ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಯಾಣದರ, ಮಾರ್ಗದ ಮಾಹಿತಿ ನೀಡುವ ಆಟೋ ಕೌಂಟರ್

|
Google Oneindia Kannada News

ಬೆಂಗಳೂರು, ಏ. 10 : ಪ್ರಯಾಣಿಕರಿಂದ ಆಟೋ ಚಾಲಕರು ಹೆಚ್ಚಿನ ದರ ವಸೂಲಿ ಮಾಡುವುದನ್ನು ತಡೆಯಲು ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಪ್ರೀ ಪೇಯ್ಡ್ ಆಟೋ ಕೌಂಟರ್‌ಗಳನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಈ ಯೋಜನೆ ಯಶಸ್ವಿಯಾದರೆ ನಗರದ ಹಲವು ಪ್ರದೇಶಗಳಲ್ಲಿ ಕೌಂಟರ್‌ಗಳನ್ನು ತೆರೆಯಲು ಸಂಚಾರಿ ಪೊಲೀಸರು ನಿರ್ಧರಿಸಿದ್ದಾರೆ.

ಗುರುವಾರ ಬೆಂಗಳೂರು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಎಂ.ಜಿ.ರಸ್ತೆ ಮತ್ತು ಗರುಡ ಮಾಲ್ ಮುಂಭಾಗದಲ್ಲಿನ ಎರಡು ನಿಲ್ದಾಣಗಳಿಗೆ ಚಾಲನೆ ನೀಡಿದರು. ಪ್ರಯಾಣಿಕರ ಭದ್ರತೆ ಮತ್ತು ವೈಜ್ಞಾನಿಕ ದರ ನಿಗದಿ ಈ ಕೇಂದ್ರಗಳ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು. [ಬೆಂಗಳೂರಿನ ಜನತೆಗೆ ವರವಾಗಿ ಬಂದಿದೆ ನ್ಯಾನೋ ಟ್ಯಾಕ್ಸಿ]

ವಿದೇಶಿಗರು ಮತ್ತು ಬೇರೆ ರಾಜ್ಯಗಳಿಂದ ಆಗಮಿಸುವ ಜನರು ಮಾರ್ಗ ತಿಳಿಯದ ಕಾರಣ ಆಟೋಗಳನ್ನು ಅವಲಂಬಿಸುತ್ತಾರೆ. ಇಂಥ ಪ್ರಯಾಣಿಕರಿಂದ ಚಾಲಕರು ಹೆಚ್ಚಿನ ದರವನ್ನು ವಸೂಲಿ ಮಾಡುತ್ತಾರೆ. ಇದನ್ನು ತಡೆಯಲು ಈ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದರು. [ಈ ಆಟೋ ಚಾಲಕನ ಪ್ರಾಮಾಣಿಕತೆಗೆ ಬೆಲೆಕಟ್ಟಲು ಸಾಧ್ಯವೆ?]

ಈ ಕೇಂದ್ರಗಳಿಂದ ಆಟೋ ಹೊರಡುವ ಮೊದಲು ತಲುಪಬೇಕಾದ ಸ್ಥಳಕ್ಕೆ ತಗಲುವ ವೆಚ್ಚವನ್ನು ಪ್ರಯಾಣಿಕರಿಗೆ ತಿಳಿಸಲಾಗುತ್ತದೆ. ಪ್ರಯಾಣಿಸುವ ಮಾರ್ಗವನ್ನು ಸೂಚಿಸಲಾಗುತ್ತದೆ. ಬೇರೆ ಮಾರ್ಗದಲ್ಲಿ ಸಂಚರಿಸಿದರೆ ನಿಯಂತ್ರಣ ಕೊಠಡಿಗೆ ತಕ್ಷಣ ಮಾಹಿತಿ ರವಾನೆಯಾಗುತ್ತದೆ ಎಂದು ದಯಾನಂದ್ ಮಾಹಿತಿ ನೀಡಿದರು.

ಎರಡು ಆಧುನಿಕ ಆಟೋ ಕೌಂಟರ್ ಆರಂಭ

ಎರಡು ಆಧುನಿಕ ಆಟೋ ಕೌಂಟರ್ ಆರಂಭ

ಪ್ರಯಾಣಿಕರಿಂದ ಆಟೋ ಚಾಲಕರು ಹೆಚ್ಚಿನ ದರ ವಸೂಲಿ ಮಾಡುವುದನ್ನು ತಡೆಯಲು ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಪ್ರೀ ಪೇಯ್ಡ್ ಆಟೋ ಕೌಂಟರ್‌ಗಳನ್ನು ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ.

ಎಂಜಿ ರೋಡ್, ಗರುಡ ಮಾಲ್ ಮುಂಭಾಗದಲ್ಲಿ ನಿಲ್ದಾಣ

ಎಂಜಿ ರೋಡ್, ಗರುಡ ಮಾಲ್ ಮುಂಭಾಗದಲ್ಲಿ ನಿಲ್ದಾಣ

ಬೆಂಗಳೂರು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಎಂ.ಜಿ.ರಸ್ತೆಯ ಮೆಟ್ರೋ ನಿಲ್ದಾಣ ಮತ್ತು ಗರುಡ ಮಾಲ್ ಮುಂಭಾಗದಲ್ಲಿನ ಎರಡು ನಿಲ್ದಾಣಗಳಿಗೆ ಚಾಲನೆ ನೀಡಿದರು.

ಕೌಂಟರ್ ವಿಶೇಷತೆ ಏನು?

ಕೌಂಟರ್ ವಿಶೇಷತೆ ಏನು?

ಈ ಕೇಂದ್ರಗಳಿಂದ ಆಟೋ ಹೊರಡುವ ಮೊದಲು ತಲುಪಬೇಕಾದ ಸ್ಥಳಕ್ಕೆ ತಗಲುವ ವೆಚ್ಚವನ್ನು ಪ್ರಯಾಣಿಕರಿಗೆ ತಿಳಿಸಲಾಗುತ್ತದೆ. ಪ್ರಯಾಣಿಸುವ ಮಾರ್ಗವನ್ನು ಸೂಚಿಸಲಾಗುತ್ತದೆ. ಬೇರೆ ಮಾರ್ಗದಲ್ಲಿ ಸಂಚರಿಸಿದರೆ ನಿಯಂತ್ರಣ ಕೊಠಡಿಗೆ ತಕ್ಷಣ ಮಾಹಿತಿ ರವಾನೆಯಾಗುತ್ತದೆ.

ಪ್ರಾಯೋಗಿಕವಾಗಿ ಚಾಲನೆ

ಪ್ರಾಯೋಗಿಕವಾಗಿ ಚಾಲನೆ

ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಪ್ರೀ ಪೇಯ್ಡ್ ಆಟೋ ಕೌಂಟರ್‌ಗಳನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಈ ಯೋಜನೆ ಯಶಸ್ವಿಯಾದರೆ ನಗರದ ಹಲವು ಪ್ರದೇಶಗಳಲ್ಲಿ ಕೌಂಟರ್‌ಗಳನ್ನು ತೆರೆಯಲು ಸಂಚಾರಿ ಪೊಲೀಸರು ನಿರ್ಧರಿಸಿದ್ದಾರೆ.

ದೂರುಗಳ ಹಿನ್ನಲೆಯಲ್ಲಿ ಕೌಂಟರ್ ಸ್ಥಾಪನೆ

ದೂರುಗಳ ಹಿನ್ನಲೆಯಲ್ಲಿ ಕೌಂಟರ್ ಸ್ಥಾಪನೆ

ವಿದೇಶಿಗರು ಮತ್ತು ಬೇರೆ ರಾಜ್ಯಗಳಿಂದ ಆಗಮಿಸುವ ಜನರು ಮಾರ್ಗ ತಿಳಿಯದ ಕಾರಣ ಆಟೋಗಳನ್ನು ಅವಲಂಬಿಸುತ್ತಾರೆ. ಇಂಥ ಪ್ರಯಾಣಿಕರಿಂದ ಚಾಲಕರು ಹೆಚ್ಚಿನ ದರವನ್ನು ವಸೂಲಿ ಮಾಡುತ್ತಾರೆ ಎಂದು ಹಲವು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಈ ಕೌಂಟರ್‌ಗಳನ್ನು ಆರಂಭಿಸಲಾಗಿದೆ.

English summary
The Bangalore Traffic Police launched Pre-paid auto counter with advanced technology. Counter will provide trip and tariff information for passengers said, Bengaluru Additional Commissioner of Police (Traffic) B. Dayananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X