ತೆನೆ ಹೊತ್ತ ಮಹಿಳೆಯಾದರು ನಟಿ ಅಮೂಲ್ಯ

Posted By:
Subscribe to Oneindia Kannada
   ನಟಿ ಅಮೂಲ್ಯ ಎಚ್ ಡಿ ದೇವೆ ಗೌಡ್ರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆ | Oneindia Kannada

   ಬೆಂಗಳೂರು, ಏಪ್ರಿಲ್ 17: ''ಚೆಲುವಿನ ಚಿತ್ತಾರ'ದ 'ಐಶೂ' ಈಗ 'ತೆನೆ' ಹೊರಲು ಸಿದ್ಧರಾಗಿದ್ದಾರೆ. ಮಾವ ಜಿ.ಎಚ್. ರಾಮಚಂದ್ರ ಜೆಡಿಎಸ್ ಸೇರಿದ ಬಳಿಕ ಅವರದೇ ಹಾದಿ ಹಿಡಿದಿರುವ ನಟಿ ಅಮೂಲ್ಯ ಕೂಡ ಜೆಡಿಎಸ್‌ನತ್ತ ಹೊರಳಿದ್ದಾರೆ.

   ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

   ಮಂಗಳವಾರ ಜೆಡಿಎಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮೂಲ್ಯ, ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾದರು.

   ಬಿಜೆಪಿ ತೊರೆದು ಜೆಡಿಎಸ್ ಸೇರಿದ ನಟಿ ಅಮೂಲ್ಯ ಮಾವ

   ಕಮಲ ಪಾಳೆಯದಲ್ಲಿ ಗುರುತಿಸಿಕೊಂಡಿದ್ದ ರಾಮಚಂದ್ರ ಅವರು ರಾಜರಾಜೇಶ್ವರಿ ನಗರದಲ್ಲಿ ಸ್ಪರ್ಧಿಸುವ ಪ್ರಬಲ ಆಕಾಂಕ್ಷೆ ಹೊಂದಿದ್ದರು. ಸುಮಾರು ಎರಡು ದಶಕಗಳಿಂದ ಬಿಜೆಪಿಯಲ್ಲಿದ್ದ ಅವರು, ಯಡಿಯೂರಪ್ಪರ ಆಪ್ತ ವಲಯದಲ್ಲಿದ್ದರು. ಈ ಬಾರಿ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ಭರವಸೆ ಹೊಂದಿದ್ದರು.

   Actress amulya joined JDS

   ಆದರೆ, ಬಿಜೆಪಿ ಬಿಡುಗಡೆ ಮಾಡಿದ ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ ಪಿ.ಎಂ. ಮುನಿರಾಜು ಗೌಡ ಅವರಿಗೆ ಟಿಕೆಟ್ ನೀಡಲಾಗಿತ್ತು. ಇದರಿಂದ ಅಸಮಾಧಾನಗೊಂಡಿದ್ದ ರಾಮಚಂದ್ರ ನಾಲ್ಕು ದಿನಗಳ ಹಿಂದಷ್ಟೇ ಜೆಡಿಎಸ್ ಸೇರ್ಪಡೆಗೊಂಡಿದ್ದರು.

   ರಾಜರಾಜೇಶ್ವರಿ ನಗರ : ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ಪರಿಚಯ

   ಮಾವನೊಂದಿಗೆ ರಾಜಕೀಯ ವಲಯಗಳಲ್ಲಿ ಗುರುತಿಸಿಕೊಳ್ಳುತ್ತಿರುವ ಅಮೂಲ್ಯ ಕೂಡ ಜೆಡಿಎಸ್‌ಗೆ ಅಧಿಕೃತವಾಗಿ ಸೇರಿದ್ದಾರೆ. ಆರ್‌ ಆರ್‌ ನಗರದಿಂದ ಸ್ಪರ್ಧಿಸಲು ಬಯಸಿರುವ ಮಾವ ಮತ್ತು ಪಕ್ಷದ ಇತರೆ ಅಭ್ಯರ್ಥಿಗಳ ಪರ ಅವರು ಪ್ರಚಾರ ನಡೆಸಲಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   'Cheluvina Chittara' fame Kannada Actress Amulya has joined JDS on Tuesday. Her Father In-law Ramachandra is set to contest from RR nagar constituency from JDS.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ