ಕೋರಮಂಗಲದಲ್ಲಿ ಗೌಡ್ರು ಹೋಟೆಲ್ ಉದ್ಘಾಟಿಸಿದ ಯಶ್

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 21: ಕೋರಮಂಗಲದ ಸುತ್ತಮುತ್ತಲಿನ ನಾನ್‍ವೆಜ್ ಪ್ರಿಯರಿಗೆ ಇದೊಂದು ಸಂತಸದ ಸುದ್ದಿ. ಸಿಲಿಕಾನ್ ಸಿಟಿ ಬೆಂಗಳೂರಿನ ಮನೆಮಾತಾಗಿರುವ ಗ್ರಾಂಡ್ ಗೌಡ್ರು ಹೊಟೇಲ್ ತನ್ನ ಶಾಖೆಯನ್ನು ಕೋರಮಂಗಲ ಕ್ಲಬ್ ಹತ್ತಿರ ಇಂದು ಆರಂಭಿಸಿದೆ.

ರಾಜಕೀಯ ಪ್ರವೇಶ ಉದ್ದೇಶಕ್ಕಾಗಿ ರೈತನಿಗೆ ನೆರವಾಗುತ್ತಿಲ್ಲ: ಯಶ್

ಬೆಂಗಳೂರಿನಲ್ಲಿ ಇದು ಗ್ರಾಂಡ್ ಗೌಡ್ರು ಹೊಟೇಲ್‍ನ ಮೂರನೇ ಶಾಖೆ ಇದಾಗಿದೆ. ಪಕ್ಕಾ ದೇಸಿ ಮತ್ತು ಮನೆಯೂಟದ ಸವಿಯನ್ನೇ ಹೊಂದಿರುವ ಈ ಹೊಟೇಲ್‍ನ ಮೂರನೇ ಶಾಖೆಯನ್ನು ರಾಕಿಂಗ್ ಸ್ಟಾರ್ ಯಶ್ ಅವರು ಉದ್ಘಾಟಿಸಿದರು.

ಯಶ್ ಹೂಳೆತ್ತಿದ್ದ ಕೊಪ್ಪಳದ ತಲ್ಲೂರು ಕೆರೆಯಲ್ಲೀಗ ನೀರೋ ನೀರು

Actor Yash inaugurates Grand Gowdru Hotel, Koramangala

ಚಿಕನ್‍ನಲ್ಲಿ ಹತ್ತಾರು ಬಗೆಯ ಖಾದ್ಯಗಳು, ಮಟನ್‍ನಲ್ಲಿ ಹಲವು ಬಗೆಯ ತಿನಿಸುಗಳು, ವಿಭಿನ್ನ ರುಚಿ ನೀಡುವ ಬಿರಿಯಾನಿ ಹೀಗೆ ಹತ್ತು ಹಲವಾರು ಖಾದ್ಯಗಳು ಮಾಂಸ ಪ್ರಿಯರನ್ನು ಕೈಬೀಸಿ ಕರೆಯುತ್ತವೆ. ಹಳ್ಳಿ ಸ್ಟೈಲಿನಲ್ಲಿ ಗ್ರಾಮೀಣ ಸೊಗಡಿನ ರುಚಿಯನ್ನು ಹೊಂದಿರುವ ಈ ಖಾದ್ಯಗಳನ್ನು ಒಮ್ಮೆ ತಿಂದರೆ ಮತ್ತೊಮ್ಮೆ ತಿನ್ನಬೇಕು ಎಂದೆನಿಸದೇ ಇರಲಾರದು.

ಅತಿ ವೇಗ ಥ್ರಿಲ್ ಕೊಡುತ್ತೆ, ಜೀವ ತೆಗೆಯುತ್ತೆ : ಯಶ್

ಹೊಟೇಲ್ ಅನ್ನು ಉದ್ಘಾಟನೆ ಮಾಡಿ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್ ಅವರು, ಗ್ರಾಮೀಣ ಶೈಲಿಯ ಈ ಹೊಟೇಲ್‍ನಲ್ಲಿ ತಯಾರಾಗುವ ಖಾದ್ಯಗಳು ನಿಜಕ್ಕೂ ಎಲ್ಲರನ್ನೂ ಮನಸೂರೆಗೊಳ್ಳಲಿವೆ. ಇದೇ ರೀತಿಯ ಗುಣಮಟ್ಟದ ರುಚಿಯನ್ನು ಕಾಯ್ದುಕೊಂಡು ನಗರ ಪ್ರದೇಶದ ಅದರಲ್ಲೂ ಕೋರಮಂಗಲ ಭಾಗದ ಜನರಿಗೆ ಹಳ್ಳಿ ಸ್ಟೈಲಿನ ಖಾದ್ಯಗಳ ರುಚಿಯನ್ನು ನೀಡಬೇಕೆಂದು'' ಕಿವಿಮಾತು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Actor Yash inaugurates Grand Gowdru Hotel near Koramangala club 6th block. Desi Village style of food flavor should be maintained in order to attract foodies said Yash.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ