ಜಯನಗರದಲ್ಲಿ ಅನುಮತಿ ಇಲ್ಲದೆ ಮರಕಡಿದ ಬಿಬಿಎಂಪಿ: ಹೆಬ್ಳೀಕರ್ ಕಿಡಿ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 8: ಜಯನಗರದಲ್ಲಿ ಭಾನುವಾರ (ಆಗಸ್ಟ್ 6) ಯಾವುದೇ ಅನುಮತಿಯನ್ನು ಪಡೆಯದೇ, ಅಲ್ಲಿನ ನಾಗರಿಕರಿಗೂ ಈ ಬಗ್ಗೆ ತಿಳಿಸದೇ ಎರಡು ಬೃಹತ್ ಮರಗಳನ್ನು ಏಕಾಏಕಿಯಾಗಿ ಕತ್ತರಿಸಿದ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ವಿರುದ್ಧ ಹಿರಿಯ ನಟ ಹಾಗೂ ನಿಸರ್ಗ ಪ್ರೇಮಿ ಸುರೇಶ್ ಹೆಬ್ಳೀಕರ್ ಕಿಡಿಕಾರಿದ್ದಾರೆ.

ಮುಂಬೈ,: ತೆಂಗಿನ ಮರ ಬಿದ್ದು ಮಾಜಿ ವಾರ್ತಾ ನಿರೂಪಕಿ ಸಾವು!

ಜಯನಗರದ 4ನೇ ಟಿ ಬ್ಲಾಕ್ ನ 36ನೇ ಕ್ರಾಸ್ ನಲ್ಲಿ ಎಸ್ಎಸ್ಎಂವಿಆರ್ ಕಾಲೇಜಿನ ಹತ್ತಿರದಲ್ಲಿ ಯಾವುದೇ ಸಕಾರಣವಿಲ್ಲದೆ, ಬಿಬಿಎಂಪಿಯು ಎರಡು ಮರಗಳನ್ನು ಕತ್ತರಿಸಿದ್ದಾರೆ ನಾಗರಿಕರು ಆರೋಪಿಸಿದ್ದರು. ಇದು ಕೆಲವಾರು ಮಾಧ್ಯಮಗಳಲ್ಲಿಯೂ ಪ್ರತಿಧ್ವನಿಗೊಂಡಿದೆ.

Actor Suresh Heblikar lashes out against BBMP for cutting down two trees in Bengaluru without permission
BBMP new rules | Pay fees before doing programs in the open fields

ಈ ಹಿನ್ನೆಲೆಯಲ್ಲಿ ಬಿಬಿಎಂಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಸುರೇಶ್ ಹೆಬ್ಳೀಕರ್, ''ಯಾವುದೇ ಸಕಾರಣವಿಲ್ಲದೆ ಬಿಬಿಎಂಪಿಯು ಹೀಗೆ ಮರಗಳನ್ನು ಕತ್ತರಿಸುವುದು ನಾಚಿಗೆಗೇಡಿನ ವಿಚಾರ. ಮರಗಳು ಕೇವಲ ಮರಗಳಲ್ಲ. ಅವು ನಮ್ಮ ಪರಿಸರದ ಅವಿಭಾಜ್ಯ ಅಂಗಗಳು. ಇದು ಏಕೆ ಬಿಬಿಎಂಪಿಗೆ ಅರ್ಥವಾಗುವುದಿಲ್ಲ'' ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Veteran actor, environmentalist Suresh Heblikar lashed out against Bruhat Bengaluru Mahanagara Palike (BBMP), for cutting two healthy trees in Jayanagar (Bengaluru) 4th 'T' block without permission.
Please Wait while comments are loading...