ಕಾವೇರಿ ಇಲ್ಲಿ ಹುಟ್ಟಿರೋದು, ನಮ್ಗೆ ಸೇರ್ಬೇಕು: ಹುಚ್ಚ ವೆಂಕಟ್

Posted By:
Subscribe to Oneindia Kannada

ಬೆಂಗಳೂರು, ಸೆ. 21: ಕಾವೇರಿ ನದಿ ನೀರು ಹಂಚಿಕೆ ವಿವಾದ ಬಗ್ಗೆ ನಟ, ನಿರ್ದೇಶಕ ಹುಚ್ಚ ವೆಂಕಟ್ ಅವರು ಇತ್ತೀಚೆಗೆ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಜತೆಗೆ ಕಾವೇರಿ ನೀರಿಗಾಗಿ ಕಿತ್ತಾಡುವುದನ್ನು ಬಿಡಬೇಕು ಎಂದು ಕಿವಿ ಮಾತು ಹೇಳಿದ್ದಾರೆ.

ಕಾವೇರಿ ವಿವಾದ ಬಗ್ಗೆ ನಾನು ಹೇಳೋದು ಕೇಳಿ, ಕಾವೇರಿ ನೀರು ಕರ್ನಾಟಕದಲ್ಲಿ ಹುಟ್ಟಿರೋದು ನಮ್ಗೆ ಫಸ್ಟ್ ಸೇರ್ಬೇಕು. ಇರೋ ನೀರು ಕೊಟ್ಟಿದ್ದೇವೆ ಇಲ್ಲದೆ ಇರೋ ನೀರು ಎಲ್ಲಿ ಕೊಡೋದು.[ಪೊರ್ಕಿ ಹುಚ್ಚ ವೆಂಕ್ಟನ ಕಾವೇರಿ... ಐ ಮಿಸ್ ಹರ್ ಸಾಂಗ್]

ನಮ್ಮ ತಂದೆ ತಾಯಿಗೆ ಉಪವಾಸ ಇಟ್ಟಿ, ಪಕ್ಕದ ಮನೆ ತಂದೆ ತಾಯಿಗೆ ಊಟ ಹಾಕುವುದು ಎಷ್ಟು ಸರಿ? ಫಸ್ಟ್ ನಮ್ಮನೆ ಮುಖ್ಯ ಅಲ್ವ! [ನೀರಿನ ಸಮಸ್ಯೆಗೆ 'ದಿವ್ಯ' ಉಪಾಯ ನೀಡಿದ ರಮ್ಯಾ]

Huccha Venkat on How to Solve Cauvery Issue

ಅಲ್ಲಿರುವ ರೈತರನ್ನು ಉಳಿಸಲು ನಮ್ಮ ರೈತರನ್ನು ಸಾಯಿಸುವುದು ಎಷ್ಟು ಸರಿ. ಅಲ್ಲಿರುವವರು ಯಾವತ್ತು ಪ್ರೀತಿಯಿಂದ ಕೇಳ್ಬೇಕು. ಪ್ರೀತಿಯಿಂದ ಕೇಳಿದರೆ ಕಾವೇರಿ ನೀರು ಏನು ಬಿಸ್ಲೇರಿ ನೀರೇ ಕೊಡುತ್ತೇವೆ. ಅಧಿಕಾರದಿಂದ ಕೇಳ್ಬಾರ್ದು. [ಯಾರೀ ಹುಚ್ಚ ವೆಂಕಟ್?]

ಮತ್ತೆ ಇಲ್ಲಿ ಕರ್ನಾಟಕದವರಿಗೆ ಕೇಳುವುದು ಇಷ್ಟೇ ದಯವಿಟ್ಟು ಕಾವೇರಿ ವಿಷಯವಾಗಿ ತಮಿಳುನಾಡಿನ ಜತೆ ಅಥವಾ ಇಲ್ಲಿರುವ ತಮಿಳರ ಜತೆ ಜಗಳ ಆಡಬಾರದು. ನೀವು ಜಗಳ ಆಡಬೇಕಾದರೆ ಅದು ತಮಿಳು ನಾಡು ಸರ್ಕಾರದ ವಿರುದ್ಧ ಆಡ್ಬೇಕು.

ದಯವಿಟ್ಟು ಹೇಳ್ತೀನಿ, ಕಾವೇರಿ ನಮ್ಮ ನೀರು, ಎಷ್ಟು ಗಲಾಟೆ, ಎಷ್ಟು ಹಾನಿ, ಎಷ್ಟು ಹಾನಿ, ಕಾವೇರಿ ನೀರು ಬಿಡೋಕೆ ಶುರು ಮಾಡಿದ ಮೇಲೆ ಮಳೆ ಶುರುವಾಗಿದೆ. ದೇವರು ನಮ್ಮ ಪರ ಇದಾನೆ. ಹಿಂಸೆಯಿಂದ ಏನು ಸಾಧ್ಯವಿಲ್ಲ ಎಂದು ವೆಂಕಟ್ ಅವರು ತಿಕ್ಲ ಸಿನಿಮಾ ಪ್ರೆಸ್ ಮೀಟ್ ನಲ್ಲಿ ಹೇಳಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Actor and Director Huccha Venkat speaks about How can one solve Cauvery Issue. Violence is not the solution to any problem he said during the Tikla Film launch press meet in Bengaluru
Please Wait while comments are loading...