ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿ, ಅಮಿತ್ ಶಾ, ಹೆಗಡೆ ಹಿಂದೂ ಅಲ್ಲ: ನಟ ಪ್ರಕಾಶ್ ರೈ

|
Google Oneindia Kannada News

Recommended Video

ಮೋದಿ, ಅಮಿತ್ ಶಾ, ಹೆಗಡೆ ಹಿಂದೂ ಅಲ್ಲ: ನಟ ಪ್ರಕಾಶ್ ರೈ | Oneindia Kannada

"ಅವರು ಹೇಳ್ತಾರೆ: ನಾನು ಹಿಂದೂ ವಿರೋಧಿ ಅಂತ. ಇಲ್ಲ. ನಾನು ಮೋದಿ ವಿರೋಧಿ, ನಾನು ಹೆಗಡೆ ವಿರೋಧಿ, ನಾನು ಅಮಿತ್ ಶಾ ವಿರೋಧಿ. ಮತ್ತು ನನ್ನ ಪ್ರಕಾರ ಅವರು ಹಿಂದೂಗಳಲ್ಲ".

-ಈ ಹೇಳಿಕೆ ಮೂಲಕ ಮತ್ತೊಂದು ಸುತ್ತಿನ ಬಿರುಗಾಳಿ ಎಬ್ಬಿಸಿದ್ದಾರೆ ನಟ ಪ್ರಕಾಶ್ ರೈ. ಬೆಂಗಳೂರಿನಲ್ಲಿ ಗುರುವಾರ ಇಂಡಿಯಾ ಟುಡೆ ದಕ್ಷಿಣ ಶೃಂಗಸಭೆಯಲ್ಲಿ ಮಾತನಾಡಿದ ಅವರು, 'ಸೆಕ್ಸಿ ದುರ್ಗಾ' ಎಂಬ ಹೆಸರಿನಲ್ಲಿ ಸಿನಿಮಾ ಮಾಡಿರುವ ನಿರ್ದೇಶಕ ಶಶಿಧರನ್ ಅವರನ್ನು ಬೆಂಬಲಿಸಿ ಮಾತನಾಡಿದರು.

ಸೈಟು, ರಾಜಕಾರಣಿಗಳೊಂದಿಗೆ ಫೈಟು : ಪ್ರಕಾಶ್ ರೈ ಸಂದರ್ಶನಸೈಟು, ರಾಜಕಾರಣಿಗಳೊಂದಿಗೆ ಫೈಟು : ಪ್ರಕಾಶ್ ರೈ ಸಂದರ್ಶನ

"ಈ ಸಿನಿಮಾ ಹಿಂದೂ ಧರ್ಮದ ಬಗ್ಗೆ ಅಲ್ಲ. ಹಿಂದುತ್ವದ ವಿರೋಧವಾಗಿಲ್ಲ. ಆದರೂ ಈ ಸಿನಿಮಾ ಹಿಂದೂ ಧರ್ಮದಕ್ಕೆ ಸಂಬಂಧಿಸಿದ್ದು ಎನ್ನುತ್ತಿದ್ದಾರೆ" ಎಂದು ಪ್ರಕಾಶ್ ರೈ ಹೇಳಿದರು.

ಇನ್ನು ಹಿಂದುತ್ವ ವಿರೋಧಿ ಹೇಳಿಕೆ ನೀಡಿದ ಕಾರಣಕ್ಕೆ ಕರ್ನಾಟಕ ಸರಕಾರ ಸೈಟ್ ನೀಡಿದೆಯಂತಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್ ರೈ, ನನ್ನ ಹತ್ತಿರ ಸಾಕಷ್ಟು ಹಣ- ಭೂಮಿ ಇದೆ. ನನಗೆ ಸರಕಾರದಿಂದ ಯಾವುದೇ ಭೂಮಿ ಬೇಡ ಎಂದಿದ್ದಾರೆ.

ಪ್ರಕಾಶ್ ರೈ ಮಾತಿಗೆ ಆಕ್ಷೇಪ

ಪ್ರಕಾಶ್ ರೈ ಮಾತಿಗೆ ಆಕ್ಷೇಪ

ಮೋದಿ, ಹೆಗಡೆ ಹಾಗೂ ಅಮಿತ್ ಶಾ ನನ್ನ ಪ್ರಕಾರ ಹಿಂದೂ ಅಲ್ಲ ಎಂಬ ಪ್ರಕಾಶ್ ರೈ ಮಾತಿಗೆ ವೀಕ್ಷಕರ ಪೈಕಿ ಇದ್ದ ಕೃಷ್ಣ ಸಾಗರ್ ರಾವ್ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಉತ್ತರಿಸಿದ ರೈ, ಕೊಲೆಯನ್ನು ಬೆಂಬಲಿಸುವ ವ್ಯಕ್ತಿ ಹಿಂದೂ ಆಗಿರಲು ಸಾಧ್ಯವಿಲ್ಲ ಎಂದರು.

ಹಿಂದೂ ಎಂದು ನಿರ್ಧರಿಸಲು ನೀವ್ಯಾರು?

ಹಿಂದೂ ಎಂದು ನಿರ್ಧರಿಸಲು ನೀವ್ಯಾರು?

ಯಾರು ಹಿಂದೂ ಎಂದು ನಿರ್ಧರಿಸುವುದಕ್ಕೆ ನೀವ್ಯಾರು ಎಂದು ಕೃಷ್ಣ ಸಾಗರ್ ಪ್ರಶ್ನಿಸಿದ್ದಕ್ಕೆ, ನಾನು ಹಿಂದೂ ವಿರೋಧಿ ಎಂದು ಅವರು ನಿರ್ಧರಿಸಬಹುದಾದರೆ, ನಾನೂ ಅವರಿಗೆ ಹೇಳಬಹುದು: ನೀವು ಹಿಂದೂ ಅಲ್ಲ ಎಂದರು ಪ್ರಕಾಶ್ ರೈ.

ಸಚಿವರನ್ನು ಪ್ರಶ್ನಿಸಬೇಕು

ಸಚಿವರನ್ನು ಪ್ರಶ್ನಿಸಬೇಕು

ಈ ಮಾತುಕತೆ ಸ್ವಲ್ಪ ಕಾಲ ಮುಂದುವರಿಯಿತು. ಈ ಮಧ್ಯೆ ಪ್ರಶ್ನೆ ಮುಂದಿಟ್ಟ ಪ್ರಕಾಶ್ ರೈ, "ತಮ್ಮ ಸಚಿವರನ್ನು ನಮ್ಮ ಪ್ರಧಾನಿ ಪ್ರಶ್ನಿಸಬೇಕು- ಜನರಿಂದ ಆಯ್ಕೆಯಾದ, ಸಂಪುಟದಲ್ಲಿ ಸಚಿವರಾದ ವ್ಯಕ್ತಿ ಒಂದು ಧರ್ಮವನ್ನು ಈ ಭೂಮಿಯಿಂದ ತೊಲಗಿಸಬೇಕು ಅಂತ ಮಾತನಾಡಬಾರದು. ಅದು ಹಿಂದೂ ಧರ್ಮ ಅಲ್ಲ".

ಸಚಿವರಿಗೆ ಬಾಯಿ ಮುಚ್ಚಿಕೊಂಡಿರಲು ಹೇಳಿ

ಸಚಿವರಿಗೆ ಬಾಯಿ ಮುಚ್ಚಿಕೊಂಡಿರಲು ಹೇಳಿ

"ಆಗಲೂ ತನ್ನ ಸಚಿವರಿಗೆ ಬಾಯಿ ಮುಚ್ಚಿಕೊಂಡಿರುವಂತೆ ಪ್ರಧಾನ ಮಂತ್ರಿ ಹೇಳದಿದ್ದರೆ ನಾನು ನಮ್ಮ ಪ್ರಧಾನಿಗಳನ್ನು ಕೇಳ್ತೀನಿ- ನೀವು ಕೂಡ ಹಿಂದೂ ಅಲ್ಲ" ಎಂದು ಪ್ರಕಾಶ್ ರೈ ಹೇಳಿದರು.

ಮತ ಹಾಕಿದರೂ ಹಾಕದಿದ್ದರೂ ಅವರೇ ನಮ್ಮ ಪ್ರಧಾನಿ

ಮತ ಹಾಕಿದರೂ ಹಾಕದಿದ್ದರೂ ಅವರೇ ನಮ್ಮ ಪ್ರಧಾನಿ

ನನ್ನದೊಂದು ಪ್ರಾಮಾಣಿಕ ಹಾಗೂ ನೇರ ಪ್ರಶ್ನೆ. ನಾನು ನಮ್ಮ ಪ್ರಧಾನಮಂತ್ರಿಗಳನ್ನು ಒಂದು ಪಕ್ಷಕ್ಕೆ ಸೇರಿದವರು ಅಂತ ನೋಡಲ್ಲ. ನಾನು ಅವರಿಗೆ ಮತ ಹಾಕಿದ್ದೇನೋ ಅಥವಾ ಹಾಕಿಲ್ಲವೋ ಆದರೂ ಅವರೇ ನಮ್ಮ ಪ್ರಧಾನಮಂತ್ರಿ. ಅವರನ್ನು ಪ್ರಶ್ನೆ ಮಾಡುವ ಎಲ್ಲ ಹಕ್ಕು ನನಗಿದೆ ಎಂದು ಪ್ರಕಾಶ್ ರೈ ಹೇಳಿದರು.

English summary
My Prime Minister should ask his minister – an elected, mandated minister – not to say that a religion should be wiped out from this earth. That is not Hinduism, sir. And if my Prime Minister does not ask this Minister to shut up, then I’m asking my Prime Minister – you’re also not a Hindu!” says actor Prakash Rai in India Today South conclave at Bengaluru on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X