ನಿಮ್ಮ ಮನೆಯಲ್ಲೂ ಸಿಹಿಕಹಿ ಚಂದ್ರು "ಬೊಂಬಾಟ್ ಭೋಜನ"!

Subscribe to Oneindia Kannada

ಬೆಂಗಳೂರು, ಏಪ್ರಿಲ್, 04: ಸಿಹಿಕಹಿ ಚಂದ್ರು ಅಂದ ತಕ್ಷಣ ನಮ್ಮ ನೆನಪಿಗೆ ಬರುವುದು ಅವರ ಬಗೆ ಬಗೆಯ ಅಡುಗೆ. ಟಿವಿ ಕಾರ್ಯಕ್ರಮದಲ್ಲಿ, ಶುಚಿಯಾದ, ರುಚಿಯಾದ ಮತ್ತು ಶುದ್ಧವಾದ ಅಡುಗೆಯ ಮೂಲಕ ಮನೆ ಮನೆಗೆ ಘಮ ಹರಿಸಿದ ಅವರು ಇದೀಗ ನೇರವಾಗಿ ಆಹಾರೋದ್ಯಮ ಕ್ಷೇತ್ರಕ್ಕೆ ಧುಮುಕಿದ್ದಾರೆ. "ಬೊಂಬಾಟ್ ಭೋಜನ" ಹೆಸರಿನಲ್ಲಿಯೇ ಅನೇಕ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದಾರೆ.

ಚಮತ್ಕಾರ್ ಚಟ್ನಿ, ಕಯಾಮತ್ ಕರ್ರಿ ಪೌಡರ್, ಗಮ್ಮತ್ ಗೊಜ್ಜು ಪೌಡರ್, ಬೊಂಬಾಟ್ ಬೇಳೆಬಾತ್, ವಂಡರ್ ವಾಂಗಿಬಾತ್, ಪಾವನ ಪುಳಿಯೋಗರೆ ಹೀಗೆ ಹೆಸರಿನಲ್ಲೇ ಸವಿರುಚಿಯನ್ನು ಚಂದ್ರು ಬಡಿಸುತ್ತಿದ್ದಾರೆ.[ಅಪ್ಪೆಮಿಡಿ ಉಪ್ಪಿನಕಾಯಿ ಬೇಕಾ? ಭಟ್ಟರಿಗೆ ಫೋನ್ ಮಾಡಿ]

ಆಳವಾದ ಸಂಶೋಧನೆ, ಅನುಭವದೊಂದಿಗೆ ಅತ್ಯಂತ ಶುದ್ಧ ಮತ್ತು ಆರೋಗ್ಯವಂತ ವಾತಾವರಣದಲ್ಲಿ ಊಟ, ತಿಂಡಿಗೆ ಅಗತ್ಯವಾದಂತಹ ರಸಂ, ಸಾಂಬಾರ್ ಸಹಿತ ಹಲವಾರು ಬಗೆಯ ಆಹಾರೋತ್ಪನ್ನಗಳನ್ನು ತಯಾರಿಸಿ ಜನರ ನಾಲಿಗೆ ಚಪಲವನ್ನು ಕೇವಲ ಟಿವಿ ಪರದೆ ಮೂಲಕವಲ್ಲ, ನೇರವಾಗಿ ತಣಿಸುವ ಪ್ರಯತ್ನಕ್ಕೆ ಕೈಹಚ್ಚಿದ್ದಾರೆ.

ದೇಶದಲ್ಲೇ ಮೊದಲ ಬಾರಿಗೆ ಟೊಮೆಟೋ ಗ್ರೇ, ರಸಿಕ ರಸಂ, ಕೂಟು ಸಾಂಬಾರ್ ಮತ್ತು ಶಕ್ತಿದಾಯಕ ಆರೋಗ್ಯ ಮಿಕ್ಸ್‍ನಂತಹ ವಿಶಿಷ್ಟ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ 9901122615 ಸಂಪರ್ಕಿಸಬಹುದು.

ಗುಣಮಟ್ಟ ಗುರಿ

ಗುಣಮಟ್ಟ ಗುರಿ

ಅತ್ಯಂತ ಗುಣಮಟ್ಟದ ಮತ್ತು ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಆಹಾರ ಉತ್ಪನ್ನಗಳನ್ನು ಒದಗಿಸುವುದು ಸಂಸ್ಥೆಯ ಗುರಿ. ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಉತ್ಪನ್ನಗಳನ್ನು ಕೊಡುವುದು ಮತ್ತು ಅವರೊಂದಿಗೆ ದೀರ್ಘ ಕಾಲ ಸಂಬಂಧ ಬೆಸೆಯುವುದು ಸಂಸ್ಥೆಯ ಧ್ಯೇಯ. ಉದ್ಯಮದಲ್ಲಿ ದಕ್ಷತೆ, ಪ್ರಾಮಾಣಿಕತೆ, ಉದ್ಯಮದ ನೈತಿಕತೆಯನ್ನು ಪಾಲಿಸಿಕೊಂಡು ಬರಲಿದ್ದೇವೆ ಎಂದು ಚಂದ್ರು ಹೇಳಿದರು.

ಸಖತ್ ಸಾಂಬಾರ್ ಪೌಡರ್

ಸಖತ್ ಸಾಂಬಾರ್ ಪೌಡರ್

ಸಾಂಬಾರ್ ದಕ್ಷಿಣ ಭಾರತದ ವಿಶಿಷ್ಟ ಖಾದ್ಯ. ತರಕಾರಿಯನ್ನು ಹೆಚ್ಚಿ, ತೆಂಗಿನ ತುರಿಯನ್ನು ಅರೆದು, ಮಸಾಲೆಯನ್ನು ಬೆರೆಸಿ, ಹುಣಸೆ ಹುಳಿಯೊಂದಿಗೆ ಸೇರಿಸಿ ಮಾಡುವ ಈ ಸಾಂಬಾರ್ ಊಟಕ್ಕೊಂದು ವಿಶಿಷ್ಟ ರುಚಿಯನ್ನು ತಂದುಕೊಡುತ್ತದೆ. ಸಾಂಬಾರ್‍ನಲ್ಲೂ ಹಲವು ಬಗೆ ಇದೆ. ಸಖತ್ ಸಾಂಬಾರ್ ಪೌಡರ್ ಸಾಂಪ್ರದಾಯಿಕ ಮೈಸೂರು ಸಾಂಬಾರ್ ಪುಡಿಯಾಗಿದ್ದು, ಸಮತೂಕದಲ್ಲಿ, ಎಷ್ಟು ಬಗೆಯ ಸಾಂಬಾರ್ ಪದಾರ್ಥಗಳು ಬೇಕೋ, ಅಷ್ಟನ್ನು ಸೇರಿಸಿ ಸಿದ್ಧಪಡಿಸಿದಂತಹ ಸಾಂಬಾರ್ ಪುಡಿ ಇದು.

ರಂಗೀಲಾ ರಸಂ ಪೌಡರ್

ರಂಗೀಲಾ ರಸಂ ಪೌಡರ್

ಬೆಲ್ಲ, ಹುಣಿಸೆ ಹುಳಿ ಮತ್ತು ಟೊಮೆಟೊ ಬಳಸಿಕೊಂಡು ರಸಂ ಸಿದ್ಧಪಡಿಸಬಹುದು. ಮೈಸೂರು ರಸಂ ಅಂತೂ ಕರ್ನಾಟಕದಲ್ಲಿ ಖ್ಯಾತ. ಅದರ ಆಧಾರದಲ್ಲಿಯೇ ಇದನ್ನು ತಯಾರು ಮಾಡಲಾಗಿದೆ.ರಸಿಕಾ ರಸಂನಲ್ಲಿ ಬೆಳ್ಳುಳ್ಳಿಯದ್ದೇ ಕಾರುಬಾರು. ಸಮಾಜದ ಎಲ್ಲ ವರ್ಗದವರು ಇಷ್ಟಪಡುವಂತಹ ರಸಂ ಇದು. ಟೋಮೆಟೋ ಗ್ರೆ ಇದೊಂದು ಬಹು ಉದ್ದೇಶಿತ ಪೇಸ್ಟ್ ಆಗಿದ್ದು, ಇಡ್ಲಿ, ದೋಸೆ ಅಥವಾ ಚಪಾತಿ ಜತೆಗೆ ಚಟ್ನಿಯಂತೆ ಇದನ್ನು ಸೇವಿಸಬಹುದು. ಇದನ್ನು ರಸಂ ತಯಾರಿಸಲೂ ಬಳಸಬಹುದು.

ಇನ್ನಷ್ಟು ಉತ್ಪನ್ನಗಳು

ಇನ್ನಷ್ಟು ಉತ್ಪನ್ನಗಳು

ಪವರ್ ಹೆಲ್ತ್ ಮಿಕ್ಸ್, ಬಲಿಷ್ಠ ಬಾದಾಮ್ ಸಹ ಮಾರುಕಟ್ಟೆಗೆ ಬಂದಿದೆ. ವಿವಿಧ ಕರಿಗಳು ಜತೆಗೆ ಕಯಾಮತ್ ಕರ್ರಿ ಪೌಡರ್ , ಗಮ್ಮತ್ ಗೊಜ್ಜು ಪೌಡರ್, ತಂಬುಲಂ , ಬೊಂಬಾಟ್ ಬೇಳೆಬಾತ್, ವಂಡರ್ ವಾಂಗಿಬಾತ್ ಮಾರುಕಟ್ಟೆಗೆ ಕಾಲಿಡಲಿದೆ ಎಂದು ಚಂದ್ರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Famous Kannada actor and TV Chef Sihikahi Chandru enters Canned and Packaged food market. Puliyogare Powder, Wonder Vangibhaat, Tomato Grey, Rasika Rasam, Sakhat Sambar Powder, among dozens of items.
Please Wait while comments are loading...