ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್ಟ್ ಆಫ್ ಗೀವಿಂಗ್: ನಟ ರಾಘಣ್ಣ ನೀಡಿದ್ದೇನು?

By Mahesh
|
Google Oneindia Kannada News

ಬೆಂಗಳೂರು, ಮೇ 17: ಆರ್ಟ್ ಆಫ್ ಗೀವಿಂಗ್ 2ನೇ ವಾರ್ಷಿಕೋತ್ಸವದಲ್ಲಿಪಾಲ್ಗೊಂಡಿದ್ದ ನಟ ರಾಘವೇಂದ್ರ ರಾಜ್ ಕುಮಾರ್ ಅವರು ಐದು ಲಕ್ಷ ಬೇವಿನ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆ ಮಾಡುವ ಸಂಕಲ್ಪ ತೊಟ್ಟಿದ್ದಾರೆ. ಬೇವಿನ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಕೆಲವೇ ವರ್ಷಗಳಲ್ಲಿ ಐದು ಲಕ್ಷ ಬೇವಿನ ಸಸಿಗಳನ್ನು ನೆಡಲಾಗುವುದು ಎಂದರು.

ಅಭಿಮಾನಿಗಳಲ್ಲೂ ಕೂಡ ಸಮಾಜಸೇವಾ ಮನೋಭಾವವನ್ನು ರೂಪಿಸಬೇಕು, ಅವರನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು, ಕೊಡುವ ಗುಣ ಕೇವಲ ಮಾತಿಗೆ ಸೀಮಿತವಾಗದೆ ಕೃತಿಗಿಳಿಯಬೇಕು ಎಂದರು.

ಸಮಾಜಮುಖಿ ರಾಘಣ್ಣ: ಅಘೋರಿ ಸ್ವಾಮೀಜಿಯೊಬ್ಬರು ಆಶೀರ್ವಾದ ನೀಡಿದ ನಂತರ ತಮ್ಮ ಮನಸ್ಸಿನಲ್ಲಿ ಪರಿವರ್ತನೆಯಾಗಿದ್ದು, ಸಮಾಜಮುಖಿ ಸೇವೆ ಮಾಡಲು ಮುಂದಾಗಿರುವುದಾಗಿ ತಿಳಿಸಿದರು. ಸ್ವಾಮೀಜಿಯವರ ಆಶೀರ್ವಾದದ ನಂತರ ತಮ್ಮ ಆರೋಗ್ಯದಲ್ಲಿ ಸುಧಾರಣೆಯಾಗಿದೆ ಎಂದು ಹೇಳಿದರು.

Actor Raghavendra Rajkumar

ಶಾಸಕ ಬಿ.ಎನ್.ವಿಜಯ್‌ಕುಮಾರ್ : ಕೊಡುವುದರಿಂದ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಕಳಿಂಗ ವಿಶ್ವವಿದ್ಯಾಲಯ ಯಾವುದೇ ಪ್ರಚಾರವಿಲ್ಲದೆ ದೇಶಕ್ಕೆ ಮಾದರಿಯಾಗುವ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮದ ಅಧ್ಯಕ್ಷ ಹಾಗೂ ಡಿಜಿಪಿ ಸುಶಾಂತ್ ಮಹಾಪಾತ್ರ: ಶಿಕ್ಷಣ ಕ್ಷೇತ್ರ ಹಾಗೂ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡುವಂತವರಿಗೆ ಪ್ರೋತ್ಸಾಹ ನೀಡಬೇಕೆ ಹೊರತು ಕಾಲೆಳೆಯಬಾರದು. ಸಮಾಜಸೇವೆ ಮಾಡುವವರಿಂದ ಮೌನಕ್ರಾಂತಿ ಯಾಗುತ್ತಿದೆ

ಯಾರು ಯಾರು ಬಂದಿದ್ದರು: ಕಾರ್ಯಕ್ರಮದಲ್ಲಿ ಮಣಿಪಾಲ್ ಫೌಂಡೇಷನ್ ಕಾರ್ಯನಿರ್ವಾಹಕ ಅಧಿಕಾರಿ ಪಿ.ಬಾಲಚಂದ್ರನ್ ವಾರಿಯರ್, ಶೇಷಾದ್ರಿಪುರಂ ಶಿಕ್ಷಣ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಡಾ.ವೂಡೆ.ಪಿ.ಕೃಷ್ಣ, ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಮುಂತಾದ ಗಣ್ಯರು ಆಗಮಿಸಿದ್ದರು.

ಆರ್ಟ್ ಆಫ್ ಗೀವಿಂಗ್ : ಕಳಿಂಗ ವಿಶ್ವವಿದ್ಯಾಲಯದ ಸ್ಥಾಪಕ ಅಚ್ಯುತ ಸಮಂತಾ ಅವರ ಪರಿಕಲ್ಪನೆಯಲ್ಲಿ ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ನೀಡುವ ಕಾರ್ಯ ಸತತವಾಗಿ ನಡೆಸಿಕೊಂಡು ಬರಲಾಗಿದೆ. ಸಮರ್ಪಣಾ ಕಲೆ ಮಾನವ ಜೀವನದಲ್ಲಿ ಅನನ್ಯ ಅನುಭೂತಿ ನೀಡುವ ಕ್ರಿಯೆ. ತಮ್ಮಲ್ಲಿ ಇರುವುದನ್ನು ಇಲ್ಲದವರಿಗೆ ನೀಡುವುದನ್ನೇ ಸಮರ್ಪಣೆ ಎನ್ನಬಹುದು. 1992-93ರಲ್ಲಿ ಆರಂಭವಾದ ಕಳಿಂಗ ವಿಶ್ವವಿದ್ಯಾಲಯದಲ್ಲಿ ಈಗ ಸುಮಾರು 50 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ.

ಮೇ.17ರಂದು ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದ ವಿಡಿಯೋಗಳು

ಕಾರ್ಯಕ್ರಮದ ವಿಡಿಯೋ

ಚಿತ್ರ ಹಾಗೂ ವಿಡಿಯೋ ಕೃಪೆ: ರಿಷಿ ಶರ್ಮ

(ಒನ್ ಇಂಡಿಯಾ ಸುದ್ದಿ)

English summary
Actor Raghavendra Rajkumar pledges to save Environment Art of Giving 2nd Anniversary held at Sheshadripuram college on May.17. Art of Giving is an initiative started by Kalinga University founder Achyuta Samantha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X