ನಮೋ ಟೆಲ್ -99 ರು ಗಳಿಗೆ ಕೊಳ್ಳಿ ಸ್ಮಾರ್ಟ್ ಫೋನ್

Posted By:
Subscribe to Oneindia Kannada

ಬೆಂಗಳೂರು, ಮೇ 18: 'ನಮೋಟೆಲ್' ಎಂಬ ಸಂಸ್ಥೆಯೊಂದು ಕೇವಲ 99 ರುಗಳಿಗೆ ಸ್ಮಾರ್ಟ್‌ಫೋನ್ ನೀಡುವುದಾಗಿ ಪ್ರಕಟಿಸಿದೆ.ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಕಂಪನಿಯ 251 ರುಗಳ ಫೋನ್ ಕತೆ ನಂತರ ಈ ಹೊಸ ಕಂಪನಿ ಘೋಷಣೆ ಹಲವರ ಹುಬ್ಬೇರಿಸಿದೆ.

ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಮೋಟೆಲ್‌ನ ವ್ಯವಸ್ಥಾಪಕ ಮಾಧವರೆಡ್ಡಿ, ನಮ್ಮ ಕಂಪನಿ ಬಿಮೈಬ್ಯಾಂಕರ್ ಡಾಟ್ ಕಾಂನೊಂದಿಗೆ ಸಹಭಾಗಿತ್ವ ಹೊಂದಿದೆ. ಮೊಬೈಲ್ ಖರೀದಿಸಲು ಬಯಸುವ ಗ್ರಾಹಕರು ಮೊದಲಿಗೆ ಬಿಮೈಬ್ಯಾಂಕರ್ ಡಾಟ್ ಕಾಂನಲ್ಲಿ ಲಾಗಿನ್ ಆಗಿ 199 ರೂ. ನೋಂದಣಿ ಶುಲ್ಕ ಪಾವತಿಸಬೇಕು.[ಭಾರತದ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ನೋಡಿ]

'Achhe Dhin' by Namotel, world’s cheapest smartphone launched for Rs 99/-

ಇದರ ಜತೆಗೆ ಭಾವಚಿತ್ರ ಮತ್ತು ಆಧಾರ್ ಕಾರ್ಡ್‌ನ್ನು ಅಪ್‌ಲೋಡ್ ಮಾಡಬೇಕು. ಹೀಗೆ ಬಿಮೈಬ್ಯಾಂಕರ್‌ನಲ್ಲಿ ಸದಸ್ಯತ್ವ ಪಡೆದ ನಂತರ ನಾಮ್‌ಟೆಲ್‌ನ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಸಿಗುತ್ತದೆ. ಆಮೇಲೆ 99 ರು ಪಾವತಿಸಿ ಬುಕ್ ಮಾಡಿದರೆ 45 ದಿನಕ್ಕೆ ಮೊಬೈಲ್‌ ನಿಮ್ಮ ಕೈ ಸೇರಲಿದೆ ಎಂದರು.

ಗ್ಯಾರಂಟಿ ವ್ಯವಹಾರ: ನಾನು ರೈತ ಕುಟುಂಬದಿಂದ ಬಂದವನು. ಹಲವಾರು ಖಾಸಗಿ ಬ್ಯಾಂಕ್‌ಗಳಲ್ಲಿ ಕಾರ್ಯ ನಿರ್ವಹಿಸಿ, ಜನರಿಗೆ ಏನಾದರೂ ಒಳ್ಳೆಯದ್ದು ಮಾಡಬೇಕು ಎಂಬ ಆಶಯದಿಂದ ಈ ಯೋಜನೆಗೆ ಕೈ ಹಾಕಿದ್ದೇನೆ. ಅಗ್ಗದ ದರಕ್ಕೆ ಉತ್ತಮ ಮೊಬೈಲ್ ನೀಡಲು ಮುಂದಾಗಿದ್ದೇನೆ ಎಂದು Chequecut technologies Pvt Ltd(ನಮೋಟೆಲ್) ನ ಪರವಾಗಿ ಮಾಧವರೆಡ್ಡಿ ಹೇಳಿದರು.

ನಮೋಟೆಲ್ ಅಚ್ಛೆ ದಿನ್ ಮೊಬೈಲ್ ಫೋನ್ ನಲ್ಲಿ ಏನಿದೆ:
* 4 ಇಂಚು ಉದ್ದ
* 5.1 ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಮ್‌
* ವಿಜಿಎ ಫ್ರಂಟ್ ಕ್ಯಾಮೆರಾ,
* 2 ಮೆಗಾ ಫಿಕ್ಸೆಲ್‌ ಕ್ಯಾಮೆರಾ
* 1 ಜಿಬಿ RAM,
* 4ಜಿಬಿ ಸ್ಟೋರೆಜ್ ಸಾಮರ್ಥ್ಯ, 32 ಜಿಬಿ ತನಕ ವಿಸ್ತರಿಸಬಹುದು.
* ಡಬಲ್‌ ಸಿಮ್‌ಗಳನ್ನು ಉಪಯೋಗಿಸಬಹುದು

ಪ್ರೀ ಲೋಡೆಡ್ ಅಪ್ಲಿಕೇಷನ್

* ಸ್ವಚ್ಛ ಭಾರತ್, ಡಿಜಿಟಲ್ ಇಂಡಿಯಾ ಅಪ್ಲಿಕೇಷನ್ ಗಳು, ಟ್ರಾಯ್ ಸೂಚಿಸಿರುವ ಪ್ಯಾನಿಕ್ ಬಟನ್ ಗಳು ಇದರಲ್ಲಿದೆ.
* ಸ್ಕಿಲ್ ಇಂಡಿಯಾ ಮೂಲಕ ಸಾವಿರಾರು ಮಂದಿಗೆ ಉದ್ಯೋಗ ನೀಡಲು ನಿರ್ಧರಿಸಲಾಗಿದೆ. ಡಿಜಿಟಲ್ ಇಂಡಿಯಾ ಮೂಲಕ ಎರಡನೇ ಹಾಗೂ ಮೂರನೇ ಸ್ತರದ ನಗರಗಳಲ್ಲಿ ಈ ಸ್ಮಾರ್ಟ್ ಫೋನ್ ಬಳಕೆ ಹೆಚ್ಚಳಕ್ಕೆ ಹೆಚ್ಚಿನ ಆಸ್ಪದ ನೀಡಲಾಗುತ್ತದೆ.
* ಸದ್ಯಕ್ಕೆ ಕರ್ನಾಟಕದಲ್ಲಿ ಮಾತ್ರ ಬುಕ್ಕಿಂಗ್ ಚಾಲನೆಯಲ್ಲಿದೆ.

-
-
ನಮೋಟೆಲ್ ಫೋನ್ ಗಾಗಿ ಆನ್ ಲೈನ್ ಬುಕ್ಕಿಂಗ್

ನಮೋಟೆಲ್ ಫೋನ್ ಗಾಗಿ ಆನ್ ಲೈನ್ ಬುಕ್ಕಿಂಗ್

-
-

ಆನ್ ಲೈನ್ ಬುಕ್ಕಿಂಗ್ ಮಾಡುವುದು ಹೇಗೆ?
ನಮೋಟೆಲ್ ನ ಅಚ್ಛೆದಿನ್, ಆಜಾದಿ ಸ್ಮಾರ್ಟ್ ಫೋನ್ ಪಡೆಯುವುದು ಹೇಗೆ?
* bemybanker.com ನಲ್ಲಿ ನೋಂದಾಯಿಸಿ, ಹೊಸ ಐಡಿ ಹಾಗೂ ಪಾಸ್ ವರ್ಡ್ ಪಡೆಯಿರಿ
* ನಂತರ ಲಾಗಿನ್ ಆಗಿ 199 ರು ಪಾವತಿಸಿ ಸದಸ್ಯರಾಗಿ, ಮೊಬೈಲ್ ನೋಂದಣಿ ಪುಟಕ್ಕೆ ಹೋಗಿ.
[ಫ್ರೀಡಂ 251 : ಸರ್ಕಾರದ ಸಬ್ಸಿಡಿ ಪಡೆದಿಲ್ಲ , ಸಂಸ್ಥೆ ಸ್ಪಷ್ಟನೆ]

* ಮೊಬೈಲ್ ಅಲ್ಲದೆ ಇತರೆ ಸೌಲಭ್ಯಗಳನ್ನು ಪಡೆಯಲು ಶಾಶ್ವತ ಸದಸ್ಯತ್ವ ಪಡೆದುಕೊಳ್ಳಬಹುದು.
* ಬಿಮೈಬ್ಯಾಂಕರ್ ಕೊಟ್ಟ ಐಡಿ ಬಳಸಿ ಮೋಬೈಲ್ ಗಾಗಿ ನೋಂದಾಯಿಸಿ ನಂತರ Namotel.com ಗೆ ಬನ್ನಿ

* ನಿಮ್ಮ ಇಮೇಲ್ ಐಡಿಗೆ ಪೇಮೆಂಟ್ ಕನ್ಫರ್ಮೇಷನ್ ಬಂದ ಮೇಲೆ ಬಿಎಂಬಿ ಐಡಿ ಹಾಕಿ ನೋಂದಯಿ ಪೂರ್ಣಗೊಳಿಸಿ
* ನಿಮ್ಮ ಭಾವ ಚಿತ್ರ, ಆಧಾರ್ ಕಾರ್ಡ್ ಮಾಹಿತಿ ನೀಡಿ, ನಿಮ್ಮ ಪೂರ್ಣ ವಿಳಾಸ ನೀಡಿ
* ಎಲ್ಲಾ ವಿವರಗಳು ನೀಡಿದ ಬಳಿಕ ನಿಮ್ಮ ಮೊಬೈಲ್ ನೋಂದಣಿಯಾದ ಬಗ್ಗೆ ಮಾಹಿತಿ ನಿಮ್ಮ ಇಮೇಲ್ ಗೆ ತಲುಪಲಿದೆ.

ನಮೋಟೆಲ್ ಪ್ರವರ್ತಕ ಮಾಧವ ರೆಡ್ಡಿ
ಆಕ್ಸಿಸ್, ಐಸಿಐಸಿಐ, ಎಚ್ ಡಿ ಎಫ್ ಸಿ, ಇಂಡಸ್ ಬ್ಯಾಂಕ್ ಗಳಲ್ಲಿ ವಿವಿಧಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರುವ ಮಾಧವ್ ರೆಡ್ಡಿ ಅವರು ಈಗ ಅಗ್ಗದ ಬೆಲೆಗೆ ಉತ್ತಮ ಸ್ಮಾರ್ಟ್ ಫೋನ್ ಹೊರ ತಂದಿದ್ದಾರೆ. Bemybanker.com ಹಾಗೂ Namotel.com ಮೂಲಕ ಸ್ಮಾರ್ಟ್ ಫೋನ್ ಹಾಗೂ ಇನ್ನಿತರ ಆರ್ಥಿಕ ಉತ್ಪನ್ನಗಳನ್ನು ಜನರ ಮುಂದಿಟ್ಟಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Touted as India’s most affordable smartphone, the Achhe Dhin is priced at just Rs 99. The smartphone will be available for booking starting From 17th May 2016 Via namotel.com The booking window will only remain open till May 25th 2016. It may extend based on the demand.
Please Wait while comments are loading...