ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಮನಿಸಿ: ಏರ್ ಷೋ 2017, ಯಲಹಂಕ ವ್ಯಾಪ್ತಿಯಲ್ಲಿ ಸಂಚಾರ ಬದಲಾವಣೆ

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 14ರಿಂದ 18ರ ವರಗೆ 5 ದಿನಗಳ ಕಾಲ 'ಏರ್ ಷೋ 2017’ ನಡೆಯಲಿರುವುದರಿಂದ ಯಲಹಂಕ ಸುತ್ತ ಮುತ್ತ ಸಂಚಾರ ಬದಲಾವಣೆ ಮಾಡಲಾಗಿದೆ. ಅವುಗಳ ಸಂಪೂರ್ಣ ವಿವರಗಳು ವರದಿಯಲ್ಲಿವೆ.

By Sachhidananda Acharya
|
Google Oneindia Kannada News

ಬೆಂಗಳೂರು, ಫೆಬ್ರವರಿ 13: ಯಲಹಂಕ ವಾಯುನೆಲೆಯಲ್ಲಿ 'ಏರ್ ಷೋ 2017' ನಡೆಯಲಿರುವುದರಿಂದ ಯಲಹಂಕ ಸುತ್ತ ಮುತ್ತ ಸಂಚಾರ ಬದಲಾವಣೆ ಮಾಡಲಾಗಿದೆ.

ಫೆಬ್ರವರಿ 14ರಿಂದ 18ರ ವರಗೆ 5 ದಿನಗಳ ಕಾಲ ನಡೆಯಲಿರುವ ಏರ್ ಷೋಗೆ ರಾಷ್ಟ್ರಪತಿ, ಪ್ರಧಾನ ಮಂತ್ರಿ ಹಾಗೂ ಇತರ ರಾಷ್ಟ್ರೀಯ, ಅಂತರಾಷ್ಟ್ರೀಯ ಗಣ್ಯರು ಆಗಮಿಸಲಿದ್ದಾರೆ. ಹೀಗಾಗಿ ಇಲ್ಲಿನ ಪ್ರಮುಖ ರಸ್ತೆಗಳಲ್ಲಿ ಸಂಚಾರ ಬದಲಾವಣೆಯನ್ನು ಮಾಡಲಾಗಿದೆ. ಈ ಸಂಚಾರ ಬದಲಾವಣೆ ಫೆಬ್ರವರಿ 13ರ ಮುಂಜಾನೆ 6 ಗಂಟೆಯಿಂದ ಫೆಬ್ರವರಿ 18 ರಾತ್ರಿ 8 ಗಂಟೆವರೆಗೆ ಇರಲಿದೆ.

ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವವರು ಮತ್ತು ಇತರ ಸಾರ್ವಜನಿಕರು ಈ ಬದಲಿ ವ್ಯವಸ್ಥೆಯಂತೆ ಪ್ರಯಾಣಿಸಬೇಕಾಗಿದೆ. ಈ ಐದು ದಿನಗಳಲ್ಲಿ ರಸ್ತೆಗಳಲ್ಲಿ ಭಾರಿ ವಾಹನಗಳ ಪ್ರಯಾಣ ನಿಷೇಧ, ರಸ್ತೆ ಬದಿ ವಾಹನ ನಿಲ್ಲಿಸುವುದು ಮತ್ತು ಏಕಮುಖ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಜಾರಿಗೆ ತರಲಾಗಿದೆ.

ಬೆಂಗಳೂರು ಪಶ್ಚಿಮ ದಿಕ್ಕಿನಿಂದ ಬರುವವರಿಗೆ

ಬೆಂಗಳೂರು ಪಶ್ಚಿಮ ದಿಕ್ಕಿನಿಂದ ಬರುವವರಿಗೆ

ಬೆಂಗಳೂರು ಪಶ್ಚಿಮ ದಿಕ್ಕಿನಿಂದ ಬರುವವರಿಗೆ ಪರ್ಯಾಯ ಮಾರ್ಗಗಳು ಚಿತ್ರದಲ್ಲಿ ಹೇಳಿದಂತೆ ಇದೆ.
ಇನ್ನು ಬೆಂಗಳೂರು ಬಳ್ಳಾರಿ ರಸ್ತೆಯಲ್ಲಿ ಹೆಬ್ಬಾಳ ಫ್ಲೈಓವರಿನಿಂದ ಎಂ.ವಿ.ಐ.ಟಿ ಗೇಟ್ ವರೆಗೆ ದಕ್ಷಿಣ ದಿಕ್ಕಿನಿಂದ ಉತ್ತರ ದಿಕ್ಕಿಗೆ ಸಂಚರಿಸುವ ಎಲ್ಲಾ ವಿಧದ ವಾಹನ ಸಂಚಾರವನ್ನೂ ನಿಲ್ಲಿಸಲಾಗಿದೆ.

ಪೂರ್ವ ದಿಕ್ಕಿನಿಂದ ಬರುವವರಿಗೆ

ಪೂರ್ವ ದಿಕ್ಕಿನಿಂದ ಬರುವವರಿಗೆ

ಬೆಂಗಳೂರಿನ ಪೂರ್ವ ದಿಕ್ಕಿನಿಂದ ಬರುವವರಿಗೆ ಚಿತ್ರದಲ್ಲಿರುವ ಈ ಪರ್ಯಾಯ ಮಾರ್ಗಗಳಲ್ಲಿ ಪ್ರಯಾಣಿಸುವಂತೆ ಟ್ರಾಫಿಕ್ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.

ದಕ್ಷಿಣ ದಿಕ್ಕಿನಿಂದ ಬರುವವರಿಗೆ

ದಕ್ಷಿಣ ದಿಕ್ಕಿನಿಂದ ಬರುವವರಿಗೆ

ಬೆಂಗಳೂರಿನ ದಕ್ಷಿಣ ದಿಕ್ಕಿನಿಂದ ಬರುವವರು ಚಿತ್ರದಲ್ಲಿ ಸೂಚಿಸಲಾದ ರಸ್ತೆಗಳನ್ನು ಬದಲಿಯಾಗಿ ಬಳಸಬೇಕು. ಈ ಹಿಂದಿನ ರಸ್ತೆಗಳಲ್ಲಿ ಪ್ರಯಾಣಿಸುವಂತಿಲ್ಲ.

ಪರ್ಯಾಯ ಮಾರ್ಗಗಳು

ಪರ್ಯಾಯ ಮಾರ್ಗಗಳು

ಬೆಂಗಳೂರು ಕಡೆಯಿಂದ ದೇವನಹಳ್ಳಿ ಅಥವಾ ವಿಮಾನ ನಿಲ್ದಾಣಕ್ಕೆ ಹೋಗುವವರು ಈ ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳುವಂತೆ ಆಯುಕ್ತರು ಸೂಚಿಸಿದ್ದಾರೆ. ನಿಷೇಧಿತ ಮಾರ್ಗಗಳಿಗೆ ಇವು ಪರ್ಯಾಯ ಮಾರ್ಗಗಳಾಗಿವೆ.

ಚಿಕ್ಕಬಳ್ಳಾಪುರ ಪರ್ಯಾಯ ಮಾರ್ಗ

ಚಿಕ್ಕಬಳ್ಳಾಪುರ ಪರ್ಯಾಯ ಮಾರ್ಗ

ಹೈದರಾಬಾದ್ ಮತ್ತು ಚಿಕ್ಕಬಳ್ಳಾಪುರ ಕಡೆಯಿಂದ ಬರುವ ವಾಹನಗಳು ಈ ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳಬಹುದು.

ಒನ್ ವೇ, ನೋ ಪಾರ್ಕಿಂಗ್

ಒನ್ ವೇ, ನೋ ಪಾರ್ಕಿಂಗ್

ಹಲವು ರಸ್ತೆಗಳಲ್ಲಿ ಏರ್ ಷೋ ಸಂಬಂಧಿಸಿದಂತೆ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಇನ್ನು ಕೆಲವು ರಸ್ತೆಗಳಲ್ಲಿ ಕಡ್ಡಾಯವಾಗಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದ್ದು ಅವುಗಳ ವಿವರಗಳು ಹೀಗಿವೆ,

English summary
The World famous Aero India show -2017 has been organized by the UnionDefense Ministry at Air Force Station, Yelahanka, Bengaluru from 14-18 February 2017. For this show Bengaluru Traffic Police diverted some roots, canceled parking in some roads and details of this changes are like this..
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X