ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಂಗ್ಸ್ ಫಾರ್ ವುಮೆನ್ ಗೆ ನಟ ವಶಿಷ್ಟ ಸಿಂಹ ಬೆಂಬಲ!

By Mahesh
|
Google Oneindia Kannada News

ಬೆಂಗಳೂರು, ಮಾ.25: ನೈರ್ಮಲ್ಯಯುತ ಜೀವನವನ್ನು ಸಾಗಿಸುವುದರ ಕುರಿತಾದಂತೆ ಜಾಗೃತಿ ಮೂಡಿಸುವ ಅಗತ್ಯವಿದೆ. ಈ ಕಾರಣದಿಂದಾಗಿ 92.7 ಬಿಗ್ ಎಫ್.ಎಮ್ ಬೆಂಗಳೂರು ಉತ್ತಮವಾದ ಉಪಕ್ರಮವೊಂದನ್ನು ಕೈಗೊಂಡಿದೆ.

ಪ್ರತಿಯೊಂದು ಕುಟುಂಬಗಳಿಗೂ ನೈರ್ಮಲ್ಯತೆಯು ಅತ್ಯಗತ್ಯವಾಗಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಈ ನಿಟ್ಟಿನಲ್ಲಿ ಬಿಗ್ ಎಫ್.ಎಮ್ ನ ನಿರೂಪಕಿ ಆರ್.ಜೆ ಶ್ರುತಿ ತಮ್ಮ ತಂಡ ಬಿಗ್ ಕಾಫಿ ಬ್ರಿಗೇಡ್ ನೊಂದಿಗೆ 'ವಿಂಗ್ಸ್ ಆಫ್ ವುಮೆನ್' ಎಂಬ ಉಪಕ್ರಮ ಯೋಜನೆಯನ್ನು ರೂಪಿಸಿದ್ದಾರೆ.

ಮಹಿಳಾ ದಿನಾಚರಣೆಗೆ 'ಗಿಫ್ಟ್' ಕೊಟ್ಟ ಮೋದಿ ಸರ್ಕಾರಮಹಿಳಾ ದಿನಾಚರಣೆಗೆ 'ಗಿಫ್ಟ್' ಕೊಟ್ಟ ಮೋದಿ ಸರ್ಕಾರ

ಈ ಉಪಕ್ರಮವು ಮಹಿಳೆಯರ ಸ್ವಾತಂತ್ರ್ಯ ಮತ್ತು ಮುಟ್ಟಿನ ಸಂದರ್ಭದಲ್ಲಿನ ನೈರ್ಮಲ್ಯತೆಯ ಕುರಿತಾದಂತೆ ಜಾಗೃತಿ ಮೂಡಿಸುತ್ತದೆ. ಮಹಿಳೆಯರಿಗೆ ಶಿಕ್ಷಣ ನೀಡಿದರೆ ಸಾಲದು, ಸ್ಯಾನಿಟರಿ ನ್ಯಾಪಿಕಿನ್ ಕುರಿತಾದಂತೆಯೂ ಜಾಗೃತಿ ಮೂಡಿಸಬೇಕು.

ರಾಜ್ಯ ಸರ್ಕಾರದ ಜನಸ್ನೇಹಿ ನ್ಯಾಪ್ ಕಿನ್ 'ಶುಚಿ' ಯೋಜನೆರಾಜ್ಯ ಸರ್ಕಾರದ ಜನಸ್ನೇಹಿ ನ್ಯಾಪ್ ಕಿನ್ 'ಶುಚಿ' ಯೋಜನೆ

ಬಿಗ್ ಎಫ್.ಎಮ್ ರೇಡಿಯೋ ನೆಟ್ವರ್ಕ್ ಯಾವತ್ತೂ, ಸಮಾಜದಲ್ಲಿನ ಸಮಸ್ಯೆಗಳ ಕುರಿತಾದಂತೆ ಅಧ್ಯಯನ ನಡೆಸಿ ಅದಕ್ಕೆ ಬೇಕಾದ ಉಪಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದೆ. ಇದೀಗ ಆರ್.ಜೆ ಶ್ರುತಿ ನೇತೃತ್ವದ ಬಿಗ್ ಎಫ್ ಎಮ್ ತಂಡವು ಸ್ಯಾನಟರಿ ನ್ಯಾಪ್ ಕಿನ್ ಗಳ ಕುರಿತಾದಂತೆ ಜಾಗೃತಿ ಮೂಡಿಸಲು ತಮ್ಮ ತಂಡದೊಂದಿಗೆ ರಾಜಾಜಿನಗರದ ಕಬಾಡಿ ಶಂಕರ್ಸ್ ಎಂಬ ಗಾರ್ಮೆಂಟ್ ಫ್ಯಾಕ್ಟರಿಗೆ ತೆರಳಿದ್ದು, ಅಲ್ಲಿನ ಪ್ರತಿಯೊಂದು ಯುವತಿಗೆ 45 ಸ್ಯಾನಿಟರಿ ನ್ಯಾಪ್ ಕಿನ್ ಗಳನ್ನು ವಿತರಿಸಲಾಯಿತು.

ವರ್ಷಪೂರ್ತಿ ಬಳಕೆಯಾಗುವ ನ್ಯಾಪ್ ಕಿನ್ ಗಳು

ವರ್ಷಪೂರ್ತಿ ಬಳಕೆಯಾಗುವ ನ್ಯಾಪ್ ಕಿನ್ ಗಳು

ಅಲ್ಲಿನ ಪ್ರತಿಯೊಂದು ಯುವತಿಗೆ 45 ಸ್ಯಾನಿಟರಿ ನ್ಯಾಪ್ ಕಿನ್ ಗಳನ್ನು ವಿತರಿಸಲಾಯಿತು. ಈ 45 ಸ್ಯಾನಿಟರಿ ನ್ಯಾಪ್ ಕಿನ್ ಗಳು ಒಬ್ಬರಿಗೆ ವರ್ಷಪೂರ್ತಿ ಬಳಕೆಯಾಗುತ್ತದೆ. ಬಿಗ್ ತಂಡದೊಂದಿಗೆ ಕನ್ನಡದ ಚಲನ ಚಿತ್ರರಂಗದಲ್ಲಿರುವ ವಿಜಯಲಕ್ಷ್ಮೀ ಸಿಂಗ್ ಮತ್ತು ಜೈಜಗದೀಶ್ ರವರ ಪುತ್ರಿಯರಾದ ವೈನಿಧಿ, ವೈಭವಿ ಹಾಗೂ ವೈಸಿರಿ ಕೂಡಾ ತಂಡದೊಂದಿಗೆ ಸೇರಿ ಸ್ಯಾನಿಟರಿ ನ್ಯಾಪ್ ಕಿನ್ ಗಳನ್ನು ವಿತರಣೆ ಮಾಡಿದರು.

ವಿದ್ಯಾರ್ಥಿಗಳಿಗೂ ಸ್ಯಾನಿಟರಿ ನ್ಯಾಪ್ ಕಿನ್

ವಿದ್ಯಾರ್ಥಿಗಳಿಗೂ ಸ್ಯಾನಿಟರಿ ನ್ಯಾಪ್ ಕಿನ್

ಆರ್.ಜೆ ಶ್ರುತಿ ತಮ್ಮ ತಂಡದೊಂದಿಗೆ ಮಲ್ಲೇಶ್ವರಂನ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ತೆರಳಿದ್ದು, ಅಲ್ಲಿನ ವಿದ್ಯಾರ್ಥಿನಿಯರಿಗೆ ಮಾತ್ರವಲ್ಲದೇ, ವಿದ್ಯಾರ್ಥಿಗಳಿಗೂ ಸ್ಯಾನಿಟರಿ ನ್ಯಾಪ್ ಕಿನ್ ಅನ್ನು ವಿತರಿಸಿ, ನಾನು ಈ ಕುರಿತು ಮಾತನಾಡುವುದಿಲ್ಲ ಎನ್ನುವಂತಹ ಸಂಪ್ರದಾಯವನ್ನು ಮುರಿಯಬೇಕು ಎಂದರು.

ಈ ಕಾರ್ಯಕ್ರಮದಲ್ಲಿ ಹಾಜರಿದ್ದ ಕನ್ನಡದ ಪ್ರಖ್ಯಾತ ನಟ ವಸಿಷ್ಟ ಸಿಂಹ, ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ತಮ್ಮ ಕುಟುಂಬಸ್ಥರೋರ್ವರನ್ನು ಕ್ಯಾನ್ಸರ್ ಕಾರಣದಿಂದ ಕಳೆದುಕೊಂಡ ದುಃಖಭರಿತ ಅನುಭವವನ್ನು ವಿವರಿಸಿದರು.

ಈ ಕುರಿತು ಮಾತನಾಡಿದ ನಟ ವಶಿಷ್ಟ ಸಿಂಹ

ಈ ಕುರಿತು ಮಾತನಾಡಿದ ನಟ ವಶಿಷ್ಟ ಸಿಂಹ

ಈ ಕುರಿತು ಮಾತನಾಡಿದ ನಟ ವಶಿಷ್ಟ ಸಿಂಹ, ನನಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾದ ಕುರಿತು ಬಹಳ ಸಂತೋಷವಿದೆ. ಮುಟ್ಟಿನ ನೈರ್ಮಲ್ಯತೆಯ ಕುರಿತಾದಂತೆ ಮಹಿಳೆಯರನ್ನು, ಯುವತಿಯರನ್ನು ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ.

ಈ ಕುರಿತು ಯಾವುದೇ ಅರಿವಿಲ್ಲದವರಿಗೆ ತಿಳಿಸಿ ಕೊಡುವುದು ನಮ್ಮ ಜವಾಬ್ದಾರಿಯಾಗಿದೆ. ಬಿಗ್ ಎಫ್.ಎಮ್ ಆಯೋಜಿಸಿದ ಈ ಕಾರ್ಯಕ್ರಮವು ನಿಜಕ್ಕೂ ಪ್ರಶಂಸಾರ್ಹವಾಗಿದ್ದು, ಇಂಥ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರೂ ಕೈಜೋಡಿಸಿ ಈ ದೇಶದಲ್ಲಿರುವ ಪ್ರತಿಯೊಂದು ಹೆಣ್ಣನ್ನು ರಕ್ಷಿಸಬೇಕು ಎಂದರು.

ಎಫ್ ಎಂನ ಆರ್.ಜೆ ಶ್ರುತಿ ಮಾತನಾಡಿ

ಎಫ್ ಎಂನ ಆರ್.ಜೆ ಶ್ರುತಿ ಮಾತನಾಡಿ

ಈ ಕಾರ್ಯಕ್ರಮವನ್ನು ಆಯೋಜಿಸಿದ ಬಿಗ್ ಎಫ್ ಎಂನ ಆರ್.ಜೆ ಶ್ರುತಿ ಮಾತನಾಡಿ, ಈ ಕಾರ್ಯಕ್ರಮವನ್ನು ನಾವು ಆಯೋಜಿಸಿದ್ದು, ನಮಗೆ ಬಹಳ ಸಂತೋಷವಾಗಿದೆ. ಸ್ಯಾನಿಟರಿ ನ್ಯಾಪ್ ಕಿನ್ ಕುರಿತು ವಿಶ್ವದೆಲ್ಲೆಡೆ ಚರ್ಚೆ ಮತ್ತು ಜಾಗೃತಿಗಳು ನಡೆಯುತ್ತಿದ್ದು, ಬೆಂಗಳೂರಿನಲ್ಲಿ ನಾವು ಆಯೋಜಿಸಿದ ಕಾರ್ಯಕ್ಕೆ ಉತ್ತಮ ಪ್ರತಿಕ್ರಿಯೆಗಳು ಲಭ್ಯವಾಗಿವೆ.

ಈ ಕುರಿತಾದಂತೆ ಪ್ರತಿಯೊಬ್ಬರೂ ಇಂಥ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗಬೇಕು. ಇದೇ ಕಾರ್ಯಕ್ರಮವನ್ನು ಮುಂದಿನ ವರ್ಷವೂ ಮಾಡಲಿದ್ದೇವೆ ಎಂದು ಹೇಳಿದರು.

English summary
With a burgeoning need on spreading awareness on leading a hygienic life, 92.7 BIG FM Bengaluru has taken an extremely noble initiative of sanitation for the backbone of each family, "Women"! BIG MJ Shruti of Big Coffee fame along with her team, The BIG Coffee Brigade, initiated a campaign called #WingsforWomen
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X