ಯೆ ಪ್ರವೇಶಿದ ವೆಂಕಟೇಶನ ಭಾಮೈದ ಪೊಲೀಸರಿಗೆ ದೂರು ನೀಡದಂತೆ ಮಹಿಳೆ ಬಳಿ ಮನವಿ ಮಾಡಿಕೊಂಡಿದ್ದ.

  ದೂರು ನೀಡಿದರೆ ಇಬ್ಬರ ಜೀವನವೂ ಹಾಳಾಗುತ್ತದೆ ಎಂದು ಮನವೊಲಿಸಲು ಯತ್ನಿಸಿದ್ದ ಹೀಗಾಗಿ ಮಹಿಳೆ ದೂರು ನೀಡಿರಲಿಲ್ಲ. ಅದಾದ ಬಳಿಕ 2016ರಲ್ಲಿ ಜಾಲಹಳ್ಳಿ ಸ್ಲಂಗಳನ್ನು ತೆರವುಗೊಳಿಸದ್ದರಿಂದ ಮಹಿಳೆ ಹಾಗೂ ಅನಿಲ್‌ ಕುಟುಂಬ ಕೆಜಿ ಹಳ್ಳಿಗೆ ಸ್ಥಳಾಂತರಗೊಂಡಿತ್ತು, ಅದಾದ ಬಳಿಕ ಮಹಿಳೆ ವೆಂಕಟೇಶನ ಕಣ್ಣಿಗೆ ಬಿದ್ದಿರಲಿಲ್ಲ.

  2016ರ ಮೇ ವೇಳೆಗೆ ಜಾಲಹಳ್ಳಿ ದೇವಸ್ಥಾನದ ಬಳಿ ಶಾಂತಿ ಮನೆಗೆಲಸಕ್ಕೆಂದು ಹೋಗುತ್ತಿರುವಾಗ ಮತ್ತೆ ಎದುರಾದ ವೆಂಕಟೇಶ್‌ ಅವಳೊಂದಿಗೆ ಸ್ನೇಹ ಬೆಳೆಸಲು ಪ್ರಯತ್ನಿಸಿದ್ದ ಮಹಿಳೆ ಎಷ್ಟೇ ಎಚ್ಚರಿಕೆ ಕೊಟ್ಟರೂ ವೆಂಕಟೇಶ್‌ ಈ ಮಧ್ಯೆ ಕಳೆದ ಮೇ ತಿಂಗಳು ಶಾಂತಿಯ ಕೆಜಿ ಹಳ್ಳಿ ಮನೆಯನ್ನು ಪತ್ತೆ ಮಾಡಿದ್ದ.

  ಒಂದು ದಿನ ಆಕೆ ಬಟ್ಟೆ ಬದಲಾಯಿಸುತ್ತಿರುವಾಗ ಮೊಬೈಲ್‌ನಲ್ಲಿ ಫೋಟೊ ಕ್ಲಿಕ್ಕಿಸಿ ಬ್ಲ್ಯಾಕ್‌ಮೇಲ್‌ ಮಾಡಲು ಮುಂದಾಗಿದ್ದ ಬಳಿಕ ಆಕೆಯನ್ನು ಕೊಲೆ ಮಾಡಲು ಕೂಡ ಯತ್ನಿಸಿದ್ದ ಸುತ್ತಮುತ್ತಲಿನಲ್ಲಿರುವ ಜನರನ್ನು ಕರೆದು ಆತನನ್ನು ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಲಾಗಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  He perpetually harassed me to have sex with him. He wanted me to pose for nude pictures. He stalked me for seven years and I finally had enough of it. I was not going to be scared of him any longer, says 35-year-old Shanti , a resident of Bengaluru.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more