ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ನಕಲಿ ನಂದಿನಿ ತುಪ್ಪ ಮಾರಾಟ ಮಾಡುತ್ತಿದ್ದವನ ಬಂಧನ

By Manjunatha
|
Google Oneindia Kannada News

ಬೆಂಗಳೂರು, ಡಿಸೆಂಬರ್ 13 : ನಕಲಿ ನಂದಿನಿ ತುಪ್ಪ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲದ ಮೇಲೆ ದಾಳಿ ನಡೆಸಿರುವ ಆಡುಗೊಡಿ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ಅಯ್ಯಪ್ಪ ಅಲಿಯಾಸ್ ಮಣಿ ಎಂಬಾತ ನಕಲಿ ನಂದಿನಿ ತುಪ್ಪವನ್ನು ತಯಾರಿಸಿ, ನಂದಿನಿ ಪ್ಯಾಕೆಟ್ ಗಳನ್ನು ಹೋಲುವಂತೆ ಯಥಾವತ್ ಪ್ಯಾಕ್ ಮಾಡಿ ಮಾರಾಟ ಮಾಡಿ ಹಣ ಗಳಿಸುತ್ತಿದ್ದ. ಈಗ ಈತ ಪೊಲೀಸರ ಅತಿಥಿಯಾಗಿದ್ದಾನೆ.

ನಂದಿನಿ ಮಾದರಿಯಂತೆ ಪ್ಯಾಕಿಂಗ್ ಮಾಡಲೆಂದು ಹೈದರಾಬಾದ್ ನಿಂದ ವಿಶೇಷ ಯಂತ್ರ ಖರೀದಿಸಿ ತಂದಿದ್ದ ಈತ, ಕಳಪೆ ತುಪ್ಪವನ್ನು ತಯಾರು ಮಾಡಲೂ ಕೆಲವು ಯಂತ್ರಗಳನ್ನು ಇರಿಸಿಕೊಂಡಿದ್ದ ಇವುಗಳನ್ನೆಲ್ಲಾ ಈಗ ಆಡುಗೊಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Adugodi police arrests fake Nandini ghee seller

ಕಲಬೆರಕೆ ವಸ್ತುಗಳನ್ನು ತಯಾರಿಸಿ ಮಾಡುವ ದಂಧೆಯನ್ನು ಮುಂಚಿನಿಂದಲೂ ಮಾಡುತ್ತಾ ಬಂದಿರುವ ಮಣಿ ಈ ಮುಂಚೆ ನಕಲಿ ನೂಡಲ್ಸ್, ಕಲಬೆರಕೆ ದೀಪದ ಎಣ್ಣೆ, ನಕಲಿ ಫೇಸ್‌ಕ್ರೀಮ್‌ಗಳನ್ನು ಮಾರಾಟ ಮಾಡಿದ್ದ. ಆದರೆ ಅದರಿಂದ ಹೆಚ್ಚಿನ ಲಾಭ ಬಾರದಿದ್ದ ಕಾರಣ ನಕಲಿ ನಂದಿನಿ ತುಪ್ಪ ಮಾರಲು ಪ್ರಾರಂಭ ಮಾಡಿದ್ದ.

ಕೆಲವು ನಂದಿನಿ ಪದಾರ್ಥಗಳ ಹಂಚಿಕೆದಾರರನ್ನು ಹಿಡಿದು ಅವರಿಗೆ ಕಡಿಮೆ ದರದಲ್ಲಿ ನಕಲಿ ನಂದಿನಿ ತುಪ್ಪವನ್ನು ಮಾಡಿ ಹಣ ಗಳಿಸುತ್ತಿದ್ದ, ಇತ್ತೀಚೆಗೆ ಆಡುಗೋಡಿ ಸಮೀಪದ ನಂದಿನಿ ಪಾರ್ಲರ್‌ನಲ್ಲಿ ತುಪ್ಪ ಕೊಂಡ ಗ್ರಾಹಕರೊಬ್ಬರು ಗುಣಮಟ್ಟ ಮತ್ತು ಅಳತೆಯಲ್ಲಿ ವ್ಯತ್ಯಾಸವಿರುವುದಾಗಿ ದೂರಿ ಅದನ್ನು ಪಾರ್ಲರ್‌ಗೆ ವಾಪಾಸ್ ನೀಡಿದಾಗ ಅನುಮಾನಗೊಂಡ ನಂದಿನಿ ಪಾರ್ಲರ್ ಮಾಲೀಕ ಇದನ್ನು ಕೆ.ಎಂ.ಎಫ್ ಗಮನಕ್ಕೆ ತಂದಿದ್ದ, ಕೆ.ಎಂಎಫ್ ಈ ವಿಷಯವಾಗಿ ಪೊಲೀಸರಿಗೆ ದೂರು ನೀಡಿತ್ತು.

ಈತ ಬೆಂಗಳೂರಿನಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಿಗೂ ನಕಲಿ ನಂದಿನಿ ತುಪ್ಪ ಮಾರಾಟ ಮಾಡುತ್ತಿದ್ದ. ಪ್ರಸ್ತುತ ಈತನಿಂದ 800 ಲೀಟರ್ ನಕಲಿ ನಂದಿನಿ ತುಪ್ಪವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

English summary
Mani alias Ayyappa from Tamilnadu arrested by Adugodi police for making and selling fake Nandini brand Ghee. Mani brought high tech machines from hyderabad and chennai to duplicate the Nandini packing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X