ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿರೀಕ್ಷಿಸಿ! ಉಪೇಂದ್ರ ಅವರ ಪಕ್ಷದ ಹೆಸರು, ಪ್ರಣಾಳಿಕೆ, ಇತ್ಯಾದಿ

By Mahesh
|
Google Oneindia Kannada News

ಬೆಂಗಳೂರು, ಅಕ್ಟೋಬರ್ 29: ಸಕ್ರಿಯ ರಾಜಕೀಯ ಪ್ರವೇಶಿಸಿರುವ ರಿಯಲ್ ಸ್ಟಾರ್ ಉಪೇಂದ್ರ ಅವರು ಅಕ್ಟೋಬರ್ 31ರಂದು ತಮ್ಮ ಹೊಸ ಪಕ್ಷದ ಹೆಸರು, ಪ್ರಣಾಳಿಕೆ ಮುಂತಾದ ವಿವರಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇಂದಿನ ವ್ಯವಸ್ಥೆ ಬದಲಾವಣೆಗೆ ಹೊಸಬರೇ ಬೇಕು, ಉಪೇಂದ್ರ ಸಂದರ್ಶನಇಂದಿನ ವ್ಯವಸ್ಥೆ ಬದಲಾವಣೆಗೆ ಹೊಸಬರೇ ಬೇಕು, ಉಪೇಂದ್ರ ಸಂದರ್ಶನ

ಆಗಸ್ಟ್ 14ರಂದು ಪಕ್ಷ ಸ್ಥಾಪನೆಯ ಘೋಷಣೆ ಮಾಡಿದ್ದರು. ಇದಕ್ಕೆ ಪ್ರಜಾಕೀಯ ಎಂಬ ಹೆಸರು ಇಡಲಾಗಿತ್ತು. ಈಗ ಈ ಬಗ್ಗೆ ಅಧಿಕೃತವಾಗಿ ಹೆಸರು ಘೋಷಣೆ ಮಾಡಲಿದ್ದಾರೆ.

Actor Upendra set to announce his party name and release manifesto on Oct 31

ಪ್ರಧಾನಿ ಮೋದಿ ಅವರು ವಿಷನ್ 2020ಯನ್ನು ಹೋಲುವ ಅಥವಾ ಅದಕ್ಕಿಂತ ನೂರು ಪಟ್ಟು ಉತ್ತಮವಾಗಿರುವ ಯೋಜನೆಗಳುಳ್ಳ ಉಪೇಂದ್ರ ಅವರ ವಿಷನ್ 2030 ಬಗ್ಗೆ ಪ್ರೇಕ್ಷಕರಿಗೆ ಈಗಾಗಲೇ ಸೂಪರ್ ಚಿತ್ರದ ಮೂಲಕ ಸಣ್ಣ ಝಲಕ್ ಸಿಕ್ಕಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಜಾಪ್ರಭುತ್ವ ಬಗ್ಗೆ ಉಪೇಂದ್ರ ಅಣಕು ಗೀತೆ ಪ್ರಜಾಪ್ರಭುತ್ವ ಬಗ್ಗೆ ಉಪೇಂದ್ರ ಅಣಕು ಗೀತೆ

ಪಕ್ಷದ ಹೆಸರು, ಚಿನ್ಹೆ, ಪ್ರಣಾಳಿಕೆ, ಧ್ಯೇಯೋದ್ದೇಶ ಕುರಿತಂತೆ ಕಳೆದ ಎರಡು ತಿಂಗಳಿನಲ್ಲಿ ವಿವಿಧ ಕ್ಷೇತ್ರಗಳ ಸಾಧಕರು, ಗಣ್ಯರೊಟ್ಟಿಗೆ ಉಪೇಂದ್ರ ಅವರು ಚರ್ಚಿಸಿ ತಮ್ಮ ರೂಪುರೇಷೆ ಸಿದ್ಧಪಡಿಸಿದ್ದಾರೆ. ಅಕ್ಟೋಬರ್ 31ರಂದು ಶಿವಾನಂದ ಸರ್ಕಲ್ ಬಳಿ ಇರುವ ಗಾಂಧಿಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ವಿವರಿಸಲಿದ್ದಾರೆ.

ಐಡಿಯಾ ಇರುವವರಿಗೆ ಮಾತ್ರ!ಐಡಿಯಾ ಇರುವವರಿಗೆ ಮಾತ್ರ!

ಕಾರ್ಮಿಕರ ಬಲವನ್ನು ಸೂಚಿಸಲು ಸಾಂಕೇತಿಕವಾಗಿ ಖಾಕಿ ಬಟ್ಟೆ ತೊಟ್ಟು ಪಕ್ಷದ ಬಗ್ಗೆ ಘೋಷಣೆ ಮಾಡಿದ್ದ ಉಪೇಂದ್ರ ಅವರು ಈಗ ಯಾವ ರೀತಿ ಕಾಣಿಸಿಕೊಳ್ಳಲಿದ್ದಾರೆ? ಏನೆಲ್ಲ ಅಂಶಗಳು ಪ್ರಣಾಳಿಕೆಯಲ್ಲಿರಬಹುದು? ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

English summary
Actor Upendra set to announce his party name and release manifesto on Oct 31. The director-turned-actor, who announced his party on August 14, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X