ISI ಗುರುತಿನ ಹೆಲ್ಮೆಟ್ ಧರಿಸದಿದ್ದಲ್ಲಿ ವಿಮೆ ಹಣ ಸಿಗದು

Posted By:
Subscribe to Oneindia Kannada

ಬೆಂಗಳೂರು, ಜನವರಿ 10: ಐಎಸ್ಐ ಗುಣಮಟ್ಟದ ಹೆಲ್ಮೆಟ್ ವಿಚಾರದಲ್ಲಿ ಸರ್ಕರದ ನಿಯಮಕ್ಕೆ ಹೈಕೋರ್ಟ್ ಒಪ್ಪಿಗೆ ಮುದ್ರೆ ಒತ್ತಿದೆ, ಐಎಸ್ಐ ಮುದ್ರೆ ಹೊಂದಿರದ ಹೆಲ್ಮೆಟ್ ಧರಿಸಿ ಅಪಘಾತಕ್ಕೀಡಾದರೆ ವಿಮಾ ಹಣ ಪಾವತಿಸಬಾರದು ಎಂದು ಹೈಕೋರ್ಟ್ ತೀರ್ಪು ನೀಡಿದೆ.

ಓರಿಯಂಟಲ್‌ ವಿಮಾ ಕಂಪನಿ ಸಲ್ಲಿಸಿದ್ದ ಎಂಎಫ್‌ಎ (ಮಿಸಲೇನಿಯಸ್‌ ಫಸ್ಟ್‌ ಅಪೀಲ್) ಅರ್ಜಿ ಮೇಲಿನ ಕಾಯ್ದಿರಿಸಿದ್ದ ಮಹತ್ವದ ತೀರ್ಪನ್ನು ಏಕಸದಸ್ಯ ನ್ಯಾಯಪೀಠ ಪ್ರಕಟಿಸಿದೆ.

ಕಡ್ಡಾಯವಾಗಿ ISI ಗುರುತಿನ ಹೆಲ್ಮೆಟ್ ಧರಿಸುವಂತೆ ನಿಯಮ

ಕಾರು ಚಾಲಕರು ಸೀಟ್‌ ಬೆಲ್ಟ್‌ ಹಾಕದಿದ್ದರೆ, ದ್ವಿಚಕ್ರ ವಾಹನ ಸವಾರರು ಐಎಸ್‌ಐ ಮುದ್ರೆ ಇರುವ ಹೆಲ್ಮೆಟ್‌ ಧರಿಸದೇ ಅಪಘಾತಕ್ಕೀಡಾಗಿ ಜೀವ ಕಳೆದುಕೊಂಡರೆ ಅಥವಾ ಅಂಗ ಊನವಾದರೆ ವಿಮಾ ಕಂಪನಿ ವಿಮಾ ಹಣ ಪಾವತಿಸಬಾರದು' ಎಂದು ಹೈಕೋರ್ಟ್‌ ಹೇಳಿದೆ.

accident without ISI helmet will not get insurance:High court

'ಹೆಲ್ಮೆಟ್ ಧರಿಸುವುದು ಎಂದರೆ ನೆಪ ಮಾತ್ರಕ್ಕೆ ಯಾವುದೊ ಒಂದು ಹೆಲ್ಮೆಟ್ ಅನ್ನು ಹಾಕಿಕೊಳ್ಳುವುದಲ್ಲ. ಮೋಟಾರು ವಾಹನ ಕಾಯ್ದೆ-1988ಕ್ಕೆ (ಕೆಎಂವಿ) ಸಂಬಂಧಿಸಿದ ನಿಯಮ 230ರ ಪ್ರಕಾರ ರಕ್ಷಣಾತ್ಮಕ ಹೆಲ್ಮೆಟ್‌ ಅನ್ನೇ ಧರಿಸಬೇಕು. ಹೆಲ್ಮೆಟ್‌ ಮೇಲೆ ಇಂಡಿಯನ್‌ ಬ್ಯೂರೊ ಆಫ್‌ ಸ್ಟ್ಯಾಂಡರ್ಡ್‌ ಸಂಖ್ಯೆ ಐಎಸ್‌ಐ 4151: 1993 ಮುದ್ರೆಯೇ ಇರಬೇಕು' ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಸಂಕ್ರಾಂತಿ ವಿಶೇಷ ಪುಟ

ಹೆಲ್ಮೆಟ್ ತಯಾರಿಕಾ ಕಂಪೆನಿಗಳಿಗೂ ಸೂಚನೆಗಳನ್ನು ನೀಡಿರುವ ಹೈಕೋರ್ಟ್ 'ಹೆಲ್ಮೆಟ್‌ ಮೇಲೆ ತಯಾರಿಕಾ ಕಂಪನಿ ಹೆಸರು, ದಿನಾಂಕ, ವರ್ಷ ಹಾಗೂ ಗಾತ್ರದ ವಿವರ ನಮೂದಾಗಿರಬೇಕು. ಇದು ಅಳಿಸಿ ಹೋಗುವಂತಿರಬಾರದು. ಸುಲಭವಾಗಿ ಓದುವಂತಿರಬೇಕು' ಎಂದು ಹೇಳಿದೆ.

'ಕೆಎಂವಿ ಕಾಯ್ದೆ ಕಲಂ 129ರ ಅನುಸಾರ ದ್ವಿಚಕ್ರ ವಾಹನ ಚಾಲಕರು ಮತ್ತು ಹಿಂಬದಿ ಸವಾರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿರಬೇಕು. ಇದನ್ನು ಪರಿಶೀಲಿಸಬೇಕಾದ್ದು ಸಂಚಾರ ಪೊಲೀಸರ ಕರ್ತವ್ಯ' ಎಂದು ತಿಳಿಸಲಾಗಿದೆ.

ಪೊಲೀಸರಿಗೂ ಐಎಸ್ಐ ಪ್ರಮಾಣಿತ ಹೆಲ್ಮೆಟ್ ಕಡ್ಡಾಯ: ಇಲಾಖೆ ಸುತ್ತೋಲೆ

ಪಾವಗಡ ತಾಲ್ಲೂಕಿನ ಓಬಳಾಪುರ ಗ್ರಾಮದ ಎನ್‌.ನರೇಶ್‌ ಬಾಬು ಮತ್ತು ಸಿ.ವಿ.ಜಯಂತ್‌ ಎಂಬುವರು 2014ರ ಮೇ 20ರಂದು ಬಜಾಜ್‌ ಪಲ್ಸರ್‌ ಬೈಕ್‌ನಲ್ಲಿ ಹೋಗುತ್ತಿರುವಾಗ ಬಸ್‌ ಡಿಕ್ಕಿಯಾಗಿ ಅಪಘಾತಕ್ಕೆ ಒಳಗಾಗಿದ್ದರು. ಅವರಿಗೆ ಪರಿಹಾರವಾಗಿ ವಿಮಾ ಕಂಪನಿ ₹2.58 ಲಕ್ಷ ನೀಡಬೇಕು ಎಂದು ಮಧುಗಿರಿಯ ಪ್ರಧಾನ ಸಿವಿಲ್‌ ನ್ಯಾಯಾಧೀಶರಾದ ಸುಜಾತಾ ಎಂ. ಸಾಂಬ್ರಾಣಿ ಆದೇಶಿಸಿದ್ದರು. ಇದನ್ನು ವಿಮಾ ಕಂಪೆನಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಆ ಪ್ರಕರಣದ ತೀರ್ಪನ್ನು ಹೈಕೋರ್ಟ್ ನೀಡಿದೆ.

'ಯಾವುದೇ ಒಬ್ಬ ವ್ಯಕ್ತಿ ಕಾನೂನು ಪಾಲಸಿದೆ ಅಪಘಾತದಲ್ಲಿ ಗಾಯಗೊಂಡರೆ ಅಂತಹವರ ವಿರುದ್ಧ ಕಾನೂನು ಕ್ರಮ ಅನಿವಾರ್ಯ' ಎಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.

'ಈ ನಿಯಮ ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ- ಧಾರವಾಡ, ಕಲಬುರ್ಗಿಯಲ್ಲಿ ಮಾತ್ರವೇ ಅನ್ವಯವಾಗುತ್ತಿತ್ತು. ಆದರೆ, ಹೆಲ್ಮೆಟ್ ಕಡ್ಡಾಯ ಎಂಬ ನಿಯಮ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ವ್ಯಾಪ್ತಿಗೂ ಅನ್ವಯವಾಗುತ್ತದೆ' ಎಂದು ಹೇಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
High court said 'cant get insurance who did not use ISI marked helmets while driving. it also said if any person get accident while driving without seat belt is also not eligible to get insurance.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ