ಬಿಜೆಪಿ ಜತೆಗಿನ 'ರಸ್ತೆ' ಜಗಳಕ್ಕಿಳಿದ ನಟಿ ರಮ್ಯಾ; ಟ್ವಿಟ್ಟರ್ ನಲ್ಲಿ ಟಾಂಗ್

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 8: ಬೆಂಗಳೂರಿನಲ್ಲಿ ರಸ್ತೆಗಳ ಪರಿಸ್ಥಿತಿ ಹದಗೆಟ್ಟಿದೆ ಎಂಬುದನ್ನು ಜಗಜ್ಜಾಹೀರು ಮಾಡುವ ಕೆಲಸಕ್ಕೆ ಹೈ ಹಾಕಿದ್ದ ಬಿಜೆಪಿ ಕರ್ನಾಟಕ ಐಟಿ ಸೆಲ್ ವಿರುದ್ಧ ಪ್ರತೀಕಾರಕ್ಕೆ ಕೈ ಹಾಕಿರುವ ನಟಿ ಹಾಗೂ ಕಾಂಗ್ರೆಸ್ ನಾಯಕಿ ರಮ್ಯಾ, ತಾವೂ ಒಂದು ಫೋಟೋ ಹಾಕುವ ಮೂಲಕ ಬಿಜೆಪಿಗೆ ಟಾಂಗ್ ನೀಡಲು ಯತ್ನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಅಹ್ಮದಾಬಾದ್ ನಗರದಲ್ಲಿ ಉಂಟಾಗಿರುವ ಬೃಹತ್ ರಸ್ತೆ ಕುಸಿತದ ಫೋಟೋವೊಂದನ್ನು ಹಾಕಿ, 'ನಾಸಾ ವಿಜ್ಞಾನಿಗಳು ಚಂದ್ರನಲ್ಲಿ ದೊಡ್ಡ ಕುಳಿಯನ್ನು ಪತ್ತೆ ಮಾಡಿದವು. ಆದರೆ, ಅಹ್ಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಆ ಕುಳಿ ಅಹ್ಮದಾಬಾದ್ ರಸ್ತೆಯದ್ದು ಎಂದು ಖಾತ್ರಿ ಪಡಿಸಿದೆ' ಎಂದು ಗೇಲಿ ಮಾಡಿದ್ದಾರೆ.

ಬೆಂಗಳೂರು ರಸ್ತೆಯೆಂದು ಮುಂಬೈ ರಸ್ತೆ ತೋರಿಸಿದ ಬಿಜೆಪಿ ಈಗ ವಿವಾದದಲ್ಲಿ!

Actress Ramya posts photo of bad road of Ahmedabad on twitter

ಬಿಜೆಪಿ ಕರ್ನಾಟಕ ಐಟಿ ಸೆಲ್ ವಿಭಾಗವು, ಭಾನುವಾರ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬೆಂಗಳೂರಿನ ರಸ್ತೆಗಳು ಹದಗೆಟ್ಟಿರುವ ಬಗ್ಗೆ ಗಮನ ಸೆಳೆಯುವ ಪ್ರಯತ್ನಕ್ಕೆ ಕೈ ಹಾಕಿತ್ತು. ಆದರೆ, ಅದು ಬೆಂಗಳೂರು ರಸ್ತೆಗಳ ಫೋಟೋ ಹಾಕುವ ಬದಲು ಮುಂಬೈನಲ್ಲಿರುವ ಅತಿ ಕೆಟ್ಟದಾದ, ದೊಡ್ಡದೊಡ್ಡ ಗುಂಡಿಗಳು ಇರುವ ರಸ್ತೆಯೊಂದರ ಫೋಟೋ ಹಾಕಿ ಅದನ್ನು ಬೆಂಗಳೂರು ರಸ್ತೆಯೆಂದು ಹೇಳಿತ್ತು.

ಅಲ್ಲದೆ, ಚಿತ್ರದ ಕ್ಯಾಪ್ಷನ್ ನಲ್ಲಿ ನಾಸಾ ಸಂಸ್ಥೆಯು (ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಚಂದ್ರನ ಹೊಸತೊಂದು ದೊಡ್ಡ ಕುಳಿಯನ್ನು ಪತ್ತೆ ಮಾಡಿರುವುದಾಗಿ ಹೇಳಿದೆ. ಆದರೆ, ಬೆಂಗಳೂರು ಮಹಾನಗರ ಪಾಲಿಕೆಯು, ಅದು ಬೆಂಗಳೂರಿನ ರಸ್ತೆಯಲ್ಲಿನ ಕುಳಿಯೆಂದು ಖಾತ್ರಿ ಪಡಿಸಿದೆ ಎಂದು ಹಾಕಿ ಕುಚೋದ್ಯ ಮಾಡಲಾಗಿತ್ತು.

Ramya On Twitter Gives A Controversial Statement About Modi

ಆದರೆ, ಆ ಚಿತ್ರ ತಪ್ಪೆಂದೂ, ಅಸಲಿಗೆ ಆ ರಸ್ತೆಯ ಫೋಟೋ ಮುಂಬೈನ ರಸ್ತೆಯದ್ದೆಂದೂ ಹಲವಾರು ಟ್ವಿಟ್ಟಿಗರು ಪ್ರತಿಕ್ರಿಯೆ ನೀಡಿದ ನಂತರ, ಕಾಂಗ್ರೆಸ್ಸಿಗರ ಪಿತ್ತ ನೆತ್ತಿಗೇರಿ ಅವರೂ ಟೀಕಾಸ್ತ್ರಗಳನ್ನು ಪ್ರಯೋಗಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Actress and Congress leader Ramya takes a dig at Karnataka BJP, by posting a photo of crater in Ahmedabad road, on twitter and tried to indicate the flaws in BJP ruled states. This move is retalitation to what BJP Karnataka tried the same to show the flaws in Congress ruling Karnataka.
Please Wait while comments are loading...