ಗ್ರೇಟ್ ಗರುಡ ಶಾಪಿಂಗ್ ಫೆಸ್ಟಿವಲ್ ನಲ್ಲಿ ಶಾಪಿಂಗ್ ಮಾಡಿ 1 ಲಕ್ಷ ಗಿಫ್ಟ್ ಗೆಲ್ಲಿರಿ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಡಿಸೆಂಬರ್ . 04 : ಫ್ಯಾಷನ್ ಪ್ರಿಯರ ಅಚ್ಚುಮೆಚ್ಚಿನ ತಾಣವಾದ ಗರುಡ ಮಾಲ್ ಫ್ಯಾಷನ್ ಪ್ರಿಯರನ್ನು ಸಂತುಷ್ಟಗೊಳಿಸಲೆಂದೇ ಈ ಬಾರಿಯೂ ಕೂಡ ಹೊಸ ಥೀಮ್ನೊಂದಿಗೆ ಗ್ರೇಟ್ ಗರುಡ ಶಾಪಿಂಗ್ ಫೆಸ್ಟಿವಲ್ -2016ನ್ನು ಆಯೋಜಿಸಿದೆ.

ಈ ಗ್ರೇಟ್ ಗರುಡ ಶಾಪಿಂಗ್ ಫೆಸ್ಟಿವಲ್ ನ್ನು ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾಮಣಿ ಅವರು ಶನಿವಾರ ಉದ್ಘಾಟಿಸಿದರು. ಡಿಸೆಂಬರ್ 3ರಿಂದ ಜನವರಿ 1ರವರೆಗೆ ನಡೆಯಲಿರುವ ಈ ಶಾಪಿಂಗ್ ಹಬ್ಬದಲ್ಲಿ ಹತ್ತು ಹಲವು ಆಕರ್ಷಣೆಗಳು ಗ್ರಾಹಕರನ್ನು ಸೆಳೆಯಲಿವೆ.

Actress Priyamani inagurated of Great Garuda Shopping Fest 2016

ಅಂದಹಾಗೆ, ಗರುಡ ಮಾಲ್ ಈ ಬಾರಿಯ ಉತ್ಸವವನ್ನು ಯುರೋಪಿಯನ್ ಥೀಮ್ನೊಂದಿಗೆ ಆಚರಿಸುತ್ತಿದೆ. ಅದಕ್ಕೆ ಅನುಗುಣವಾಗಿ ಮಾಲ್ ನ ಇಡೀ ಆವರಣವನ್ನು ಯುರೋಪಿಯನ್ಮಯವಾಗಿಸಿದ್ದಾರೆ ಕಲಾವಿದ ಅರುಣ್ ಸಾಗರ್ ಅವರು.

ಹಾಗೆಯೇ, ಕ್ಷಣಕ್ಷಣಕ್ಕೂ ಬದಲಾಗುವ ಹೊಸ ಫ್ಯಾಷನ್ ಟ್ರೆಂಡ್ ಅನ್ನು ಮೊಗೆದು ಕುಡಿಯುವ ಅಲ್ಲಿನ ಸ್ಪೈಲಿಶ್ ಜನರ ಫ್ಯಾಷನ್ ಮೋಹವನ್ನು ಮಾಲ್ ನ ಅಂಗಳದಲ್ಲಿ ಅರುಣ್ ಸಾಗರ್ ಭಟ್ಟಿ ಇಳಿಸಿದ್ದಾರೆ.

Actress Priyamani inagurated of Great Garuda Shopping Fest 2016

ಗ್ರೇಟ್ ಗರುಡ ಶಾಪಿಂಗ್ ಫೆಸ್ಟಿವಲ್ನಲ್ಲಿ ಭಾಗವಹಿಸಲು ಇದೊಂದೇ ಕಾರಣವಲ್ಲ. ಗ್ರಾಹಕರ ಮನಸ್ಸನ್ನು ಸೆಳೆಯುವ, ಸಂತೋಷ ತುಂಬುವ ನೂರಾರು ಆಕರ್ಷಣೆಗಳು ಇಲ್ಲಿವೆ. ಇಲ್ಲಿ ಶಾಪಿಂಗ್ ಮಾಡುವ ಅದೃಷ್ಟ ಶಾಲಿಗಳು ಪ್ರತಿದಿನ 1 ಲಕ್ಷ ಮೌಲ್ಯದ ಗಿಫ್ಟ್ ವೋಚರ್ಗಳನ್ನು ಗೆಲ್ಲಬಹುದು.

ಅತಿಹೆಚ್ಚು ಶಾಪಿಂಗ್ ಮಾಡುವ ಅದೃಷ್ಟಶಾಲಿಯೊಬ್ಬ ವಾರಕ್ಕೊಮ್ಮೆ ಮಾರುತಿ ಬ್ರೀಜ್ಜಾ ಕಾರು ಗೆಲ್ಲುವ ಅವಕಾಶವೂ ಇದೆ. ವಿಶ್ವದರ್ಜೆಯ ಶಾಪಿಂಗ್ ಅನುಭವ ನೀಡುವ ಗರುಡ ಶಾಪಿಂಗ್ ಫೆಸ್ಟ್ ನಲ್ಲಿ ಭಾಗವಹಿಸಿ, ಮನಸ್ಸಿನ ಚೈತನ್ಯವನ್ನು ನೂರ್ಮಡಿಗೊಳಿಸಿಕೊಳ್ಳಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Actress Priyamani inagurated of Great Garuda Shopping Fest 2016 in Bengaluru on Dec 3, 2016. The Great Garuda Shopping Fest from December 03 to till january 01, 2017.
Please Wait while comments are loading...