ನಲಪಾಡ್ ಪ್ರಕರಣ: ಎತ್ತಂಗಡಿ ಆಗಿದ್ದ ಅಧಿಕಾರಿ ಅದೇ ಹುದ್ದೆಗೆ ವಾಪಾಸ್

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 12: ಮೊಹಮ್ಮದ್ ನಲಪಾಡ್ ಪ್ರಕರಣದಲ್ಲಿ ಎತ್ತಂಗಡಿ ಆಗಿದ್ದ ಕಬ್ಬನ್ ಪಾರ್ಕ್ ಎಸಿಪಿಗೆ ಮತ್ತೆ ಅದೇ ಕಬ್ಬನ್ ಪಾರ್ಕ್‌ನಲ್ಲಿ ಪೋಸ್ಟಿಂಗ್ ದೊರೆತಿದೆ.

ಎಸಿಪಿ ಮಂಜುನಾಥ್ ತಳವಾರ ಅವರು ನಲಪಾಡ್ ಪರವಾಗಿ ವರ್ತಿಸಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಕರ್ತವ್ಯ ಲೋಪದಡಿ ಬೇರೆಡೆಗೆ ವರ್ಗಾಯಿಸಲಾಗಿತ್ತು ಆದರೆ ಅವರನ್ನು ಈಗ ಮತ್ತೆ ಅದೇ ಠಾಣೆಯಲ್ಲಿ ಪೋಸ್ಟಿಂಗ್ ನಿಡಲಾಗಿದೆ.

ವಿದ್ವತ್ ಮೇಲೆ ಹಲ್ಲೆ : ಮೊಹ್ಮಮದ್ ನಲಪಾಡ್ ಹೇಳಿದ ಘಟನೆಯ ವಿವರ

ಆ ಸಮಯದಲ್ಲಿ ಕರ್ತವ್ಯ ಲೋಪದಡಿ ಎಸಿಪಿ ಮಂಜುನಾಥ ತಳವಾರ ಅವರನ್ನು ವರ್ಗಾಯಿಸಲಾಗಿತ್ತು ಹಾಗೂ ಠಾಣೆ ಇನ್ಸ್‌ಪೆಕ್ಟರ್ ವಿಜಯ ಹಡಗಲಿ ಅವರನ್ನು ಅಮಾನತು ಮಾಡಲಾಗಿತ್ತು.

ACP Manjunath return to Kabban park police station

ಮೊಹಮ್ಮದ್ ನಲಪಾಡ್ ಮೇಲೆ ಎಫ್‌ಐಆರ್‌ ಹಾಕದಂತೆ ಮಂಜುನಾಥ ಅವರು ಒತ್ತಡ ಹಾಕಿದ್ದರು ಎಂಬ ಆರೋಪದ ಮೇಲೆ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ ಈಗ ಮತ್ತೆ ಅವರನ್ನು ಅದೇ ಠಾಣೆಗೆ ಮತ್ತು ಅದೇ ಸ್ಥಾನಕ್ಕೆ ಪೊಸ್ಟಿಂಗ್ ಮಾಡಲಾಗಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಹ್ಯಾರಿಸ್ ಅವರ ಆಪ್ತ ಎಂದೂ ಹೇಳಲಾಗಿರು ಮಂಜುನಾಥ್ ಅವರಿಗೆ ಅದೇ ಪೋಸ್ಟಿಂಗ್ ಮತ್ತೆ ದೊರಕುವಲ್ಲಿ ಹ್ಯಾರಿಸ್ ಅವರ ಕೈವಾಡ ಇದೆ ಎನ್ನಲಾಗಿದೆ. ಪ್ರಕರಣ ಇನ್ನೂ ತಣ್ಣಗಾಗುವ ಮೊದಲೇ ಮಂಜುನಾಥ ಅವರನ್ನು ಅದೇ ಸ್ಥಳಕ್ಕೆ ಜಾಕಿರುವುದರ ಹಿಂದೆ ರಾಜಕೀಯ ಕೈವಾಡದ ಶಂಕೆ ವ್ಯಕ್ತವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
ACP Manjunath Talagvar returned to Kabban Park police station. Department transfered him from Kabban Park police station because of Mohammad Nalapad case. alleged that NA Harris is behind this re posting of Manjunath.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ