ಕೃಂಬಿಗಲ್ ಹಾಲ್ ಪುನರ್ ನಿರ್ಮಾಣ ಕಾರ್ಯದಲ್ಲಿ ವಿಳಂಬ: ಸ್ಪಷ್ಟನೆ

Posted By: Nayana
Subscribe to Oneindia Kannada

ಬೆಂಗಳೂರು, ನವೆಂಬರ್ 25 : ಪುರಾತತ್ವ ಇಲಾಖೆ ಅಧಿಕಾರಿಗಳೊಂದಿಗೆ ನ.23ರಂದು ಸಮಾಲೋಚನೆ ನಡೆಸಿದ್ದು ಲಾಲ್ ಬಾಗ್ ನಲ್ಲಿರುವ ಕೃಂಬಿಗಲ್ ಹಾಲ್ ಪುನರ್ ನಿರ್ಮಾಣ ಕಾಮಗಾರಿಗೆ ಪರಿಷ್ಕೃತ ಯೋಜನೆಯನ್ನು ಎರಡು ವಾರದೊಳಗೆ ನೀಡುವಂತೆ ತಿಳಿಸಿರುವುದಾಗಿ ರಾಜ್ಯ ತೋಟಗಾರಿಕೆ ಇಲಾಖೆ ಆಯುಕ್ತರು ತಿಳಿಸಿದರು.

ಹೂವಿನ ತೋಟದಲ್ಲಿ ಕಳೆದುಹೋದ ಹೂವಿನಂಥ ಹುಡುಗಿ

ಲಾಲ್ ಬಾಗ್ ನಲ್ಲಿ ಇರುವ ಕೃಂಬಿಗಲ್ ಹಾಲ್ ನ್ನು ಕೆಡವಿ ತಿಂಗಳುಗಳೇ ಕಳೆದರು ನಿರ್ಮಾಣ ಕಾರ್ಯ ಪ್ರಾರಂಭವಾಗಿಲ್ಲ ಎಂಬ ಆಪಾದನೆ ಕೇಳಿ ಬಂದ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಸ್ಪಷ್ಟನೆ ನೀಡಿದ್ದಾರೆ. ಲಾಲ್ ಬಾಗ್ ನಲ್ಲಿರುವ ಕೃಂಬಿಗಲ್ ಹಾಲ್ ಒಂದು ಪುರಾತನ ಕಟ್ಟಡವಾಗಿದೆ. ಬಹಳ ವರ್ಷಗಳಿಂದ ಶಿಥಿಲಗೊಂಡಿದೆ.

According to expert report krumbigal hall demolished: Horticulture dept

ಈ ಕಟ್ಟಡ ನವೀಕರಣ ಮಾಡುವುದು ಯೋಗ್ಯವಲ್ಲ ಎಂದು ಸಿವಿಲ್ ಏಡ್ ಸಂಸ್ಥೆ ಹಾಗೂ ಲೋಕೋಪಯೋಗಿ ಇಲಾಖೆಯವರು ವರದಿ ನೀಡಿದ ಮೇರೆಗೆ ಈ ಹಾಲ್ ನ್ನು ಪುನರ್ ನಿರ್ಮಾಣ ಮಾಡಲು ಇಂಟ್ಯಾಕ್ ಸಂಸ್ಥೆಯಿಂದ ಅಂದಾಜು ಪಟ್ಟಿಯನ್ನು ಪಡೆದು, ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಕೆಲಸ ಆಗಿಲ್ಲ ಎಂದರು.

ಈ ಕಟ್ಟಡ ಶೇ.೮೦ರಷ್ಟು ಶಿಥಲೀಕರಣಗೊಂಡಿದ್ದು ಕಳೆದ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಬಿದ್ದ ಹೆಚ್ಚು ಮಳೆಯಿಂದಾಗಿ ಬಹುತೇಕ ಭಾಗ ಕುಸಿದಿದೆ. ಉಳಿದ ಭಾಗವು ಅಪಾಯದ ಸ್ಥಿಯಲ್ಲಿದ್ದುದರಿಂದ ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರರಿಗೆ ಇದರಿಂದ ಯಾವುದೇ ಅನಾಹುತ ಸಂಭವಿಸಬಾರದು ಎಂದು ಉಳಿದ ಭಾಗವನ್ನು ಕೀಳಿಸಲಾಗಿದೆ.

ಪುರಾತತ್ವ ಇಲಾಖೆಯ ಅಧಿಕಾರಿಗಳೊಡನೆ ಸಮಾಲೋಚಿಸಿದ್ದು ಸದರಿ ಕಟ್ಟಡ ಪುನರ್ ನಿರ್ಮಾಣ ಕಾಮಗಾರಿಗೆ ಪರಿಷ್ಕೃತ ಯೋಜನೆಯನ್ನು ಎರಡು ವಾರದೊಳಗೆ ನೀಡುವಂತೆ ತಿಳಿಸಲಾಗಿದೆ.. ಕೃಂಬಿಗಲ್ ಹಾಲ್ ಪುನರ್ ನಿರ್ಮಾಣ ಮಾಡಿ ಅದರಲ್ಲಿ ಸಂಶೋಧಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಲಾಲ್ ಬಾಗ್ ಸಸ್ಯತೋಟದ ಬಗ್ಗೆ ಹಾಗೂ ಕೃಂಬಿಗಲ್ ಅವರು ಮಾಡಿದ ಕೆಲಸಗಳ ಬಗ್ಗೆ ತಿಳಿವಳಿಕೆ ನೀಡಲು ಯೋಜಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಆಯುಕ್ತರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Department of Horticulture clarified that according to public works department and Civil Aide Organisation report Krumbigal Hall has been demolished.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ