ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರೋ ಇಂಡಿಯಾ ಪ್ರದರ್ಶನ : ವಿಮಾನ ಹಾರಾಟದಲ್ಲಿ ಬದಲಾವಣೆ

|
Google Oneindia Kannada News

ಬೆಂಗಳೂರು, ಜನವರಿ 22 : ಏರೋ ಇಂಡಿಯಾ ವೈಮಾನಿಕ ಪ್ರದರ್ಶನವು ಫೆಬ್ರವರಿ 20ರಿಂದ ಬೆಂಗಳೂರಿನಲ್ಲಿ ನಡೆಯಲಿದೆ. ಈ ಹಿನ್ನಲೆಯಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಲಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ನಲ್ಲಿ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ವಿಮಾನ ನಿಲ್ದಾಣದ ಪ್ರಕಟಣೆ ಹೇಳಿದೆ. ಫೆಬ್ರವರಿ 14 ರಿಂದ 24ರ ತನಕ ಹಲವು ವಿಮಾನಗಳ ಹಾರಾಟದಲ್ಲಿ ಬದಲಾವಣೆಯಾಗಲಿದೆ.

ಏರೋ ಇಂಡಿಯಾದಲ್ಲಿ ಪ್ರಮುಖ ಆಕರ್ಷಣೆಗಳೇನು?ಏರೋ ಇಂಡಿಯಾದಲ್ಲಿ ಪ್ರಮುಖ ಆಕರ್ಷಣೆಗಳೇನು?

ಫೆಬ್ರವರಿ 20 ರಿಂದ 24ರ ತನಕ ಈ ಬಾರಿಯ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯಲಿದೆ. 1996ರಿಂದ ಎರಡು ವರ್ಷಕ್ಕೊಮ್ಮೆ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯುತ್ತಿದೆ. ಪ್ರದರ್ಶನಕ್ಕೂ ಒಂದು ವಾರ ಮುಂಚೆ ತರಬೇತಿ ನಡೆಯಲಿದೆ. ಆಗ ವಿಮಾನ ನಿಲ್ದಾಣವನ್ನು ಕೆಲವು ಗಂಟೆಗಳ ಕಾಲ ಮುಚ್ಚಲಾಗುತ್ತದೆ.

ಏರ್‌ ಶೋ, ಕೆಂಪೇಗೌಡ ಏರ್‌ಪೋರ್ಟ್‌ಗೆ ಪರ್ಯಾಯ ರಸ್ತೆ ಬಳಸಲು ಸೂಚನೆಏರ್‌ ಶೋ, ಕೆಂಪೇಗೌಡ ಏರ್‌ಪೋರ್ಟ್‌ಗೆ ಪರ್ಯಾಯ ರಸ್ತೆ ಬಳಸಲು ಸೂಚನೆ

ಈ ಬಾರಿಯ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಬೆಂಗಳೂರಿನಿಂದ ಲಕ್ನೋಗೆ ಸ್ಥಳಾಂತರವಾಗಲಿದೆ ಎಂಬ ಸುದ್ದಿ ಹಬ್ಬಿತ್ತು. ಈ ಬಗ್ಗೆ ಭಾರಿ ಚರ್ಚೆ ನಡೆದಿತ್ತು. ಅಂತಿಮವಾಗಿ ಬೆಂಗಳೂರಿನಲ್ಲಿಯೇ ವೈಮಾನಿಕ ಪ್ರದರ್ಶನ ನಡೆಯಲಿದೆ.

ಬೆಂಗಳೂರು ಏರ್‌ಶೋ: ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಯೋಜನೆಬೆಂಗಳೂರು ಏರ್‌ಶೋ: ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಯೋಜನೆ

ಏರೋ ಇಂಡಿಯಾ ವೈಮಾನಿಕ ಪ್ರದರ್ಶನ

ಏರೋ ಇಂಡಿಯಾ ವೈಮಾನಿಕ ಪ್ರದರ್ಶನ

ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಸುರಕ್ಷತೆಯ ದೃಷ್ಟಿಯಿಂದ ವಿಮಾನ ಹಾರಾಟದ ಸಮಯವನ್ನು ಬದಲಾವಣೆ ಮಾಡಲಾಗುತ್ತದೆ. ವೈಮಾನಿನ ಪ್ರದರ್ಶನದ ತರಬೇತಿ ಫೆಬ್ರವರಿ 14ಕ್ಕೆ ಆರಂಭವಾಗುತ್ತದೆ. ಆದ್ದರಿಂದ, ಫೆಬ್ರವರಿ 14 ರಿಂದ 24ರ ತನಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟದ ಸಮಯದಲ್ಲಿ ಬದಲಾವಣೆಯಾಗಲಿದೆ.

ವಿಮಾನ ನಿಲ್ದಾಣ ಬಂದ್

ವಿಮಾನ ನಿಲ್ದಾಣ ಬಂದ್

ತರಬೇತಿ ಮತ್ತು ಮುಖ್ಯ ಪ್ರದರ್ಶನ ನಡೆಯುವ ದಿನ ವಿಮಾನ ಸಂಚಾರವನ್ನು ಸಂಪೂರ್ಣಗಾಗಿ ಸ್ಥಗಿತಗೊಳಿಸಲಾಗುತ್ತದೆ. ಫೆಬ್ರವರಿ 14 ರಿಂದ 17ರ ತನಕ ಮಧ್ಯಾಹ್ನ 1.30ರಿಂದ ಸಂಜೆ 4.30ರ ತನಕ, ಫೆಬ್ರವರಿ 18 ಮತ್ತು 19ರಂದು ಬೆಳಗ್ಗೆ 10 ರಿಂದ 12 ಹಾಗೂ ಮಧ್ಯಾಹ್ನ 2 ರಿಂದ 5 ಗಂಟೆಯ ತನಕ ವಿಮಾನ ನಿಲ್ದಾಣ ಸಂಪೂರ್ಣವಾಗಿ ಬಂದ್ ಆಗಿರುತ್ತದೆ.

ಉದ್ಘಾಟನೆ ದಿನ

ಉದ್ಘಾಟನೆ ದಿನ

ಫೆಬ್ರವರಿ 20ರಂದು ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಉದ್ಘಾಟನೆಯಾಗಲಿದೆ. ಅಂದು ಕೆಂಪೇಗೌಡ ವಿಮಾನ ನಿಲ್ದಾಣ ಬೆಳಗ್ಗೆ 9 ರಿಂದ 12ರ ತನಕ ಮತ್ತು ಮಧ್ಯಾಹ್ನ 2 ರಿಂದ 5 ಗಂಟೆಯ ತನಕ ಬಂದ್ ಆಗಿರುತ್ತದೆ. ಫೆಬ್ರವರಿ 21 ಮತ್ತು 24ರಂದು ಬೆಳಗ್ಗೆ 10 ರಿಂದ 12, ಮಧ್ಯಾಹ್ನ 2 ರಿಂದ 5 ಗಂಟೆ ತನಕ ವಿಮಾನ ನಿಲ್ದಾಣ ಕಾರ್ಯ ನಿರ್ವಹಣೆ ಮಾಡುವುದಿಲ್ಲ.

ಪ್ರಯಾಣಿಕರಿಗೆ ಸೂಚನೆ

ಪ್ರಯಾಣಿಕರಿಗೆ ಸೂಚನೆ

ಈಗಾಗಲೇ ವಿಮಾನದ ಟಿಕೆಟ್ ಬುಕ್ ಮಾಡಿರುವ ಪ್ರಯಾಣಿಕರಿಗೆ ಸಮಯದ ಬದಲಾವಣೆ ಬಗ್ಗೆ ಕಂಪನಿಗಳು ಮಾಹಿತಿ ನೀಡಲಿವೆ. ಏರ್‌ ಶೋ, ವಿಮಾನ ನಿಲ್ದಾಣದ ಸಮಯ ಬದಲಾವಣೆ ಹಿನ್ನಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ.

English summary
Aero India 2019 is scheduled on February 20 to 24 at the Yelahanka Air Force Station, Bengaluru. Kempegowda International Airport (KIA) will be partially disrupted due to air show. Flight operations from February 14 to 24 will disrupted said KIA in press release.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X