6 ವರ್ಷಗಳ ಬಳಿಕ ಏರೋ ಇಂಡಿಯಾನಲ್ಲಿ ಸೂರ್ಯ ಕಿರಣ್ ಚಮತ್ಕಾರ

Posted By: Ramesh
Subscribe to Oneindia Kannada
ಬೆಂಗಳೂರು, ಫೆಬ್ರವರಿ. 16 : ಆರು ವರ್ಷಗಳ ನಂತರ ಏರೋ ಇಂಡಿಯಾಕ್ಕೆ ಆಯ್ಕೆಯಾಗಿರುವ ದೇಶಿ ಯುದ್ಧ ವಿಮಾನ 'ಸೂರ್ಯ ಕಿರಣ್' ತಂಡ ಏರೋ ಇಂಡಿಯಾದ ಮೂರನೇ ದಿನ ಗುರುವಾರ ನೀಲಾಗಸದಲ್ಲಿ ಏರೋಬ್ಯಾಟಿಕ್ ಕಲೆಯನ್ನು ಪ್ರದರ್ಶಿಸಿ ನೋಡುಗರ ಮೈನವಿರೇಳುವಂತೆ ಮಾಡಿತು.

ಸುಮಾರು ಆರು ವರ್ಷಳಿಂದ ಏರೋ ಇಂಡಿಯಾದಿಂದ ದೂರ ಉಳಿದಿದ್ದ 'ಸೂರ್ಯ ಕಿರಣ್' ತಂಡ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 14ರಿಂದ ಆರಂಭವಾಗಿರುವ ಏರೋ ಇಂಡಿಯಾದಲ್ಲಿ ಗುರುವಾರ ನೀಲಾಗಸದಲ್ಲಿ ಏರೋಬ್ಯಾಟಿಕ್ ಕಲೆಯನ್ನು ಪ್ರದರ್ಶಿಸಿ ನೋಡುಗರ ಉಬ್ಬೇರುವಂತೆ ಮಾಡಿತು. [ಬೆಂಗಳೂರು: ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ]

ಆರು ಜನರ ಸೂರ್ಯ ಕಿರಣ್ ತಂಡ

ಆರು ಜನರ ಸೂರ್ಯ ಕಿರಣ್ ತಂಡ

ಆರು ವರ್ಷಗಳಿಂದ ಏರೋ ಇಂಡಿಯಾದಿಂದ ಮರೆಯಾಗಿದ್ದ ನುರಿತ ಆರು ಜನರ ಸೂರ್ಯ ಕಿರಣ್ ತಂಡ ಮೂರನೇ ದಿನ ಅದ್ಭುತ ಪ್ರದರ್ಶ ನೀಡಿ ನೋಡುಗರ ಮನ ಗೆದ್ದಿತು.

ಕೆಂಪು-ಬಿಳುಪಿನ ಸೂರ್ಯ ಕಿರಣ್ ತಂಡ

ಕೆಂಪು-ಬಿಳುಪಿನ ಸೂರ್ಯ ಕಿರಣ್ ತಂಡ

ಬೆಂಗ್ಳೂರಿನಲ್ಲಿ ನಡೆದ ಏರೋ ಇಂಡಿಯಾದ ನೀಲಿ ಬಾನಂಗಳದಲ್ಲಿ ಕೆಂಪು-ಬಿಳುಪು ಬಣ್ಣವನ್ನು ಹೊಂದಿರುವ ಸೂರ್ಯ ಕಿರಣ್ ವಿಮಾನದ ಆರು ಜೆಟ್ ಪೈಲಟ್ಸ್ ಗಳ ತಂಡ ಜನರ ಕಣ್ಣಿಗೆ ಕುಕ್ಕುವಂತೆ ಏರೋಬ್ಯಾಟಿಕ್ ಪ್ರದರ್ಶನ ನೀಡಿತು.

ಕಮಾಂಡರ್ ವೇಣು ನಂಬೀಸನ್

ಕಮಾಂಡರ್ ವೇಣು ನಂಬೀಸನ್

ಏರೋಬ್ಯಾಟಿಕ್ ಪ್ರದರ್ಶನದಿಂದಾಗಿ ಸಾಕಷ್ಟು ಜನಮೆಚ್ಚುಗೆಯನ್ನು ಪಡೆದಿರುವ ಭಾರತೀಯ ವಾಯು ಸೇನೆಯ 'ಸೂರ್ಯ ಕಿರಣ್' ತಂಡ ಆರು ವರ್ಷಗಳ ನಂತರ ಬೆಂಗ್ಳೂರು ಏರೋ ಇಂಡಿಯಾ ಮೂಲಕ ಪುನರಾಗಮನವಾಗಿ ನೀಡಿದ ಪ್ರದರ್ಶನ ಪ್ರೇಕ್ಷಕರಿಗೆ ಮುದ ನೀಡಿದೆ ಎಂದು ಕಮಾಂಡರ್ ವೇಣು ನಂಬೀಸನ್ ಒನ್ ಇಂಡಿಯಾ ಜತೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

4ರಿಂದ 5 ಮೀಟರ್ ಅಂತರದಲ್ಲಿ ಏರೋಬ್ಯಾಟಿಕ್

4ರಿಂದ 5 ಮೀಟರ್ ಅಂತರದಲ್ಲಿ ಏರೋಬ್ಯಾಟಿಕ್

ಸೂರ್ಯಕಿರಣ್ ತಂಡದ ವಿಮಾನಗಳು ಜೊತೆಯಾಗಿ 4ರಿಂದ 5 ಮೀಟರ್ ಅಂತರದಲ್ಲಿ ವೇಗವಾಗಿ ಏರೋಬ್ಯಾಟಿಕ್ ಪ್ರದರ್ಶನ ಮಾಡುತ್ತಾ ಸಾಗುವ ಜಲಕ್ ನ್ನು ಜನರು ಕಣ್ತುಂಬಿಸಿಕೊಂಡರು.

ಸೂರ್ಯಕಿರಣ್ ವಿಮಾನದ ವೇಗ

ಸೂರ್ಯಕಿರಣ್ ವಿಮಾನದ ವೇಗ

2011ರ ಕಿರಣ್ Mk II ಏರ್ ಕ್ರಾಫ್ಟ್ ಒಂದು ಗಂಟೆಗೆ 450 ಕಿಮೀ ವೇಗದಲ್ಲಿ ಚಲಿಸುತ್ತದೆ. ಆದರೆ, ಈ ಹೊಸ Hawk ಏರ್ ಕ್ರಾಫ್ಟ್ ಒಂದು ಗಂಟೆಗೆ ಸುಮಾರು 650 ಕಿಮೀ ವೇಗದಲ್ಲಿ ಚಲಿಸುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Which kicked-off at the Indian Air Force's Yelahanka base in Bengaluru on Tuesday saw some thrilling action by Surya Kirans, the aerobatics demonstration team of the IAF on Thursday.
Please Wait while comments are loading...