ಬೆಂಗಳೂರಿನಲ್ಲಿ ವಿವೊ ಶೋರೂಂಗೆ ಹರಿಪ್ರಿಯಾ ಚಾಲನೆ

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 15 : ಸ್ಮಾರ್ಟ್‌ಫೋರ್ನ್ ಪ್ರಿಯರಿಗೆ ಇಲ್ಲೊಂದು ಸಂತಸ ಸುದ್ದಿ ಇದೆ. ವಿಶ್ವದ ಸ್ಮಾರ್ಟ್‌ಫೋನ್ ಮೇಕಿಂಗ್ ಕಂಪನಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ 'ವಿವೊ' ವತಿಯಿಂದ ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಅತಿದೊಡ್ಡ ಸ್ಮಾರ್ಟ್‌ಫೋನ್ ಶೋರೂಂ ಶುಭಾರಂಭಗೊಂಡಿದೆ.

ನಗರದ ಸಿ.ಎಂ.ಎಚ್ ರಸ್ತೆಯಲ್ಲಿ ಆರಂಭವಾದ 'ವಿವೊ' ಮೊಬೈಲ್ ಶೋರೂಂ ಅನ್ನು ನಟಿ ಹರಿಪ್ರಿಯ ವಿವೊ ವಿ3 ಮ್ಯಾಕ್ಸ್‌ನಲ್ಲಿ ಸೆಲ್ಫಿ ತೆಗೆಯುವ ಮೂಲಕ ಉದ್ಘಾಟಿಸಿದರು. ಇದೇವೇಳೆ ಮೊದಲ ಗ್ರಾಹಕರಿಗೆ ವಿವೊ ಮೊಬೈಲ್ ಹಸ್ತಾಂತರಿಸಿದರು. ವಿವೊ ಕಮ್ಯುನಿಕೇಷನ್‌ನ ನಿರ್ದೇಶಕ ಮ್ಯಾಟ್‌ಮಾ ಮತ್ತು ವಿವೊ ರೀಜನಲ್ ಡಿಸ್ಟ್ರಿಬ್ಯೂಟರ್ ಸುರೇಶ್ ಜೈನ್ ಉಪಸ್ಥಿತರಿದ್ದರು.

ಬೆಂಗಳೂರಿನಲ್ಲಿ ಆರಂಭವಾಗುತ್ತಿರುವ 2ನೇ 'ವಿವೊ' ಶೋರೂಂ ಇದಾಗಿದೆ. ಅಲ್ಲದೆ ಇದು ವಿವೊ 4ಜಿ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳ ಮಾರಾಟದ ಮಳಿಗೆಯಾಗಿದೆ. ಈ 'ವಿವೋ' ಶೋರೂಂನಲ್ಲಿ ವಿಶೇಷ ಡೆಮೋಝೋನ್ ಇದ್ದು, ಇದರಿಂದ ಹೈಫೈ ವಿವೊ ಸ್ಮಾರ್ಟ್‌ಫೋನ್‌ಗಳ ಸಮಗ್ರ ಮಾಹಿತಿ ಪಡೆಯಲು ಮತ್ತು ತಮ್ಮ ನೆಚ್ಚಿನ ಮೊಬೈಲ್‌ ಆಯ್ಕೆಗೆ ಸುಲಭವಾಗುತ್ತದೆ.

ಸೆಲ್ಫಿ ತೆಗೆದುಕೊಳ್ಳುವುದು ಹೀಗೆ ಅಂತಾರೆ ಪ್ರಿಯಾ

ಸೆಲ್ಫಿ ತೆಗೆದುಕೊಳ್ಳುವುದು ಹೀಗೆ ಅಂತಾರೆ ಪ್ರಿಯಾ

ವಿಶ್ವದ ಹೈಫೈ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿವೋ ವಿ, ವೈ ಎಂಬ (V, Y) ಎರಡು ಸರಣಿಗಳಲ್ಲಿ ವೈವಿಧ್ಯಮಯ ಮಾಡೆಲ್‌ಗಳನ್ನು ಹೊರತಂದಿದೆ.

ಯುವಜನತೆಯ ಮೆಚ್ಚಿನ ಸ್ಮಾರ್ಟ್‌ಫೋನ್

ಯುವಜನತೆಯ ಮೆಚ್ಚಿನ ಸ್ಮಾರ್ಟ್‌ಫೋನ್

ಹೈಫೈ ಮ್ಯೂಸಿಕ್, ಆಕರ್ಷಕ ವಿನ್ಯಾಸ ಸೇರಿದಂತೆ ಹಲವು ಆಧುನಿಕ ಸೌಲ್ಯಭ್ಯಗಳಿರುವ ವಿವೋ ವಿಶೇಷವಾಗಿ ಯುವಜನತೆಯ ಮೆಚ್ಚಿನ ಸ್ಮಾರ್ಟ್‌ಫೋನ್ ಆಗಿ ಹೊರಹೊಮ್ಮಿದೆ. ಹೈಫೈ ಸ್ಮಾರ್ಟ್‌ಫೋನ್‌ಗಳ ವಿನ್ಯಾಸದಲ್ಲಿ ‘ವಿವೊ' ಕಂಪನಿ ಗಮನ ಸೆಳೆದಿದೆ.

ದೇಶದ 22 ರಾಜ್ಯಗಳಲ್ಲಿ ಶೋರೂಂ

ದೇಶದ 22 ರಾಜ್ಯಗಳಲ್ಲಿ ಶೋರೂಂ

ಭಾರತದಲ್ಲಿ ‘ವಿವೊ' ಸ್ಮಾರ್ಟ್‌ಫೋನ್‌ ಕ್ಷೇತ್ರಕ್ಕೆ ಪ್ರವೇಶಿಸಿದ್ದು 2014ರಲ್ಲಿ. ಕೇವಲ ಒಂದೂವರೆ ವರ್ಷದಲ್ಲಿ ವಿವೋ ದೇಶದ ಹೈಫೈ ಮತ್ತು ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿ ಹೊರಹೊಮ್ಮಿದೆ. ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಶೇ.7ರಷ್ಟು ಶೇರುಗಳನ್ನು ತನ್ನದಾಗಿಸಿಕೊಂಡಿರುವ ವಿವೊ ಕಂಪನಿ, ದೇಶದ 22 ರಾಜ್ಯಗಳ 300 ನಗರಗಳಲ್ಲಿ 10 ಸಾವಿರಕ್ಕೂ ಹೆಚ್ಚು ಶೋರೂಂಗಳನ್ನು ಹೊಂದಿದೆ.

ಮೇಕ್‌ಇನ್‌ ಇಂಡಿಯಾ ಸ್ಫೂರ್ತಿ

ಮೇಕ್‌ಇನ್‌ ಇಂಡಿಯಾ ಸ್ಫೂರ್ತಿ

ವಿಶೇಷವಾಗಿ ಟಿವಿ ಕಾರ್ಯಕ್ರಮಗಳ ಪ್ರಾಯೋಜಕ ಕಂಪನಿಯಾಗಿ ವಿವೊ ಗಮನ ಸೆಳೆದಿದೆ. ಮೇಕ್‌ಇನ್‌ ಇಂಡಿಯಾ ಸ್ಫೂರ್ತಿಯಲ್ಲಿ ಭಾರತದಲ್ಲೇ ಹೈಫೈ ಸ್ಮಾರ್ಟ್‌ಫೋನ್‌ ಉತ್ಪಾದಿಸುತ್ತಿರುವುದು ವಿವೊ ಹೆಗ್ಗಳಿಕೆ.

ಯಂಗ್‌ ಜನರೇಷನ್‌ ಅಚ್ಚುಮೆಚ್ಚಿನ ಫೋನ್

ಯಂಗ್‌ ಜನರೇಷನ್‌ ಅಚ್ಚುಮೆಚ್ಚಿನ ಫೋನ್

ಭಾರತದ ಮಾತ್ರವಲ್ಲ, ಚೀನಾದ ಸ್ಮಾರ್ಟ್‌ಫೋನ್‌ಗಳ ಸಾಲಿನಲ್ಲಿ ‘ವಿವೊ' ಟಾಪ್-3 ಎನಿಸಿಕೊಂಡಿದೆ. ಮಲೇಶಿಯಾ, ಇಂಡೋನೇಷಿಯಾ, ಥೈಲ್ಯಾಂಡ್, ಮ್ಯಾನ್ಮಾರ್, ವಿಯೆಟ್ನಾಮ್ ಮತ್ತು ಫಿಲಿಫೈನ್ಸ್ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ವಿವೋ ಹೈಫೈ ಸ್ಮಾರ್ಟ್‌ಫೋನ್ ಆಗಿ ಯಂಗ್‌ ಜನರೇಷನ್‌ ಅಚ್ಚುಮೆಚ್ಚಿನ ಫೋನ್ ಎನಿಸಿಕೊಂಡಿದೆ. ಮಾಹಿತಿಗೆ ಸಂಪರ್ಕಿಸಿ: 88844 47181

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada actress Haripriya inaugurated Vivo smartphone mobiles biggest showroom in south India in Bengaluru on 15th September. She inaugurated the showroom by taking selfie with hifi Vivo mobile. The company is spread across 22 states.
Please Wait while comments are loading...